ಚೌಕಿದಾರ್ ಟ್ರೇಲರ್ ಬಿಡುಗಡೆ ಮಾಡಿದ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಹೈಕೋರ್ಟ್ ವಕೀಲರು.
ಕುತೂಹಲ ಹೆಚ್ಚಿಸಿದ ‘ಚೌಕಿದಾರ್’ ಟ್ರೇಲರ್ ರಿಲೀಸ್ …ಕಾಡುವ ಕಥೆಯೊಂದಿಗೆ ಬಂದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ..ಇದೇ ತಿಂಗಳ 30ಕ್ಕೆ ಸಿನಿಮಾ ಬಿಡುಗಡೆ.
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಪೃಥ್ವಿ ಅಂಬಾರ್ ಹಾಗೂ ದೊಡ್ಮನೆ ಕುಡಿ ಧನ್ಯಾ ರಾಮ್ ಕುಮಾರ್ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಚೌಕಿದಾರ್. ಈಗಾಗಲೇ ಟೈಟಲ್ ಹಾಗೂ ಕಂಟೆಂಟ್ ಮೂಲಕ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಿನ್ನೆ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಪೊಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ ಗೌಡ ಹಾಗೂ ಹೈಕೋರ್ಟ್ ವಕೀಲರಾದ ಪ್ರವೀಣ್ ವಿಶೇಷ ಅತಿಥಿಯಾಗಿ ಆಗಮಿಸಿ ಇಡೀ ತಂಡಕ್ಕೆ ಶುಭಾ ಹಾರೈಸಿದರು.

ಟ್ರೇಲರ್ ಬಿಡುಗಡೆ ಬಳಿಕ ಪೊಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ ಗೌಡ ಮಾತನಾಡಿ, ಗಡಿಯಲ್ಲಿ ದೇಶವನ್ನು ಸೈನಿಕರು ಕಾಯುತ್ತಾರೆ. ಅದೇ ರೀತಿ ಒಳ ಭಾಗದಲ್ಲಿ ಪೊಲೀಸರು ಕಾಯುತ್ತಾರೆ. ಕುಟುಂಬ ಅಂತಾ ಬಂದಾಗ ತಂದೆ ಎಂಬ ಚೌಕಿದಾರ್ ಕಾಯುತ್ತಾರೆ. ಅಂತಹ ಒಳ್ಳೆ ವಿಷಯ ಇಟ್ಕೊಂಡು ಮೂವೀ ಮಾಡಿದ್ದಾರೆ. ಟ್ರೇಲರ್ ನೋಡಿದಾಗ ತಂದೆ ತಾಯಿ ನೆನಪು ಬಂದರು. ನಾವು ಕೆಲಸ ಒತ್ತಡದಲ್ಲಿ ತಂದೆ ತಾಯಿ ಮರೆತುಬಿಟ್ಟಿದ್ದೇವು. ಅವರು ಇಲ್ಲದಾಗ ಅವರ ಪ್ರೀತಿ ಗೊತ್ತಾಗುತ್ತದೆ. ಚೌಕಿದಾರ್ ಇಡೀ ತಂಡಕ್ಕೆ ಒಳ್ಳೆದಾಗಲಿ. ಈ ಸಿನಿಮಾ ಶತ ದಿನ ಆಚರಿಸಲಿ ಎಂದರು.

ಹೈಕೋರ್ಟ್ ವಕೀಲರಾದ ಪ್ರವೀಣ್ ಮಾತನಾಡಿ, ಟ್ರೇಲರ್ ನೋಡಿದ್ರೆ ಟೀಂ ವರ್ಕ್ ಎಷ್ಟಿದೆ ಅನ್ನೋದು ಗೊತ್ತಾಗುತ್ತದೆ. ಒಂದು ಸಿನಿಮಾ ನಿರ್ದೇಶಕನ ಕನಸಾದರೆ, ನಿರ್ಮಾಪಕನಿಗೆ ಅದು ಕೂಸು. ಈ ಚಿತ್ರದ ನಿರ್ಮಾಪಕ ಕಲ್ಲಹಳ್ಳಿ ಚಂದ್ರಶೇಖರ್ ಎಲ್ಲ ಬೇಕುಗಳನ್ನು ಚಿತ್ರಕ್ಕೆ ನೀಡಿದ್ದಾರೆ. ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಬುದ್ದಿವಂತಿಕೆಯುಳ್ಳವರು. ಈ ಚಿತ್ರದ ಮೂಲಕ ಹೊಸದನ್ನು ಕೊಡಲು ಹೊರಟಿದ್ದಾರೆ. ಚೌಕಿದಾರ್ ಸಿನಿಮಾ ಶತದಿನ ಹಾರೈಸಲಿ ಎಂದರು.

ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಮಾತನಾಡಿ, ನಾನು ಏನ್ ಹೇಳಬೇಕು ಅದನ್ನು ಸಿನಿಮಾದಲ್ಲಿ ತೋರಿಸಿದ್ದೇನೆ. ಮ್ಯೂಸಿಕ್ ಸಚಿನ್ ಬಸ್ರೂರ್ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್, ಸಂತೋಷ್ ನಾಯಕ್, ಪ್ರಮೋದ್ ಮರವಂತೆ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಚೌಕಿದಾರ್ ಅಂದರೆ ಪ್ರೊಟೆಕ್ಟರ್. ಈ ಟೈಟಲ್ ರಾಜಕೀಯಕ್ಕೆ ಸಂಬಂಧವಿಲ್ಲ. ಇದೇ ತಿಂಗಳ 30ರಂದು ಸಿನಿಮಾ ತೆರೆಗೆ ಬರಲಿದೆ. ನಿಮ್ಮ ಹಾರೈಕೆ ಇರಲಿ ಎಂದರು.

ನಾಯಕ ಪೃಥ್ವಿ ಅಂಬಾರ್ ಮಾತನಾಡಿ, ನಮ್ಮ ಚಿತ್ರದ ಚೌಕಿದಾರ್ ನಿರ್ದೇಶಕರು. ಪ್ರತಿಯೊಂದನ್ನು ನನಗೆ ಗೈಡ್ ಮಾಡಿದ್ದಾರೆ. ಏನೇ ಕ್ರೆಡಿಟ್ ಬಂದರು ಅದು ಅವರಿಗೆ ಸಲ್ಲಬೇಕು. ಸರ್ ಸ್ಟ್ರೀಪ್ಟ್ ಓದಿದಾಗ ನನ್ನ ಲೈಫ್ ನಲ್ಲಿ ನಾನು ಬದಲಾವಣೆ ಮಾಡಿಕೊಂಡಿದ್ದೇನೆ. ಸಾಯಿಕುಮಾರ್ ಸರ್ ಈ ಚಿತ್ರದ ನಿಜವಾದ ನಾಯಕ. ಸಿನಿಮಾ ಬರೀ ಎಂಟರ್ಟೈನ್ಮೆಂಟ್ ವಿಷಯವಾಗಿ ಇರದೇ, ಅದು ಒಂದಷ್ಟು ಆಲೋಚನೆ ಜನರನ್ನು ಮೂಡಿಸುವ ಕೆಲಸವನ್ನು ಚೌಕಿದಾರ್ ಸಿನಿಮಾ ಮಾಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚೌಕಿದಾರ್ ಸಿನಿಮಾ ಮೂಲಕ ಚಂದ್ರಶೇಖರ್ ಬಂಡಿಯಪ್ಪ ಕಾಡುವ ಕಥೆಯನ್ನು ಹೇಳಲು ಹೊರಟಿದ್ದಾರೆ. ಅಪ್ಪ ಮಗನ ಬಾಂಧವ್ಯವನ್ನು ಈ ಚಿತ್ರದಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಚೌಕಿದಾರ್ನಲ್ಲಿ, ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ಹಿರಿಯ ನಟ ಸಾಯಿ ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚೈತ್ರದ ಪ್ರೇಮಾಂಜಲಿ ಚಿತ್ರದ ನಾಯಕಿ ಶ್ವೇತಾ, ಸುಧಾರಾಣಿ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ, ಧರ್ಮ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
ವಿಎಸ್ ಎಂಟರ್ಟೈನ್ಮೆಂಟ್ ಬ್ಯಾನರ್ನಡಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದು ಕಂಚನಹಳ್ಳಿ ಛಾಯಾಗ್ರಹಣ,ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಮುರುಳಿ ಮಾಸ್ಟರ್ ಕೊರಿಯೋಗ್ರಾಫಿ ಮಾಡಿದ್ದಾರೆ. ಜ್ಞಾನೇಶ್ ಮಾತಾಡ್ ಸಂಕಲನ ನಿರ್ವಹಿಸಿದ್ದರೆ, ಜೈ ಸುಬ್ರಹ್ಮಣ್ಯ ಅವರ ಸಾಹಸ ದೃಶ್ಯಗಳು ಈ ಚಿತ್ರಕ್ಕಿದೆ. ಇದೇ ಜನವರಿ 30ರಂದು ಚೌಕಿದಾರ್ ತೆರೆಗೆ ಬರಲಿದೆ.