Cini NewsSandalwoodTollywoodTV Serial

ಏಳುಮಲೆ  ನಟ ರಾಣ ರಿಂದ ಟಿವಿ9 ಕನ್ನಡ ವಾಹಿನಿಯ 2025 ರ ಲೈಫ್ಮ ಸ್ಟೈಲ್,  ಫರ್ನಿಚರ್ ಎಕ್ಸ್ ಪೋ ಉದ್ಘಾಟನೆ.

ಟಿವಿ9 ಕನ್ನಡ ವಾಹಿನಿಯಿಂದ ಲೈಫ್​ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್​ಪೋ 2025 ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅಕ್ಟೋಬರ್ 2ರಿಂದ 5ರವರೆಗೆ ಬೃಹತ್ ಮೇಳ ನಡೆಯುತ್ತಿದೆ. ಫ್ಯಾಶನ್ ಜಗತ್ತಿನ ದೊಡ್ಡ ಬ್ರ್ಯಾಂಡ್​ಗಳು, ಹೊಚ್ಚ ಹೊಸ ಕಾರುಗಳು, ಆಕರ್ಷಕ ಪೀಠೋಕರಣಗಳು ಒಂದೇ ವೇದಿಕೆಯಲ್ಲಿ ಕಾಣಸಿಗಲಿವೆ.

ಕರ್ನಾಟಕದ ನಂಬರ್ ಒನ್ ಸುದ್ದಿ ವಾಹಿನಿಯಾಗಿರುವ ಟಿವಿ9 ಕನ್ನಡದಿಂದ ಮತ್ತೊಂದು ಮೆಗಾ ಎಕ್ಸ್ಪೋ ಆಯೋಜನೆಯಾಗಿದೆ. ಅರಮನೆ ಮೈದಾನದಲ್ಲಿ ಲೈಫ್​ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ ನಡೆಯಲಿದೆ. ಅಕ್ಟೋಬರ್ 2ರಿಂದ 5ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಇದು ಬೆಂಗಳೂರಿನಲ್ಲಿ ಈ ವರ್ಷ ನಡೆಯುವ ಅತಿದೊಡ್ಡ ಮೇಳವೆನಿಸಿದೆ.
ಹೊಸ ವಾಹನಗಳ ಅನ್ವೇಷಣೆಯಲ್ಲಿರುವವರಿಗೆ, ಹೋಮ್ ಡೆಕೋರೇಶನ್ ಆಸಕ್ತರಿಗೆ ಈ ಎಕ್ಸ್​ಪೋ ಸರಿಯಾದ ವೇದಿಕೆಯಾಗಿದೆ. ಈ ಹಿಂದಿನ ಆವೃತ್ತಿಯ ಮೇಳಗಳಿಗೆ ಉತ್ತಮ ಸ್ಪಂದನೆ ಸಿಕ್ಕಿತ್ತು. ಈ ಬಾರಿಯೂ ಸಾಕಷ್ಟು ಜನರು ಎಕ್ಸ್​ಪೋದ ಪ್ರಯೋಜನ ಪಡೆಯುವ ನಿರೀಕ್ಷೆ ಇದೆ.

ಟಿವಿ9 ಕನ್ನಡ ಲೈಫ್​ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್​ಪೋದಲ್ಲಿ ಏನೇನು ನಿರೀಕ್ಷಿಸಬಹುದು?
ಎಲೆಕ್ಟ್ರಾನಿಕ್ ಗ್ಯಾಜೆಟ್: ಸ್ಮಾರ್ಟ್ ಹೋಮ್ ಟೆಕ್ನಾಲಜಿಯ ಇತ್ತೀಚಿನ ಉತ್ಪನ್ನಗಳು, ಅಡುಗೆಮನೆ ಪರಿಕರಗಳು, ಪರ್ಸನಲ್ ಗ್ಯಾಜೆಟ್​ಗಳು ಮೊದಲಾದವನ್ನು ಈ ಎಕ್ಸ್​ಪೋದಲ್ಲಿ ಕಾಣಬಹುದು. ಹಾಗೆಯೇ, ದೇಶದ ಅತ್ಯುತ್ತಮ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್​ಗಳ ಉತ್ಪನ್ನಗಳನ್ನು ಈ ಮೇಳದಲ್ಲಿ ಕಾಣಬಹುದು.

ಆಟೊಮೊಬೈಲ್ ಪೆವಿಲಿಯನ್: ಹೊಚ್ಚ ಹೊಸ ಬ್ರ್ಯಾಂಡ್​ಗಳ ಎಲೆಕ್ಟ್ರಿಕ್ ವಾಹನಗಳು, ಎಸ್​ಯುವಿ, ಬೈಕ್, ಸ್ಕೂಟರ್, ಕಾನ್ಸೆಪ್ಟ್ ಕಾರ್ ಇತ್ಯಾದಿಯ ಪ್ರದರ್ಶನ ಇರುತ್ತದೆ. ಟೆಸ್ಟ್ ರೈಡ್ ಮಾಡಿ ವಾಹನದ ಪ್ರತ್ಯಕ್ಷ ಅನುಭವ ಪಡೆಯಬಹುದು. ವಿಆರ್ ಮೂಲಕವೂ ವಾಹನದ ಡ್ರೈವಿಂಗ್ ಎಕ್ಸ್​ಪೀರಿಯನ್ಸ್ ಪಡೆಯಬಹುದು.

ಫರ್ನಿಚರ್ ಮತ್ತು ಹೋಮ್ ಡೆಕೋರೇಶನ್: ಆಕರ್ಷಕ ಹಾಗೂ ಅತ್ಯುತ್ತಮ ಗುಣಮಟ್ಟದ ಪೀಠೋಪಕರಣಗಳು, ಇಂಟೀರಿಯರ್ ಡೆಕೋರೇಶನ್, ಸ್ಮಾರ್ಟ್ ಲಿವಿಂಗ್ ಸಲ್ಯೂಶನ್ಸ್ ಮತ್ತಿತರ ಉತ್ಪನ್ನಗಳು ಈ ಟಿವಿ9 ಎಕ್ಸ್​ಪೋದಲ್ಲಿ ನೋಡಲು ಸಿಗುತ್ತವೆ. ನಿಮ್ಮ ಮನೆ ಮತ್ತು ಮನಸ್ಸಿಗೆ ಹೊಂದಿಕೆಯಾಗುವ ಗೃಹಾಲಂಕಾರಗಳನ್ನು ಇಲ್ಲಿ ಅನ್ವೇಷಿಸಬಹುದು. ಫ್ಯಾಷನ್ ಮತ್ತು ಜ್ಯುವೆಲರಿ: ಹೊಚ್ಚ ಹೊಸ ಫ್ಯಾಷನ್ ಟ್ರೆಂಡ್​ಗಳು, ಡಿಸೈನರ್ ಕಲೆಕ್ಷನ್ಸ್, ಟ್ರೆಂಡಿ ಡಿಸೈನ್ ಇರುವ ಜ್ಯುವೆಲರಿಗಳನ್ನು ಮೇಳದಲ್ಲಿ ಕಾಣಬಹುದು.

error: Content is protected !!