Cini NewsSandalwood

”I am god” ಚಿತ್ರದ ಟ್ರೇಲರ್‌ ಗೆ ರಿಯಲ್‌ ಸ್ಟಾರ್‌ ಉಪೇಂದ್ರ ಸಾಥ್.

ಶಿಷ್ಯನ ಸಿನಿಮಾ ಟ್ರೇಲರ್ ಗೆ ಮೈಸೂರಿಗೆ ಬಂದ ರಿಯಲ್‌ ಸ್ಟಾರ್‌ ಉಪೇಂದ್ರ..ಹಾಡುಗಳಿಂದ ಸದ್ದು ಮಾಡ್ತಿರೋ I am god ಟ್ರೇಲರ್ ರಿಲೀಸ್‌.

I am god ರವಿ ಗೌಡ ನಿರ್ದೇಶನ ಮಾಡಿ, ಹೀರೋ ಆಗಿ ಮಿಂಚಿ ಜೊತೆಗೆ ನಿರ್ಮಾಣ ಮಾಡಿರುವ ಸಿನಿಮಾ. ಈಗಾಗಲೇ ಎರಡು ಹಾಡುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿರೋ I am god ಸಿನಿಮಾ ಸದ್ಯ ತೆರೆಗೆ ಬರಲು ಸಿದ್ದವಾಗಿದೆ… ರವಿ ಗೌಡ ಅಭಿನಯದ ಈ ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದೆ…

I am god ಅಂದ ತಕ್ಷಣ ನೆನಪಿಗೆ ಬರುವುದು ರಿಯಲ್ ಸ್ಟಾರ್ ಉಪೇಂದ್ರ.. ನಟ ರವಿ ಗೌಡ ಕೂಡ ಉಪೇಂದ್ರ ಅವರ ಗರಡಿಯಲ್ಲಿ ಪಳಗಿರುವ ಪ್ರತಿಭೆ… ಉಪ್ಪಿ ಅವರ ಜೊತೆ ಉಪ್ಪಿ 2 ಸಿನಿಮಾದಲ್ಲಿ ಕೆಲಸ ಮಾಡಿ ನಂತರ ತಾವೇ ನಿರ್ದೇಶನ ಮಾಡಬೇಕು ಎನ್ನುವ ಕನಸು ಕಂಡಿದ್ದರು. ಇದೀಗ I am god ಸಿನಿಮಾ ನಿರ್ದೇಶನದ ಜೊತೆಗೆ ನಟನೆಯನ್ನು ಮಾಡುವ ಮೂಲಕ ಕನಸು ನನಸು ಮಾಡಿಕೊಂಡಿದ್ದಾರೆ…

ಇರಿಗ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ ರವಿ ಗೌಡ.. ತಮ್ಮ ಗುರುಗಳು ಹಾಗೂ ನೆಚ್ಚಿನ ನಟ ಉಪೇಂದ್ರ ಕೈಯಲ್ಲೇ ಟ್ರೈಲರ್ ರಿಲೀಸ್ ಮಾಡಿಸಿದ್ದಾರೆ.

ಶಿಷ್ಯನ ಟ್ರೇಲರ್‌ ನೋಡಿ ರಿಯಲ್ ಸ್ಟಾರ್ ಸಿಕ್ಕಾಪಟ್ಟೆ ಮೆಚ್ಚುಗೆ ಪಡಿಸಿದರು.. ಮೈಸೂರಿನಲ್ಲಿ ನಡೆದ ಟ್ರೈಲರ್ ರಿಲೀಸ್ ಇವೆಂಟ್ ನಲ್ಲಿ ರಿಯಲ್ ಸ್ಟಾರ್, ನಟ ರವಿ ಗೌಡ ಉಪ್ಪಿ-2 ಸಿನಿಮಾ ಸಂದರ್ಭದಲ್ಲಿ ಎಷ್ಟು ಇಂಟ್ರೆಸ್ಟ್‌ ಕೊಟ್ಟು ಸಿನಿಮಾ ಬಗ್ಗೆ ಕಲಿತಿಕೊಳ್ತಿದ್ರು ಅನ್ನೋದನ್ನ ನೆನಪಿಸಿಕೊಂಡರು…

ಇದೇ ಸಮಯದಲ್ಲಿ ಮಾತನಾಡಿದ ನಾಯಕ ರವಿ ಗೌಡ, ಉಪ್ಪಿ ಸರ್‌ ಅವರನ್ನು ಮೊದಲು ಭೇಟಿ ಮಾಡಿದ ಸಂದರ್ಭ ವಿವರಿಸಿದರು. ‘ಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದಾಗ ಯಾವುದೇ ಸಿನಿಮಾ ಯೂನಿವರ್ಸಿಟಿ ಬೇಡ ಉಪ್ಪಿ ಸರ್‌ ಹತ್ತಿರ ಹೋಗೋದು ಬೆಸ್ಟ್‌ ಅಂತ ಹೋಗಿ ರಿಕ್ವೆಸ್ಟ್‌ ಮಾಡಿ ಸೇರಿಕೊಂಡೆ’ ಎಂದರು.. ಇದರ ಜೊತೆಗೆ ‘I’m God ಸಿನಿಮಾ ಕಷ್ಟ ಪಟ್ಟು ಮಾಡಿದ್ದೇವೆ ಬಂದು ನೋಡಿ ಅಂತ ನಾವು ಹೇಳಲ್ಲ.. ಆದರೆ ನಿಮ್ಮ ಗುಂಪಲ್ಲಿ ಪ್ರತಿ ಶುಕ್ರವಾರ ಕನ್ನಡ ಸಿನಿಮಾ ನೋಡುವ ಒಬ್ಬ ವ್ಯಕ್ತಿ ಅಂತು ಇದ್ದೇ ಇರ್ತಾರೆ ಅವರಿಗೆ ಕಾಲ್‌ ಮಾಡಿ ಕೇಳಿ I am god ಸಿನಿಮಾ ಹೇಗಿದೆ ಅಂತ ಅಷ್ಟೇ ಸಾಕು ನಮಗೆ’ ಅಂದರು..

ಸದ್ಯ ಬಿಡುಗಡೆ ಆಗಿರೋ I am god ಟ್ರೇಲರ್‌ ನೋಡಿದ್ರೆ ಇದೊಂದು ಪಕ್ಕ ‌ಸಸ್ಪೆನ್ಸ್ ಥ್ರಿಲ್ಲರ್ ಲವ್‌ ಸ್ಟೋರಿ ಎನ್ನುವ ಹಿಂಟ್‌ ಕೊಡ್ತಿದೆ.. ಉಪೇಂದ್ರ ಅವರ ಶಿಷ್ಯ ಆಗಿರೋದ್ರಿಂದ ಉಪ್ಪಿ ಸ್ಟೈಲ್‌ ಆಫ್‌ ಮೇಕಿಂಗ್‌ I am god ಸಿನಿಮಾದಲ್ಲೂ ನೋಡಬಹುದು ಅನ್ನೋದು ಟ್ರೇಲರ್‌ ನೋಡ್ತಿದ್ರೆ ಗೊತ್ತಾಗುತ್ತೆ.

ಇನ್ನು I am god ಸಿನಿಮಾದಲ್ಲಿ ರವಿಗೌಡಗೆ ನಾಯಕಿಯಾಗಿ ವಿಜೇತಾ ಕಾಣಿಸಿಕೂಂಡಿದ್ದಾರೆ. ಜೂತೆಗೆ ರವಿಶಂಕರ್‌ , ಅವಿನಾಶ್‌ , ಅರುಣ ಬಾಲರಾಜ್‌ ಹಾಗೂ ನಿರಂಜನ್‌ ಕುಮಾರ್‌ ಅಭಿನಯ ಮಾಡಿದ್ದಾರೆ…ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನ , ಜಿತಿನ್‌ ದಾಸ್‌ ಕ್ಯಾಮೆರಾವರ್ಕ್‌ ಮಾಡಿದ್ದಾರೆ. ಇದೇ ನವೆಂಬರ್‌ 7 ರಂದು ರಾಜ್ಯಾದ್ಯಂತ I am god ಸಿನಿಮಾ ತೆರೆಗೆ ಬರ್ತಿದೆ.

error: Content is protected !!