ಅಮೇಜಾನ್ ಪ್ರೈಮ್ ನಲ್ಲಿ ‘ರಿಪ್ಪನ್ ಸ್ವಾಮಿ’
ಎಷ್ಟೋ ಸಲ ಒಂದೊಳ್ಳೆ ಸಿನಿಮಾ ಬಂದಾಗ ನೋಡೋದಕ್ಕೆ ಸಮಯವಾಗದೆಯೋ, ಇನ್ನ್ಯಾವುದೋ ಒತ್ತಡದಿಂದಾನೋ ಆ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡುವುದನ್ನು ಮಿಸ್ ಮಾಡಿಕೊಂಡಿರುತ್ತೇವೆ. ಅಂಥ ಸಿನಿಮಾವೇ ರಿಪ್ಪನ್ ಸ್ವಾಮಿ. ಒಂದೊಳ್ಳೆ ಕಥೆ.. ಹಿಂದೆಂದು ಕಂಡಿರದ ವಿಜಯ್ ರಾಘವೇಂದ್ರ ಅವರ ರೂಪ.. ದೊಡ್ಡ ಪರದೆಯ ಮೇಲೆ ನೋಡಿದಾಗಲೇ ಅದರ ಥ್ರಿಲ್ ಮನಸ್ಸಿಗೆ ಸಿಕ್ತಾ ಇದ್ದದ್ದು. ಸದ್ಯ ಥಿಯೇಟರ್ ನಲ್ಲಿಲ್ಲ, ನಿಮ್ಮ ಕೈಗೆಟುಕುವ ಮೊಬೈಲ್ ಆಪ್ಶನ್ ನಲ್ಲಿಯೇ ಇದೆ.
ಹೌದು, ಈಗಂತು ಸಿನಿಮಾಗಳನ್ನು ನೋಡುವುದಕ್ಕೆ ಆಪ್ಶನ್ ಜಾಸ್ತಿನೆ ಇದೆ. ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡ ಬೇಸರವಿದ್ದರು ಸಹ, ಸಿನಿಮಾ ಮಿಸ್ ಮಾಡಿಕೊಂಡ ಬೇಸರ ಕಾಡುವುದಕ್ಕೆ ಸಾಧ್ಯವಿರುವುದಿಲ್ಲ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ರಿಪ್ಪನ್ ಸ್ವಾಮಿ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗ್ತಿದೆ. ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಒಟಿಟಿನಲ್ಲಿ ಮಿಸ್ ಮಾಡಿಕೊಳ್ಳಲೇಬೇಡಿ.
ಯಾಕಂದ್ರೆ ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆದಾಗಲೇ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಜನರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಅದರಲ್ಲೂ ಸ್ವಾಮಿಯ ಗುಣ, ಕೋಪ, ಪ್ರೀತಿ ಎಲ್ಲವೂ ಇಷ್ಟವಾಗಿದೆ. ಕಿಶೋರ್ ಮೂಡಬಿದ್ರೆ ಕಥೆಯನ್ನ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಒಬ್ಬ ಮನುಷ್ಯನಿಗೆ ಚಿಕ್ಕಂದಿನಲ್ಲಿಯೇ ಎದುರಾದ ಬೇಡದ ಸಂಬಂಧ ತನ್ನ ಮದುವೆಯಲ್ಲೂ ಮುಂದುವರೆದರೆ ಅವನ ಮನಸ್ಥಿತಿ ಹೇಗಾಗಬೇಡ. ಪ್ರೀತಿ ಮಾಡಿದವಳನ್ನ ದ್ವೇಷಿಸಬೇಕಾ..? ಕ್ಷಮಿಸಬೇಕಾ..? ಸಿನಿಮಾ ನೋಡ ನೀವೇ ಹೇಳಿ. ಮಲೆನಾಡಿನ ಸುಂದರ ಸೌಂದರ್ಯ ಸಿನಿಮಾದಲ್ಲಿ ಅಚ್ಚಾಗಿ ಕಣ್ಣಿಗೆ ರಾಚುತ್ತದೆ. ಸಿನಿಮಾ ಮುಗಿದ ಮೇಲೆ ಸ್ವಾಮಿಯಾಗಿ ವಿಜಯ್ ರಾಘವೇಂದ್ರ ಅವರು ಎಲ್ಲರನ್ನು ಕಾಡುತ್ತಾರೆ.
ಪಂಚಾಂನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಕೈಜೋಡಿಸಿ ನಿರ್ಮಾಣ ಮಾಡಿರುವಂತ ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಅವರುಗೆ ಅಶ್ವಿನಿ ಜೋಡಿಯಾಗಿದ್ದಾರೆ. ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಅವರ ಸಂಗೀತ ಕಿವಿಗೆ ಇಂಪು ನೀಡುತ್ತದೆ. ರಂಗನಾಥ್ ಸಿ ಎಂ ರವರು ಕ್ಯಾಮರಾ ಪ್ರಕೃತಿ ಸೌಂದರ್ಯಕ್ಕೆ ನಮ್ಮನ್ನೆ ಕರೆದೊಯ್ಯುತ್ತದೆ. ಶಶಾಂಕ್ ನಾರಯಣ್ ಎಲ್ಲವನ್ನು ಅಚ್ಚುಕಟ್ಟಾಗಿ ಎಡಿಟ್ ಮಾಡಿದ್ದಾರೆ.