“ಮಾರುತ’ ಚಿತ್ರದಲ್ಲಿ ನಾಯಕ ನಾನಲ್ಲ : ದುನಿಯಾ ವಿಜಯ್
“ಮಾರುತ” ಚಿತ್ರದಲ್ಲಿ ನಾಯಕ ನಾನಲ್ಲ, ಸುಮ್ಮನೆ ನಾಯಕ ಎಂದು ಬಿಂಬಿಸಬೇಡಿ..” ಹೀಗಂತ ನಟ ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ನಿರ್ಮಾಪಕ ಕೆ, ಮಂಜು ಮತ್ತು ನಿರ್ದೇಶಕ ಎಸ್ ನಾರಾಯಣ್ ಅವರ ಮೇಲೆ ಅಪಾರ ಅಭಿಮಾನ ಮತ್ತು ಗೌರವವಿದೆ. ಈ ಹೀಗಾಗಿ “ ಮಾರುತ” ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ ನಾಯಕ ನಾನಲ್ಲ ಎಂದು ಮತ್ತೊಮ್ಮೆ ಹೇಳಿದ್ದಾರೆ
‘ಮಾರುತ ಚಿತ್ರ” ಅಕ್ಟೋಬರ್ 31ರಂದು ಬಿಡುಗಡೆಗೆ ಸಜ್ಜಾಗಿದೆ. ಚಿತ್ರೀಕರಣಕ್ಕಾಗಿ ಚೆನ್ನೈನಲ್ಲಿ ಮೂಕುತಿ ಅಮ್ಮನ್-2 ಚಿತ್ರದ ಚಿತ್ರೀಕರಣದಲ್ಲಿ ನಿರತವಾಗಿರುವ ನಟ ವಿಜಯ್ ಕುಮಾರ್ ದೂರವಾಣಿಯಲ್ಲಿ ಮಾತನಾಡಿ, ನಟ ಶ್ರೇಯಸ್ ಮಂಜು ಅವರನ್ನು ಚಿಕ್ಕ ವಯಸ್ಸಿನಿಂದ ಬಲ್ಲೆ. ಹೀಗಾಗಿ ಆತನಿಗೆ ಒಳಿತಾಗಲಿ ಎನ್ನುವ ಕಾರಣಕ್ಕೆ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದೇನೆ. ಎಂದಿದ್ದಾರೆ
ಮಾರುತ ಚಿತ್ರದಲ್ಲಿ ನಾಯಕ ಎಂದು ಬಿಂಬಿಸಲು ಪ್ರಯತ್ನ ಮಾಡಬೇಡಿ, ನಾಯಕ ನಾನಲ್ಲ, ನಾನಲ್ಲ,ನಾನಲ್ಲ ಎಂದು ಹೇಳಿದ ಅವರು ತಂಡಕ್ಕೆ ಒಳಿತಾಗಲಿ ಎಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾನು ಕಷ್ಟಪಟ್ಟು ಈ ಮಟ್ಟಕ್ಕೆ ಬಂದಿದ್ದೇನೆ, ನನ್ನನ್ನು ಮಾರುತ ಚಿತ್ರದಲ್ಲಿ ನಾಯಕ ಎಂದು ಬಿಂಬಿಸಬೇಡಿ ಎಂದು ಮತ್ತೊಮ್ಮೆ ಹೇಳಿದ್ದಾರೆ.
ವರ್ಷಾಂತ್ಯಕ್ಕೆ “ಲ್ಯಾಂಡ್ ಲಾರ್ಡ್”
“ಲಾಂಡ್ ಲಾರ್ಡ್” ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ದೊಡ್ಡಮಟ್ಟದಲ್ಲಿ ಚಿತ್ರ ಮೂಡಿಬರುತ್ತಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳು ನಡೆಯತ್ತಿವೆ, ಎಲ್ಲಾ ಅಂದುಕೊಂಡಂತೆ ಆದರೆ ವರ್ಷಾಂತ್ಯಕ್ಕೆ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ ಎಂದಿದ್ಧಾರೆ.
ಜಡೇಶ್ ಕುಮಾರ್ ಹಂಪಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಲಾಂಡ್ ಲಾರ್ಡ್” ಚಿತ್ರದಲ್ಲಿ ಸಾಂಡಲ್ ವುಡ್ ಸಲಹ ವಿಜಯ್ ಕುಮಾರ್ ಇದುವರೆಗೆ ಕಾಣಿಸಿಕೊಳ್ಳದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೃತ್ತಿ ಬದುಕಿನ ಮತ್ತೊಂದು ವಿಭಿನ್ನ ಮಾದರಿಯ ಚಿತ್ರವಾಗಲಿದೆ ಎನ್ನುವ ಮಾತುಗಳು ಚಿತ್ರರಂಗದಲ್ಲಿ ಈಗಾಗಲೇ ಕೇಳಿ ಬಂದಿದೆ.
ಕೆ,ಎಸ್ ಸೂರಜ್ ಗೌಡ ಮತ್ತು ಕೆ ವಿ ಸತ್ಯಪ್ರಕಾಶ್ ನಿರ್ಮಾಣ ಮಾಡಿದ್ದು 1990ರ ದಶಕದ ಹಳ್ಳಿಯಲ್ಲಿ ನಡೆಯುವ ಚಿತ್ರದಲ್ಲಿ ಭಾವನಾತ್ಮಕ ತಂದೆ-ಮಗಳ ಕಥೆಯೂ ಚಿತ್ರದಲ್ಲಿದೆ. ವಿಜಯ್ ಕುಮಾರ್ ಅವರ ಪುತ್ರಿ ರಿತನ್ಯಾ ಅವರು ಮೊದಲ ಬಾರಿಗೆ ಬೆಳ್ಳಿ ತೆರೆಗೆ ಪರಿಯವಾಗುತ್ತಿದ್ದಾರೆ, ಅಪ್ಪನ ಜೊತೆಯಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.
ಮೂಕುತಿ ಅಮ್ಮನ್-2 ಚಿತ್ರೀಕರಣದಲ್ಲಿ ಭಾಗಿ”:
‘ಭೀಮ’ ಚಿತ್ರದ ಭರ್ಜರಿ ಯಶಸ್ಸಿನ ನಂತರ ವಿಜಯ್ ಕುಮಾರ್ ಅವರು ಒಂದರ ಹಿಂದೆ ಒಂದು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ, ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ, ಸದ್ಯ ಮೂಕುತಿ ಅಮ್ಮನ್-2 ಚಿತ್ರೀಕರಣದಲ್ಲಿ ಚೆನ್ನೈನಲ್ಲಿ ಬ್ಯುಸಿಯಾಗಿದ್ದಾರೆ. ಖ್ಯಾತ ನಿರ್ದೇಶಕ ಸುಂದರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ
ಈ ನಡುವೆ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ತಮಿಳು ನಟ ವಿಜಯ್ ಸೇತುಪತಿ, ಸಂಯುಕ್ತಾ ಮೆನನ್, ಟಬು, ನಟಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರೀಕರಣದಲ್ಲಿ ನಿರತವಾಗಿದ್ದು ಎರಡೂ ಚಿತ್ರಗಳು ಏಕಕಾಲಕ್ಕೆ ಚಿತ್ರೀಕರಣ ಭರದಿಂದ ಸಾಗಿದೆ.