ಕರಾವಳಿ ಸಂಸ್ಕೃತಿಯ “ದಿಂಸೋಲ್” ಚಿತ್ರದ ಮೋಷನ್ ಪೋಸ್ಟರ್ ರಿಲೀಸ್.
‘ದಿಂಸೋಲ್’ ಹೀಗೊಂದು ವಿಭಿನ್ನ ಟೈಟಲ್ನ ಅದ್ದೂರಿ ಸಿನಿಮಾ ರೆಡಿಯಾಗುತ್ತಿದೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಿನಿಮಾದ ಭರ್ಜರಿ ಪೋಸ್ಟರ್ ರಿಲೀಸ್ ಆಗಿತ್ತು. ಇದೀಗ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು ಸಖತ್ ಇಂಟ್ರೆಸ್ಟಿಂಗ್ ಆಗಿದೆ. ನಾಗೇಂದ್ರ ಗಾಣಿಗ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ದಿಂಸೋಲ್ ಕರಾವಳಿಯ ಸಂಸ್ಕೃತಿ ಬಗ್ಗೆ ಇರುವ ಸಿನಿಮಾವಾಗಿದೆ. ಈಗಾಗಲೇ ಕರಾವಳಿ ಸಂಸ್ಕೃತಿಯ ಸೊಗಡನ್ನು ಸಾರುವ ಅನೇಕ ಸಿನಿಮಾಗಳು ಬರ್ತಿವೆ. ಇದೀಗ ದಿಂಸೋಲ್ ಕೂಡ ಅದೇ ಲಿಸ್ಟ್ಗೆ ಸೇರಿಕೊಂಡಿದೆ.
ದಿಂಸೋಲ್ ರಥಾಕಿರಣ್ ನಾಯನಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ. ನಾಯಕಿಯಾಗಿ ಶಿವಾನಿ ರೈ ನಟಿಸುತ್ತಿದ್ದಾರೆ. ಈ ಮೊದಲು ಅಭಿರಾಮಚಂದ್ರ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಇದೀಗ ಮತ್ತೆ ದಿಂಸೋಲ್ ಮೂಲಕ ಒಂದಾಗಿ ತೆರೆಮೇಲೆ ಬರುತ್ತಿದ್ದಾರೆ. ಇನ್ನೂ ಸಿನಿಮಾದ ಪ್ರಮುಖ ಪಾತ್ರದಲ್ಲಿ ರಾಕೇಶ್ ಅಡಿಗ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ಮಾನಸಿ ಸುಧೀರ್, ಕಿರುತೆರೆ ನಟಿ ಅಮೃತಾ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.
ದಿಂಸೋಲ್ ಎಂದರೆ ಕರಾವಳಿ ಭಾಗದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ನಡೆಯುವ ಅಚರಣೆಯಾಗಿದೆ. ಕರಾವಳಿಯ ಎಲ್ಲಾ ಸಂಸ್ಕೃತಿಯನ್ನು ಈ ಸಿನಿಮಾದ ಮೂಲಕ ದೃಶ್ಯ ರೂಪಕ್ಕೆ ತರುತ್ತಿದ್ದಾರೆ ನಿರ್ದೇಶಕ ನಾಗೇಂದ್ರ ಗಾಣಿಗ. ಮೊದಲ ಪೋಸ್ಟರ್ ಕೂಡ ಸಿಕ್ಕಾಪಟ್ಟೆ ಗಮನ ಸೆಳೆದಿತ್ತು. ದೇವಿ ರಕ್ತೇಶ್ವರಿ ಇರುವ ಮೋಷನ್ ಪೋಸ್ಟರ್ ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ..ಅಲ್ಲದೆ ಈ ಸಿನಿಮಾ ದೇವರ ಬಗ್ಗೆ ಇದೆ ಎನ್ನುವುದು ಈ ಪೋಸ್ಟರ್ ನೋಡಿದ್ರೆ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಸದ್ಯ ಪೋಸ್ಟರ್ ರಿಲೀಸ್ ಮಾಡಿರುವ ಸಿನಿಮಾತಂಡ ಶೂಟಿಂಗ್ ಪ್ರಾರಂಭ ಮಾಡಲಿದೆ. ಕರಾವಳಿಯ ಸುತ್ತಮುತ್ತ ಸಿನಿಮಾದ ಚಿತ್ರೀಕರಣ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಈ ಚಿತ್ರ ಸಚಿನ್ ವಿ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಚಿತ್ರಕ್ಕೆ ಸಂದೀಪ್ ವಲ್ಲೂರಿ ಅವರ ಕ್ಯಾಮರಾ ವರ್ಕ್ ಇದೆ, ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ.