“ಪಟ್ಲಿ” ಚಿತ್ರದ ಟೈಟಲ್ ಮಾಸ್ ಲುಕ್ ಪೊಸ್ಟರ್ ರಿಲೀಸ್
ತಾರಕಸುರ, ಗಧಾದಾರಿ ಹನುಮಾನ್ ನಟ ರವಿಕಿರಣ್ ಈಗ ‘ಪಟ್ಲಿ’ ಕಾಳಗ ಕ್ಕೆ ಮುಂದಾಗಿದ್ದು, ಈ ಸಲ ಪ್ಯಾನ್ ಇಂಡಿಯಾ ಸಿನ್ಮಾಗೆ ಸಜ್ಜು ಆಗಿದ್ದಾರೆ. A Brutal War ಅನ್ನೋ ಅಡಿಬರಹವಿರೋ ಪಟ್ಲಿ ಟೈಟಲ್ ಮಾಸ್ ಲುಕ್ ಪೊಸ್ಟರ್ ರಿಲೀಸ್ ಮಾಡಿದ ಚಿತ್ರತಂಡ.
ರಾಕಿ ಸೋಮ್ಲಿ ನಿರ್ದೇಶನದಲ್ಲಿ ಸೆಟ್ಟೇರಲಿದೆ ಪಟ್ಲಿ ಚಿತ್ರ. ಗಧಾದಾರಿ ಹನುಮಾನ್ ನಿರ್ಮಿಸಿದ್ದ ವಿರಾಬ್ ಸ್ಟುಡಿಯೋಸ್ನ , ಬಸವರಾಜ್ ಹುರಕಡ್ಲಿ ಮತ್ತು ರೇಣುಕಾ ಪ್ರಸಾದ್ ಈ ಚಿತ್ರವನ್ನ ನಿರ್ಮಿಸ್ತಿದ್ದಾರೆ.
ಒಂದು ವರ್ಷದಿಂದ ಈ ಸಿನ್ಮಾದ ಕಥೆ ಮೇಲೆ ಕೆಲಸ ಮಾಡಿರೋ ಚಿತ್ರತಂಡ ದೊಡ್ಡ ಸ್ಕೇಲ್ ನಲ್ಲಿ ಸಿನಿಮಾ ಮಾಡಲು ಹೊರಟಿದೆ. ಕಥಾಹಂದರದ ಗುಟ್ಟು ಬಿಟ್ಟುಕೊಡದ ಚಿತ್ರತಂಡ ಟೈಟಲ್ ಪೋಸ್ಟರ್ ಡಿಸೈನ್ ನಿಂದ್ಲೇ ದೊಡ್ಡದಾಗಿ ಗಮನ ಸೆಳೆಯುತ್ತಿದೆ.
ಅಂದ್ಹಾಗೆ ಗಧಾದಾರಿ ಹನುಮಾನ್ ಸಿನಿಮಾ ರಿಲೀಸ್ ಆಗ್ತಿದಂತೆ ರವಿಕಿರಣ್ ಪಟ್ಲಿ ಕಾಳಗ ಸೆಟ್ಟೇರೋದು ಗ್ಯಾರೆಂಟಿಯಾಗಿದೆ. ಸದ್ಯಕ್ಕಿಷ್ಟು ಮಾತ್ರ ಮಾಹಿತಿ ಕೊಟ್ಟಿರೋ ಚಿತ್ರತಂಡ ಚಿತ್ರಕ್ಕೆ ಅಧಿಕೃತ ಚಾಲನೆ ಕೊಡುವ ಸಂದರ್ಭದಲ್ಲಿ ಉಳಿದ ಮಾಹಿತಿ ನೀಡಲಿದೆಯಂತೆ.