Cini NewsKollywoodSandalwood

ಮಲಯಾಳಂ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ ಅಭಿನಯದ ‘L367’ ಸಿನಿಮಾ ಅನೌನ್ಸ್‌.

Spread the love

ಶ್ರೀ ಗೋಕುಲಂ ಮೂವೀಸ್ ನಿರ್ಮಾಣದಲ್ಲಿ ಮೋಹನ್ ಲಾಲ್ ಅವರ ‘L367’ ಸಿನಿಮಾ ಅನೌನ್ಸ್‌ ಆಗಿದೆ. ಈ ಚಿತ್ರವನ್ನ ವಿಷ್ಣು ಮೋಹನ್ ನಿರ್ದೇಶನ ಮಾಡುತ್ತಿದ್ದು ಇದು ಮಲಯಾಳಂನ ಬಿಗ್‌ ಬಜೆಟ್‌ ಸಿನಿಮಾ ಆಗಲಿದೆ. ವಿಷ್ಣು ಮೋಹನ್‌ ಅವರು ತಮ್ಮ ಚೊಚ್ಚಲ ‘ಮೆಪ್ಪಡಿಯಾನ್’ ಚಿತ್ರದ ಮೂಲಕ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

L367 ಚಿತ್ರ ಶ್ರೀ ಗೋಕುಲಂ ಮೂವೀಸ್ ಇತಿಹಾಸದಲ್ಲಿಯೇ ಅತಿ ದೊಡ್ಡ ನಿರ್ಮಾಣಗಳಲ್ಲಿ ಒಂದಾಗಲಿದೆ. ಈ ಚಿತ್ರವನ್ನ ಬೈಜು ಗೋಪಾಲನ್ ಮತ್ತು ವಿ ಸಿ ಪ್ರವೀಣ್ ಸಹ-ನಿರ್ಮಿಸಲಿದ್ದಾರೆ. ಕೃಷ್ಣಮೂರ್ತಿ ಕಾರ್ಯಕಾರಿ ನಿರ್ಮಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬೃಹತ್ ಕ್ಯಾನ್ವಾಸ್ ಹೊಂದಿರುವ ಈ ಚಿತ್ರದಲ್ಲಿ ವಿದೇಶಿ ಕಲಾವಿದರ ಜೊತೆಗೆ ಬಾಲಿವುಡ್‌ನ ಪ್ರಮುಖ ನಟರು ಮತ್ತು ಉನ್ನತ ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ಸದ್ಯ ಸಿನಿಮಾ ಅನೌನ್ಸ್‌ ಮಾಡಿರೋ ಚಿತ್ರತಂಡ ಆದಷ್ಟು ಬೇಗ ಚಿತ್ರೀಕರಣ ಶುರು ಮಾಡುವ ಉತ್ಸಾಹದಲ್ಲಿದೆ.

ಶ್ರೀ ಗೋಕುಲಂ ಮೂವೀಸ್ ಪ್ರಸ್ತುತ ಸಾಲು ಸಾಲು ಸಿನಿಮಾಗಳನ್ನ ನಿರ್ಮಾಣ ಮಾಡುತ್ತಿದ್ದು ಅವುಗಳಲ್ಲಿ ಸುರೇಶ್ ಗೋಪಿ ಅವರ ಒಟ್ಟಕೊಂಬನ್, ಜಯರಾಮ್-ಕಾಳಿದಾಸ್, ಜಯರಾಮ್ ಅಭಿನಯದ ಆಶಕಲ್ ಆಯಿರಂ, ಜಯಸೂರ್ಯ ಅವರ ನಿವಿನ್ ಪೌಲಿ-ಬಿ ಉನ್ನಿಕೃಷ್ಣನ್ ಚಿತ್ರ ಕಥನರ್ ಮತ್ತು ಎಸ್ ಜೆ ಸೂರ್ಯ ನಿರ್ದೇಶನದ ಕಿಲ್ಲರ್ ಸೇರಿವೆ. L367 ಈ ಪಟ್ಟಿಗೆ ಸೇರ್ಪಡೆಗೊಳ್ಳುವುದರೊಂದಿಗೆ, ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳನ್ನ ನಿರ್ಮಾಣ ಮಾಡಲು ಮುಂದಾಗಿದೆ ಶ್ರೀ ಗೋಕುಲಂ ಮೂವೀಸ್.

Visited 1 times, 1 visit(s) today
error: Content is protected !!