ಸರಕಾರಿ ಶಾಲೆ ಉಳಿವಿಗೆ ವಿದ್ಯಾರ್ಥಿಗಳೇ ಶಕ್ತಿ… “kite ಬ್ರದರ್ಸ್” ಚಿತ್ರವಿಮರ್ಶೆ (ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : kite ಬ್ರದರ್ಸ್
ನಿರ್ದೇಶಕ : ವಿರೇನ್ ಸಾಗರ್ ಬಗಾಡೆ
ನಿರ್ಮಾಪಕರು: ಮಂಜುನಾಥ್ ಬಿ.ಎಸ್, ರಜನಿಕಾಂತ್ ರಾವ್, ಮಂಜುನಾಥ್ ಬಗಾಡೆ
ಸಂಗೀತ : ಅನೀಶ್ ಚೆರಿಯನ್
ಛಾಯಾಗ್ರಹಣ : ಅಶೋಕ್ ಕಶ್ಯಪ್
ತಾರಾಗಣ : ಪ್ರಣಿಲ್ ನಾಡಗೀರ್, ಸಮರ್ಥ ಆಶಿ, ವಿನೋದ್ ಬಗಾಡೆ, ಅನಂತ ದೇಶಪಾಂಡೆ, ಪ್ರಭು ಹಂಚಿನಾಳ, ಶ್ರೇಯಾ ಹರಿಹರ, ರಾಜೀವ್ ಸಿಂಗ್ ಹಲವಾಯಿ ಹಾಗೂ ಮುಂತಾದವರು…
ವಿದ್ಯೆ ಸಾಧಕನ ಸ್ವತ್ತೆ ಹೊರತು.. ಸೋಮಾರಿಯ ಸ್ವತ್ತಲ್ಲ… ವಿದ್ಯ ಬಲ್ಲವನು… ಜಗವನ್ನೇ ಗೆಲ್ಲಬಲ್ಲ… ವಿದ್ಯೆಗಿಂತ ಅಮೂಲ್ಯವಾದ ವಸ್ತು ಬೇರೊಂದಿಲ್ಲ… ಎಂಬ ನುಡಿಮುತ್ತು ಅಕ್ಷರ ಸಹ ಸತ್ಯ ಎನ್ನಬೇಕು. ಯಾಕೆಂದರೆ ವಿದ್ಯೆ ನಮ್ಮ ದೇಶದ ಶಕ್ತಿ ಮತ್ತು ಸಂಪತ್ತು. ಅದರಲ್ಲೂ ಗ್ರಾಮೀಣ ಭಾಗದ ಶಾಲೆಗಳಲ್ಲಿ ಮೂಲ ಸೌಲಭ್ಯದ ಕೊರತೆ , ವಿದ್ಯಾರ್ಥಿಗಳ ಸಂಖ್ಯೆ ವಿರಳ , ಕಟ್ಟಡದ ದುರಸ್ತಿ ಹೀಗೆ ಹಲವಾರು ಸಮಸ್ಯೆ.
ಇಂತದ್ದೇ ಒಂದು ಗ್ರಾಮದ ಹಿನ್ನೆಲೆಯಲ್ಲಿ ಕಾಣುವ ಸಮಸ್ಯೆಗೆ ಏನೆಲ್ಲ ದಾರಿ ಕಾಣಬಹುದು ಎಂಬ ಸೂಕ್ಷ್ಮತೆಯೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಕೈಟ್ ಬ್ರದರ್ಸ್”. ಧಾರವಾಡ ಸಮೀಪ ಹೊನ್ನಾಪುರ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾದ ಹನುಮಂತು , ಪೆಟ್ಲ್ಯಾ , ಗೆಜ್ಜಿ, ಬಾಬ್ಯ, ಬೇಡ್ಯ ಸಾಬ್ ಹಾಗೂ ಇನ್ನುಳಿದವರು ಹಿರಿಯ ಮೇಷ್ಟ್ರು ಕಲಿಕೆಯ ಜೊತೆ ಆಟ ಪಾಠದಲ್ಲೂ ತೊಡಗುಕೊಳ್ಳುತ್ತಾರೆ.
ಇನ್ನು ಹನುಮಂತನ ತಂದೆ ಪಟ (ಗಾಳಿಪಟ) ಮಾಡುವುದೇ ಕಾಯಕ. ಬಡಸ್ಥಿತಿ ಬದುಕಲೇ ಜೀವನ. ಇನ್ನು ಅನುಕೂಲ ಕುಟುಂಬದಲ್ಲಿ ಹುಟ್ಟಿದಂತಹ ಇದೇ ವಯಸ್ಸಿನ ರಾಮ ವಿದ್ಯಾಭ್ಯಾಸದಲ್ಲಿ ಮುಂದು, ಆದರೆ ಯಾವುದೇ ಭೇದ ಭಾವವಿಲ್ಲದೆ ಹನುಮಂತುನ ಜೊತೆ ರಾಮನ ಸಂಗಡ ಇರುತ್ತದೆ. ಆಟ ಪಾಠದಲ್ಲಿ ಜೊತೆಯಾಗಿ ಸಾಗಿದರು ಒಂದಷ್ಟು ತಾರತಮ್ಯ ಇಬ್ಬರ ಗಮನಕ್ಕೂ ಬರುತ್ತದೆ.

ಇದರ ನಡುವೆ ಜೋರು ಮಳೆಯಿಂದ ಶಾಲೆ ಕಟ್ಟಡ ಕುಸಿದು ಹನುಮಂತನ ವಿದ್ಯಾಭ್ಯಾಸ ನಿಲ್ಲುತ್ತದೆ. ಕಟ್ಟಡ ಸರಿಯಾಗುವುದಕ್ಕೆ ಸರಕಾರದ ನಿಯಮ , ಆದೇಶದವರೆಗೂ ಕಾಯಬೇಕು. ಇದರ ನಡುವೆ ಒಮ್ಮೆ ಪತ್ರಿಕೆಯಲ್ಲಿ ಅಚಾನಕ್ಕಾಗಿ ರಾಮನ ಕಣ್ಣಿಗೆ ದೂರದ ಅಮದಾಬಾದ್ ನಲ್ಲಿ ಗಾಳಿಪಟ ಸ್ಪರ್ಧೆ ವಿಚಾರದ ಬಗ್ಗೆ ಓದುತ್ತಾನೆ.
ಸ್ಪರ್ಧೆಯಲ್ಲಿ ಗೆದ್ದರೆ ಹಣ ಸಿಗುತ್ತೆ , ಶಾಲೆ ದುರಸ್ತಿ ಮಾಡಬಹುದು ಎಂಬ ಆಸೆಯೊಂದಿಗೆ ಯಾರಿಗೂ ತಿಳಿಸದೆ ಹನುಮಂತನ ಜೊತೆ ಬೆಂಗಳೂರಿಗೆ ಬಂದು ಪರದಾಡುತ್ತಾರೆ , ಆಗ ಬರಹಗಾರರ ಒಬ್ಬರ ಸಹಕಾರ ಸಿಕ್ಕಿ, ಇಲ್ಲಿಂದ ಕತೆಯಲ್ಲಿ ಬೇರೆಯದೇ ದಾರಿ ಪಡೆಯುತ್ತದೆ. ಇತ್ತ ಮನೆಯವರ ಆತಂಕ… ಹುಡುಗರಿಗೆ ಸ್ಪರ್ಧೆ ಗೆಲ್ಲುವ ಆಸೆ… ಶಾಲೆಯ ದುರಸ್ತಿ ಆಗುತ್ತೋ.. ಇಲ್ಲವೋ.. ಮಕ್ಕಳ ಭವಿಷ್ಯ ಏನಾಗುತ್ತೆ ಎಂಬ ಎಲ್ಲಾ ಪ್ರಶ್ನೆಯ ಉತ್ತರಕ್ಕೆ ಒಮ್ಮೆ ಈ ಚಿತ್ರವನ್ನು ನೋಡಬೇಕು.
ಇದೊಂದು ಸಮಾಜಕ್ಕೆ ಸಂದೇಶ ನೀಡುವಂತಹ ಚಿತ್ರವಾಗಿದ್ದು , ಹಳೆಯ ಸರ್ಕಾರಿ ಶಾಲೆಗಳನ್ನು ಸರ್ಕಾರವೇ ದುರಸ್ತಿ ಮಾಡಿಸಲಿ ಎಂದು ಕಾಯದೆ , ಅದೇ ಶಾಲೆಯಲ್ಲಿ ಕಲಿತು ಅನುಕೂಲವಾಗಿದ್ದವರು , ಆ ಶಾಲೆಯ ಬಗ್ಗೆ ಹೆಚ್ಚು ಗಮನ ಕೊಟ್ಟು ಶಾಲೆಯನ್ನು ಸರಿಪಡಿಸಿ ಮುಂದಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡುವ ಮನಸ್ಥಿತಿ ಇರಬೇಕು ಎಂಬುದನ್ನು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕ ವಿರೇನ್ ಸಾಗರ್ ಬಗಾಡೆ. ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತ ಮಾಡಬಹುದಿತ್ತು.
ಇಂತಹ ಜಾಗೃತಿ ಮೂಡಿಸುವ ಚಿತ್ರಕ್ಕೆ ಹಣ ಹೂಡಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು. ಸಂಗೀತ , ಛಾಯಾಗ್ರಹಣ , ಸಂಕಲನ ತಕ್ಕ ಮಟ್ಟಿಗೆ ಮೂಡಿ ಬಂದಿದ್ದು , ವಿದ್ಯಾರ್ಥಿಗಳ ಪಾತ್ರ ಮಾಡಿರುವ ಎಲ್ಲಾ ಪ್ರತಿಭೆಗಳು ಬಹಳ ಸೊಗಸಾಗಿ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನುಳಿದಂತೆ ಬಂದಿರುವ ಪೋಷಕ ಪಾತ್ರಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ.
ಒಟ್ಟಾರೆ ಹೇಳಬೇಕಾದರೆ ರೈಟ್ ಬ್ರದರ್ಸ್ ಅವರು ಹೀಗೆ ಫ್ಲೈಟ್ ಇಂಜಿನಿಯರಿಂಗ್ ನಲ್ಲಿ ಆವಿಷ್ಕಾರ ಮಾಡಿದ್ದಾರೋ… ಇಲ್ಲಿ ಇಬ್ಬರು ವಿದ್ಯಾರ್ಥಿಗಳು ದೂರದ ಅಹಮದಾಬಾದ್ ನಲ್ಲಿ ನಡೆಯುವ ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸಿ ಕೈಟ್ ನಲ್ಲಿ ಮಾಡುವ ಸಾಧನೆ ಹಾಗೂ ರೋಚಕ ತಿರುವು ಹೇಗೆ ಜಾಗೃತಿ ಮೂಡಿಸುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ಅಚ್ಚುಕಟ್ಟಾಗಿ ತೆರೆದಿಟ್ಟಿದ್ದು , ಎಲ್ಲರೂ ಒಮ್ಮೆ ನೋಡುವಂತಿದೆ.