Cini NewsSandalwoodTV Serial

“ಓಂ ಶಿವಂ” ಚಿತ್ರದ ‘ ವಾಹ್ ವಾಹ್ ಕಣ್ಣಂಚಲಿ’ ಲಿರಿಕಲ್ ವಿಡಿಯೋ ಸದ್ದು… ಸೆಪ್ಟೆಂಬರ್ 05ಕ್ಕೆ ಬಿಡುಗಡೆ.

ಚಂದನವನಕ್ಕೆ ಯುವ ಪಡೆಗಳ ಬಳಗ ಸೇರಿಕೊಂಡು ನಿರ್ಮಾಣ ಮಾಡಿರುವಂತಹ “ಓಂ ಶಿವಂ” ಚಿತ್ರದ ಎರಡನೇ ಹಾಡು ‘ವಾಹ್ ವಾಹ್ ಕಣ್ಣಂಚಲಿ’… ಎಂಬ ಮಧುರವಾದ ಲಿರಿಕಲ್ ವಿಡಿಯೋ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಬೆಳ್ಳಿ ಪರದೆಗೆ ನಾಯಕನಾಗಿ ಭಾರ್ಗವ್ ಕೃಷ್ಣ ಪ್ರವೇಶ ಮಾಡುತ್ತಿದ್ದು , ಯುವ ನಟಿ ವಿರಾನಿಕಾ ಶೆಟ್ಟಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ದೀಪಾ ಫಿಲಂಸ್ ಬ್ಯಾನರ್ ನಲ್ಲಿ ಕೆ. ಎನ್. ಕೃಷ್ಣ ರವರು ನಿರ್ಮಿಸಿದ್ದು , ಕ್ರಿಶ್ ಆಡಿಯೋ ಸಂಸ್ಥೆ ಮೂಲಕ ಹಾಡುಗಳು ಹೊರ ಬಂದಿದೆ. ಈ ಚಿತ್ರಕೆ ಆಲ್ವಿನ್ ನಿರ್ದೇಶನ ಮಾಡಿದ್ದಾರೆ. ವಿಜಯ್ ಯಾರ್ಡ್ಲಿ ಸಂಗೀತ ನೀಡಿದ್ದು ಕವಿರಾಜ್ ಸಾಹಿತ್ಯ ಬರೆದಿರುವ , ಸಾಯಿ ಚರಣ್ ಪಾವನಿ ಹಾಡಿರುವ , ಜೋಗಿ ನಾಗೇಶ್ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಮಂಗಳೂರು , ಕೇರಳ , ಮಂಡ್ಯ , ಮಡಿಕೇರಿ ಸುತ್ತಮುತ್ತಲಿ ಚಿತ್ರೀಕರಣಗೊಂಡಿರುವಂತಹ “ವಾಹ್ ವಾಹ್ ಕಣ್ಣಂಚಲಿ” ಎಂಬ ಹಾಡು 100k ಗೂ ಹೆಚ್ಚು ವೀಕ್ಷಣೆಯಾಗಿದ್ದು , ಎಲ್ಲರ ಗಮನವನ್ನು ಸೆಳೆಯುತ್ತಿದೆ. ಈ ಚಿತ್ರತಂಡಕ್ಕೆ ಖ್ಯಾತ ನಿರ್ದೇಶಕ ಆರ್. ಚಂದ್ರು ಕೂಡ ಸಾಥ್ ನೀಡಿದ್ದು , ರಾಜಕೀಯ ನಾಯಕರು ಸೇರಿದಂತೆ ಚಿತ್ರರಂಗದ ಕಲಾವಿದರು , ತಂತ್ರಜ್ಞರ ಬೆಂಬಲ ಈ ತಂಡಕ್ಕಿದೆ.


ಈ ಚಿತ್ರದ ನಿರ್ಮಾಪಕ ಕೆ. ಎನ್. ಕೃಷ್ಣ ಪ್ರಕಾರ ಅದ್ದೂರಿಯಾಗಿ ನಿರ್ಮಾಣಗೊಂಡಿರುವಂತಹ ಈ ಚಿತ್ರ ಇದೆ ಸೆಪ್ಟೆಂಬರ್ 05 ರಂದು ರಾಜ್ಯದ್ಯಂತ ಬಿಡುಗಡೆ ಮಾಡಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರಂತೆ. ನಾನು ನಟನಾಗಬೇಕೆಂಬ ಆಸೆ ಇತ್ತು , ನನ್ನ ಮಗನನ್ನು ನಾಯಕನಾಗಿ ಮಾಡುವ ಮೂಲಕ ನನ್ನ 25 ವರ್ಷಗಳ ಕನಸು ನನಸಾಗುತ್ತಿದೆ , ಹಾಗೆಯೇ ನಾನು ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದಿದ್ದಾರೆ.

ನಟ ಭಾರ್ಗವ ಕೃಷ್ಣ ಈ ಚಿತ್ರದಲ್ಲಿ ಲವ್ , ಆಕ್ಷನ್ , ಎಮೋಷನ್ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಸಿದ್ದರಾಗಿದ್ದಾರೆ. ಇದೊಂದು ಡಿಫ್ರೆಂಟ್ ಜಾನರ್ ಚಿತ್ರವಾಗಿದ್ದು , ಎಲ್ಲಾ ರೀತಿಯ ಅಂಶಗಳನ್ನು ಒಳಗೊಂಡಿದೆಯಂತೆ. ಇನ್ನು ನಾಯಕಿಯಾಗಿ ವಿರಾನಿಕಾ ಶೆಟ್ಟಿ ಅಭಿನಯಿಸಿದ್ದು , ಇದೊಂದು ಕ್ಯೂಟ್ ಲವ್ ಸ್ಟೋರಿಯಾಗಿ ಹೊರ ಬರಲಿದೆಯಂತೆ. ಇನ್ನು ನಿರ್ದೇಶಕ ಆಲ್ವಿನ್ ಒಂದು ಮನೋರಂಜನಾತ್ಮಕ ಸನ್ನಿವೇಶಗಳೊಂದಿಗೆ ಸೂಕ್ಷ್ಮ ವಿಚಾರವನ್ನು ಹೇಳುವಂತಹ ಕಥಾನಕವನ್ನು ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ. ಮೂಲದ ರಂಗಭೂಮಿ ಪ್ರತಿಭೆ ನಿರ್ದೇಶಕ ಆಲ್ವಿನ್ ಪ್ರಕಾರ “ಓಂ ಶಿವಂ” ಶೀರ್ಷಿಕೆ ಇಡೀ ಕಥೆಯ ಕೇಂದ್ರಬಿಂದು ಎಂದಿದ್ದಾರೆ. ಒಂದೊಂದು ಹಾಡು ಒಂದೊಂದು ರೀತಿ ವಿಭಿನ್ನವಾಗಿದ್ದು , ಈಗ ಬಿಡುಗಡೆಯಾಗಿರುವ ಎರಡನೇ ಹಾಡು ಮಧುರವಾಗಿ ಬಂದಿದೆ.

 

ಇದೊಂದು ಲವ್ , ಆಕ್ಷನ್ ಕಂಟೆಂಟ್ ಇರುವ ಚಿತ್ರವಾಗಿದ್ದು , ಇದರಲ್ಲಿ ಆನ್ಲೈನ್ ಮಾಫಿಯಾ ಹಾಗೂ ಡ್ರಗ್ಸ್ ದಂಧೆಯ ಸೂಕ್ಷ್ಮ ವಿಚಾರವು ಇರಲಿದೆಯಂತೆ. ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಕಾಣಿಸಿಕೊಂಡಿದ್ದು ನಟರಾದ ಕಾಕ್ರೋಜ್ ಸುಧೀ, ರವಿ ಕಳೆ, ಯಶ್ ಶೆಟ್ಟಿ , ನಟಿಯರಾದ ಅಪೂರ್ವ, ಲಕ್ಷ್ಮೀ , ವರ್ಧನ್ ತೀರ್ಥಳ್ಳಿ , ಉಗ್ರಂ ರವಿ, ಚೇತನ , ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಈ ಚಿತ್ರದ ನಾಲ್ಕು ಹಾಡುಗಳಿಗೆ ವಿಜಯ್ ಯಾರ್ಡ್ಲೆ ಸಂಗೀತ ನೀಡಿದ್ದು , ಕೌರವ ವೆಂಕಟೇಶ್ ಹಾಗೂ ವೈಲೆಂಟ್ ವೇಲು ಸಾಹಸ , ಛಾಯಾಗ್ರಾಹಕ ವೀರೇಶ್ , ಸಂಕಲನ ಸತೀಶ್ ಚಂದ್ರ , ಮೇಕಪ್ ಕುಮಾರ್ ವಸ್ತ್ರಲಂಕಾರ , ಮಲ್ಲಿಕಾರ್ಜುನ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಮಳವಳ್ಳಿ ಸಾಯಿ ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು , ಅದ್ದೂರಿ ಪ್ರಚಾರದ ಮೂಲಕ ಸೆಪ್ಟೆಂಬರ್ 5 ರಂದು ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.

error: Content is protected !!