Cini NewsSandalwood

ಯಶಸ್ವಿ ಪ್ರದರ್ಶನದ “31 DAYS” ಚಿತ್ರತಂಡದ ಸಂಭ್ರಮ

ಸ್ಯಾಂಡಲ್ವುಡ್ ನಲ್ಲಿ ಬಿಡುಗಡೆಯಾದ ಸಾಲು ಸಾಲು ಚಿತ್ರಗಳ ನಡುವೆಯೂ ಕೂಡ ಪ್ರೇಕ್ಷಕರ ಮನಸನ್ನ ಗೆದ್ದು ಯಶಸ್ವಿ ಪ್ರದರ್ಶನವನ್ನು ಕಾಣುತ್ತಿರುವಂತಹ ಚಿತ್ರ “31 ಡೇಸ್”. N- STAR ಎಂಟರ್ಪ್ರೈಸಸ್ ಮೂಲಕ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ, ರಾಜ ರವಿಕುಮಾರ್ ನಿರ್ದೇಶಿಸಿರುವ ಹಾಗೂ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ಸಂಯೋಜಿಸಿರುವ 150ನೇ ಚಿತ್ರ “31 DAYS” ಕಳೆದವಾರ ರಾಜ್ಯಾದ್ಯಂತ ಬಿಡುಗಡೆಯಾಗಿ ಎಲ್ಲಾ ಕಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು , ಈ ವಿಚಾರವಾಗಿ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನ ಆಯೋಜನೆ ಮಾಡಿತ್ತು.

ನಟ ನಿರಂಜನ್ ಶೆಟ್ಟಿ ಮಾತನಾಡುತ್ತಾ ನಾವು ಹೇಗೆ ಪ್ಲಾನ್ ಮಾಡಿಕೊಂಡು ಚಿತ್ರವನ್ನು ಬಿಡುಗಡೆ ಮಾಡಿದ್ದೇವೋ ಅದೇ ರೀತಿ ನಮ್ಮ ಚಿತ್ರ “31 DAYS” ಸೆಪ್ಟೆಂಬರ್ 5 ರಂದು ಬಿಡುಗಡೆಯಾಯಿತು. ಇದು ನನ್ನ ಅಭಿನಯದ 8ನೇ ಚಿತ್ರ. ನಮ್ಮ ನಿರೀಕ್ಷೆಗೂ ಮೀರಿ ಜನ ನಮ್ಮ ಚಿತ್ರವನ್ನು ಒಪ್ಪಿಕೊಂಡಿರುವುದಕ್ಕೆ ಬಹಳ ಖುಷಿಯಾಗಿದೆ.

ಅದರಲ್ಲೂ ಇತ್ತೀಚೆಗೆ ನಮ್ಮ ಸಿನಿಮಾ ನೋಡಿದ ಪ್ರೇಕ್ಷಕರೊಬ್ಬರು ನನ್ನನ್ನು ಭೇಟಿಯಾಗಿ ಕೇವಲ ಎರಡು ಪ್ರಮುಖಪಾತ್ರ ಗಳನ್ನಿಟ್ಟುಕೊಂಡು ಎರಡು ಗಂಟೆ ಸಿನಿಮಾ ಮಾಡುವುದು ಸುಲಭವಲ್ಲ. ಅಲ್ಲಿ ನೀವು ಗೆದ್ದಿದ್ದೀರಿ. “31 DAYS”ಎಲ್ಲೂ ಬೇಸರ ತರಿಸದ ಸಿನಿಮಾ ಎಂದರು‌.

ಈ ಹಿಂದೆ ಬಾಲಿವುಡ್ ನಲ್ಲಿ ಅಮೋಲ್ ಪಾಲೇಕರ್ ಅವರು ಅಭಿನಯಿಸಿದ್ದ ಚಿತ್ರದಲ್ಲೂ ಕೇವಲ ಎರಡೇ ಪಾತ್ರಗಳಿದ್ದವು. ನಮ್ಮ ಚಿತ್ರಕ್ಕೆ ಆ ಚಿತ್ರವೂ ಸ್ಪೂರ್ತಿ ಎನ್ನಬಹುದು. ಪ್ರೇಕ್ಷಕರು ಹಾಗೂ ಚಿತ್ರ ಆರಂಭದ ದಿನದಿಂದಲೂ ಪತ್ರಕರ್ತರು ಹಾಗೂ ಮಾಧ್ಯಮ ಮಿತ್ರರು ನೀಡುತ್ತಿರುವಂತಹ ಪ್ರೋತ್ಸಾಹವೇ ನಮ್ಮ ಚಿತ್ರದ ಗೆಲುವಿಗೆ ಕಾರಣ. ನಾನು ಬಿಡುಗಡೆಗೆ ಪೂರ್ವದಲ್ಲೇ ಬಹುತೇಕ ಎಪ್ಪತ್ತು ಪರ್ಸೆಂಟ್ ಸೇಫ್ ಆಗಿದ್ದೀನಿ. ಅದಕ್ಕೆ ನಾನು ರೂಪಿಸಿದ ಹಲವು ಯೋಜನೆಗಳೆ ಕಾರಣ.

ಇನ್ನೂ ಈ ಚಿತ್ರದ ವಿತರಕರಾದ ಪ್ರಶಾಂತ್ ಹಾಗೂ ಬಾಬಣ್ಣ ಅವರ ಸಹಕಾರದಿಂದ ಈ ವಾರ ಚಿತ್ರಮಂದಿರಗಳ ಸಂಖ್ಯೆ ಸ್ವಲ್ಪ ಏರಿಕೆಯಾಗಿದೆ. ಈ ಸಂದರ್ಭದಲ್ಲಿ ನಾನು ಮತ್ತೊಂದು ವಿಷಯ ಹಂಚಿಕೊಳ್ಳುತ್ತಿದ್ದೇನೆ. ನಾವು ಸೀಮಿತ ಬಜೆಟ್ ನ ಮೂರು ಸಿನಿಮಾಗಳನ್ನು N -STAR ENTERPRISES ಲಾಂಛನದಲ್ಲೇ ನಿರ್ಮಾಣ ಮಾಡಲು ಮುಂದಾಗಿದ್ದು , ಕಥೆ ಸಿದ್ದವಾಗಿದೆ.

ಸದ್ಯದಲ್ಲೇ ಚಾಲನೆ ಸಿಗಲಿದೆ ಎಂದು ತಿಳಿಸಿದರು. ವಿಶೇಷವಾಗಿ ತಮ್ಮ ಎಲ್ಲಾ ಕಾರ್ಯಗಳಿಗೂ ಜೊತೆಯಾಗಿ ನಿಂತಿರುವ ಪತ್ನಿ, ನಿರ್ಮಾಪಕಿ ನಾಗವೇಣಿ ಎನ್. ಶೆಟ್ಟಿ ಹಾಗೂ ನಮ್ಮ ನಿರ್ದೇಶಕ ಹಾಗೂ ನನ್ನ ನಟಿಗೂ ಧನ್ಯವಾದ ತಿಳಿಸುತ್ತೇನೆ ಎಂದರು. ಹಾಗೆಯೇ ಕರಾವಳಿ ಪ್ರತಿಭೆ ನಾಯಕಿ ಪ್ರಜ್ವಲಿ ಸುವರ್ಣ ಮಾತನಾಡುತ್ತಾ ನಾನು ಈಗಾಗಲೇ ಎರಡು ತುಳು ಚಿತ್ರದಲ್ಲಿ ನಟಿಸಿದ್ದೇನೆ.

ಒಂದಷ್ಟು ಕಿರು ಚಿತ್ರದಲ್ಲೂ ಕೂಡ ಅಭಿನಯಿಸಿದ್ದು , ಇದು ನನ್ನ ಮೊದಲ ಕನ್ನಡ ಚಿತ್ರ. ಕಥೆ ಇಷ್ಟವಾಯಿತು ಹಾಗಾಗಿ ಒಪ್ಪಿಕೊಂಡೆ. ನಮ್ಮ ಚಿತ್ರತಂಡದಿಂದ ಬಹಳಷ್ಟು ಕಲಿತಿದ್ದೇನೆ. ಈ ಚಿತ್ರದ ಮೂಲಕ ಬೇರೆ ಬೇರೆ ಅವಕಾಶಗಳು ಬರುತ್ತಿದೆ ಎಂದರು.

ಇನ್ನು ಈ ಚಿತ್ರದ ನಿರ್ದೇಶಕ ರಾಜ ರವಿಶಂಕರ್ ಮಾತನಾಡುತ್ತಾ ನನಗೆ ಈ ಚಿತ್ರದಿಂದ ಮತ್ತಷ್ಟು ಒಳ್ಳೆ ಅವಕಾಶಗಳು ಸಿಕ್ಕಿದ್ದು , ಸಾಲು ಸಾಲು ಮೂರು ಚಿತ್ರಗಳು ಈಗ ನನ್ನ ಕೈಗೆ ಬಂದಿದೆ. ನಮ್ಮ ನಟ ಬಹಳ ಅದ್ಭುತವಾಗಿ ನಟಿಸಿದ್ದಾರೆ. ಅದೇ ರೀತಿ ನಟಿಯು ಕೂಡ ಪಾತ್ರಕ್ಕೆ ಜೀವ ತುಂಬಿದ್ದು , ಈಗ ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ದೊರಕುತ್ತಿದೆ. ನಿಮ್ಮ ಸಹಕಾರ , ಬೆಂಬಲ ನಿರಂತರವಾಗಿ ನಮ್ಮ ತಂಡದ ಮೇಲೆ ಇರಲಿ ಎಂದರು.

ಈ ಚಿತ್ರದ ನಿರ್ಮಾಪಕಿ ನಾಗವೇಣಿ.ಎನ್. ಶೆಟ್ಟಿ ಮಾತನಾಡುತ್ತಾ ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವ ಎಲ್ಲರಿಗೂ ಧನ್ಯವಾದಗಳು , ನಮ್ಮ ಚಿತ್ರವನ್ನು ಎಲ್ಲರೂ ಇಷ್ಟಪಟ್ಟಿದ್ದೀರಿ ನಿರಂತರವಾಗಿ ಸಹಕಾರವಿರಲಿ ಎಂದರು. ಎರಡನೇ ವಾರದಲ್ಲಿ ಮತ್ತಷ್ಟು ಚಿತ್ರಮಂದಿರಗಳು ಹೆಚ್ಚಾಗಲಿದ್ದು , ಬಿ, ಸಿ , ಸೆಂಟರ್ ಗಳಲ್ಲಿ ಕೂಡ ಸಿನಿಮಾ ಓಪನ್ ಆಗುತ್ತಿದೆ ಎಂದು ವಿತರಕರಾದ ಪ್ರಶಾಂತ್ ಹಾಗೂ ಬಾಬಣ್ಣ‌ ತಿಳಿಸಿದರು. ಇನ್ನು ಚಿತ್ರದಲ್ಲಿ ನಾಯಕನ ಗೆಳೆಯನಾಗಿ ಅಭಿನಯಿಸಿರುವ ಚಿತ್ರದ ನಟ ಚಿಲ್ಲರ್ ಮಂಜು ಕೂಡ ಹಾಜರಿದ್ದರು.

error: Content is protected !!