Cini NewsSandalwoodTV Serial

“ಕರಿಕಾಡ” ದಲ್ಲಿ ಬಾಲಿವುಡ್ ಬಿಗ್ ಬಾಸ್ ಕೃತಿ ವರ್ಮಾ ಮಸ್ತ್ ಸ್ಟೆಪ್.

Spread the love

ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ ಪಡ್ಡೆ ಹುಡುಗರ ಹೃದಯವನ್ನು ಕದಿಯುವಂತ ಮಸ್ತ್ ಹಾಡು ಹೊರಬಂದಿದೆ. ಇತ್ತೀಚಿಗೆ ನಗರದ ಜನಾಕರ್ಷಣೆ ಕೇಂದ್ರವಾದ ಮಾಲ್ ಆಫ್ ಏಷ್ಯಾದ ಓಪನ್ ಸ್ಪೇಸ್ ನಲ್ಲಿ “ಕರಿಕಾಡ” ಚಿತ್ರದ ಐಟಂ ‘ರತುನಿ’ ಹಾಡು ಅದ್ದೂರಿಯಾಗಿ ಬಿಡುಗಡೆ ಆಗಿದೆ. ಈ ಕರಿಕಾಡ ರತುನಿಯಾಗಿ ಬಾಲಿವುಡ್ ಬಿಗ್ ಬಾಸ್ ಕೃತಿ ವರ್ಮಾ ಮಸ್ತ್ ಸ್ಟೆಪ್ ಹಾಕಿದ್ದಾರೆ. ಈಗಾಗಲೇ ಕರಿಕಾಡ ಟೈಟಲ್‌ನಿಂದಲೇ ಗಮನ ಸೆಳೆಯುತ್ತಿರುವ ಸಿನಿಮಾ. ವಿಭಿನ್ನಾವಾದ ಕಥಹಂದರ. ಇದೊಂದು ಮ್ಯೂಸಿಕಲ್ ಜರ್ನಿಯ ಜೊತೆಗೆ ಅಡ್ವೆಂಚರಸ್ ಎಲಿಮೆಂಟ್ಸ್ ಇಟ್ಟುಕೊಂಡು ಮಾಡಿರುವ ಸಿನಿಮಾ. ಮೂರು ತಿಂಗಳ ಹಿಂದೆ ಟೈಟಲ್ ಟೀಸರ್ ರಿಲೀಸ್ ಮಾಡಿ ಕರಿಕಾಡ ಚಿತ್ರತಂಡ ಸದ್ದು ಮಾಡಿತ್ತು. ಇದೀಗ ರತುನಿ ರತುನಿ ಹಾಡಿನ ಮೂಲಕ ಗಮನ ಸೆಳೆದಿದೆ.

ಯುವ ಪ್ರತಿಭೆಗಳ ಕರಿಕಾಡ ಸಿನಿಮಾದ ಟೀಸರ್ ಹೊಸ ಭರವಸೆ ಹುಟ್ಟಿಸಿದೆ. ಸಾಹಸಮಯ ದೃಶ್ಯಕಾವ್ಯವಾಗಿ, ಪ್ರೇಮಕಥೆಯ ರೂಪಕವಾಗಿ, ನಮ್ಮ ಮಣ್ಣಿನ ಸೊಗಡನ್ನ ಸೂಸುವಂತಹ ಕಥಾಹಂದರ ಹೊಂದಿದೆ. ಇಷ್ಟೇ ಅಲ್ಲದೆ ಇದೊಂದು ರಿವೇಂಜ್ ಸ್ಟೋರಿಯಂತೆ ಎದ್ದು ಕಾಣುತ್ತಿದೆ. ಇಷ್ಟೇ ಅಲ್ಲದೆ ಸಿನಿಮಾ ಕಥೆಯ ಜೊತೆಗೆ ತಾಂತ್ರಿಕತೆಯಲ್ಲಿಯೂ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ಕಾಡ ನಟರಾಜ್ ನಾಯಕ ನಟನಾಗಿ ನಟಿಸಿದ್ದಾರೆ. ಇವರೊಂದಿಗೆ ಪ್ರಮುಖ ಪಾತ್ರದಲ್ಲಿ ಬಲರಾಜವಾಡಿ , ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತುಳು ಚಿತ್ರರಂಗದ ಚೆಲುವೆ ನಿರೀಕ್ಷಾ ಶೆಟ್ಟಿ ನಾಯಕಿಯಾಗಿದ್ದಾರೆ. ಉಳಿದಂತೆ ಈ ಸಿನಿಮಾದಲ್ಲಿ ಮಂಜು ಸ್ವಾಮಿ, ಗೋವಿಂದ ಗೌಡ , ದೀವಾಕರ್, ಕಾಮಿಡಿ ಕಿಲಾಡಿ ಸೂರ್ಯ, ದಿ.ರಾಕೇಶ್ ಪೂಜಾರಿ, ವಿಜಯ್ ಚಂಡೂರು, ಚಂದ್ರಪ್ರಭ, ಕರಿಸುಬ್ಬು, ಗಿರಿ, ಮಾಸ್ಟರ್ ಆರ್ಯನ್, ಬಾಲನಟಿ ರಿದ್ಧಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಇನ್ನು ಈ ಸಿನಿಮಾವನ್ನು ರಿದ್ಧಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್‌ನಲ್ಲಿ ಕಾಡ ನಟರಾಜ್ ಅವರ ಪತ್ನಿ ದೀಪ್ತಿ ದಾಮೋದರ್ ನಿರ್ಮಾಣ ಮಾಡಿದ್ದಾರೆ. ಪತಿಯ ಕನಸಿನ ಈ ಸಿನಿಮಾ ಮೂಲಕ ಈಡೇರಿಸಿದ್ದಾರೆ. ಇನ್ನು ಇವರ ಕನಸಿಗೆ ಸ್ನೇಹಿತ ರವಿಕುಮಾರ್ ಎಸ್.ಆರ್ ಸಹ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಕರಿಕಾಡ ಸಿನಿಮಾವನ್ನು ಗಿಲ್ಲಿ ವೆಂಕಟೇಶ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಹೀರೋ ಕಾಡ ನಟರಾಜ ಅವರೇ ಸಿನಿಮಾಗೆ ಕಥೆ ಬರೆದಿದ್ದಾರೆ. ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ಕಂಪೋಸ್ ಮಾಡಿದ್ದಾರೆ. ಶಶಾಂಕ್ ಶೇಷಾಗರಿ ಅವರು ರಾಗ ಸಂಯೋಜನೆ ಜೊತೆಗೆ ಜಬರ್ದಸ್ತ್ ಹಿನ್ನಲೆ ಸಂಗೀತವನ್ನ ನೀಡಿದ್ದಾರೆ. ಜೀವನ್ ಗೌಡ ಕೆಲಸ ಕ್ಯಾಮರಾವರ್ಕ್ ಇದ್ದರೆ, ದೀಪಕ್ ಸಿ.ಎಸ್ ಸಂಕಲನವಿದೆ.

ಮಾಲ್ ಆಫ್ ಏಷ್ಯಾದಲ್ಲಿ ರತುನಿ ರತುನಿ ಹಾಡನ್ನ ಬಿಡುಗಡೆ ಮಾಡಿದೆ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಹಾಡಿಗೆ ಹೆಜ್ಜೆ ಹಾಕಿರೋದು ಬಾಲಿವುಡ್ ಮಾದಕ ಬೆಡಗಿ ಕೃತಿ ವರ್ಮಾ ಕಾರ್ಯಕ್ರಮ ಉದ್ದೇಶಿಸಿ ಮಾತಾನಾಡಿದ
ಯಶ್ ಶೆಟ್ಟಿ, ವಿಜಯ್ ಕರಿಕಾಡ ಹಬ್ಬ ನಡಿತಿದೆ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ ನಿಮ್ಮೆಲ್ಲರ ಆಶೀರ್ವಾದ ಇರಬೇಕು ಅಂದ್ರು ತುಂಬಾ ಇಷ್ಟಪಟ್ಟು ಕಷ್ಟಪಟ್ಟು ಮಾಡಿರೋದು ತುಂಬಾ ಕನಸು ಇಟ್ಕೊಂಡಿದ್ದೀವಿ ಎಂದ್ರು. ಗಾಯಕ ಕಂಪೋಸರ್ ಅತಿಷಯ್ ಜೈನ್ ಮಾತಾನಾಡಿ ಒಳ್ಳೆ ರೆಸ್ಪಾನ್ಸ್ ಬಂದಿದೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ನಿಮ್ಮ ಸಪೋರ್ಟ್ ನಮ್ಮ ಟೀಂ ಮೇಲೆ ಇರಬೇಕು ಎಂದು ಸಂತಸ ವ್ಯಕ್ತಪಡಿಸಿದ್ರು.

ಮುಖ್ಯ ಭೂಮಿಕೆಯಲ್ಲಿ ನಟಿಸಿರೋ ಕಾಡ ನಟರಾಜ್ ನಿರೀಕ್ಷ ಶೆಟ್ಟಿ ಕಬ್ಬಿನ ಜಲ್ಲೇ ಇಷ್ಟ ಆಯ್ತು ಹಾರ್ಡ್ ವರ್ಕ್ ಇತ್ತು ಎಲ್ಲದು ಸಸ್ಪೆನ್ಸ್ ಆಗೇ ಇರುತ್ತೆ. ಆಡಿಯನ್ಸ್ ಎಂಜಾಯ್ ಮಾಡಬೇಕು ಸಾಂಗ್ ಟೈಟಲ್ ಟೀಸರ್ ನೋಡಿ ಏನೂ ನಿರೀಕ್ಷೆ ಮಾಡೋಕಾಗಲ್ಲ ಏನೋ ಬೇರೆ ಇದೆ ನೋಡಿ ಅಂತ ಹೇಳಿದ್ರು. ರೋಡೀಸ್ ಬಿಗ್ ಬಾಸ್ 12 ಕಂಟಸ್ಟಂಟ್ ಕೃತಿ ವರ್ಮಾ ಮಾತಾನಾಡಿ ಹಾಡು ಹೇಗಿತ್ತು ಅಂತ ನೆರೆದಿದ್ದ ಆಡಿಯನ್ಸ್ ಗೆ ಕೇಳಿದ್ರು, ಫಸ್ಚ್ ಟೈಮ್ ಎಕ್ಸ್ ಪೆರಿಮೆಂಟ್ ಎಲ್ರಿಗೂ ಥ್ಯಾಂಕ್ಸ್ ಹೇಳ್ತೀನಿ ಲವ್ಲಿ ಎಕ್ಸ್ ಪ್ರಿಮೆಂಟ್ ನನಗೆ ಆಶೀರ್ವಾದ ಮಾಡಿ ಇನ್ನು ಕನ್ನಡದಲ್ಲಿ ಇನ್ನು ಸಿನಿಮಾ ಮಾಡ್ತೀನಿ ಎಂದರು.

ಗಾಯಕ ಶಾಶಾಂಕ್ ಶೇಷಗಿರಿ ಕಾರಿಕಾಡ ತಂಡಕ್ಕೆ ನಿಮ್ಮ ಆಶೀರ್ವಾದ ಬೇಕು ಮೂರು ಹಾಡು ಹಾಡಿದ್ದೀನಿ ಎಲ್ಲರ ಆಶೀರ್ವಾದ ತಂಡಕ್ಕೆ ಇರಲಿ ಬಹಳ ಅದ್ಬುತವಾದ ಎಲ್ಲ ಭಾಷೆಯ ಸಿಂಗರ್ ಹಾಡಿದ್ದಾರೆ ಎಲ್ಲ ದೊಡ್ಡ ಸಿಂಗರ್ಸ್ ಹಾಡಿದ್ದಾರೆ. ಕನ್ನಡದ ಹಾಡಿಗೆ ನಾಗೇಂದ್ರ ಪ್ರಸಾದ್ ಅವ್ರು ಲಿರಿಕ್ಸ್ ಬರೆದಿರೋದು ಎಂದರು. ಕೊನೆಯದಾಗಿ ಸಿನಿಮಾದ ನಿರ್ದೇಶಕ ಮಾತಾನಾಡಿ ಹಾಡಿಂದ ಶುರು ಮಾಡಿದ್ರು ಒಟ್ಟಾಗಿ ಒವರ್ ಆಲ್ 7 ಸಾಂಗ್ ಇದೆ ತುಂಬಾ ಖುಷಿ ಇದೆ. ನಮ್ಮ ಸಿನಿಮಾ ಬೇರೆ ಕಡೆನೂ ರಿಲೀಸ್ ಆಗ್ತಿದೆ ಅಂತ ಸಂತಸ ವ್ಯಕ್ತಪಡಿಸಿದ್ರು. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದ್ದು , ತೆರೆ ಮೇಲೆ ಬರುವುದಕ್ಕೆ ಚಿತ್ರ ತಂಡದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Visited 1 times, 1 visit(s) today
error: Content is protected !!