Cini NewsSandalwoodTV Serial

ಆಗಸ್ಟ್ 22ಕ್ಕೆ “ಲವ್ ಮ್ಯಾಟ್ರು” ಸಿನಿಮಾ ಬಿಡುಗಡೆ.

ಈಗಾಗಲೇ ಅಂದುಕೊಂಡಂತೆ ನಡೆದಿದ್ದರೆ ಆಗಸ್ಟ್ 01ರಂದು “ಲವ್ ಮ್ಯಾಟ್ರು” ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಬೇಕಿತ್ತು , ಕಳೆದ ವಾರಗಳ ಹಿಂದೆ ಬಿಡುಗಡೆಯಾದಂತಹ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದು ಭರ್ಜರಿ ಯಶಸ್ಸನ್ನ ಕಾಣುತ್ತಿದೆ. ಹಾಗೆಯೇ ಥಿಯೇಟರ್ ಗೆ ಜನರು ಮುಗಿ ಬಿದ್ದು ಬರುತ್ತಿದ್ದಾರೆ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ವಿಚಾರ ನಿರ್ಮಾಪಕ , ವಿತರಕ ಹಾಗೂ ಪ್ರದರ್ಶಕರಿಗೆ ಸಂತಸ ತಂದಿದೆ. ಒಳ್ಳೆ ಸಿನಿಮಾಗಳು ಬಂದರೆ ಜನ ಕೂಡ ಮೊಬೈಲ್ ಬಿಟ್ಟು ಬಿಗ್ ಸ್ಕ್ರೀನ್ ನಲ್ಲಿ ಸಿನಿಮಾ ನೋಡೋದಕ್ಕೆ ಬರ್ತಾರೆ ಅನ್ನೋದು ಪಕ್ಕಾ ಆಯ್ತು. ಈಗ ಅದೇ ಸಂಭ್ರಮದಲ್ಲಿ ಜನರನ್ನ ಥಿಯೇಟರ್ ಗೆ ಕರೆಸುವಂತ ಕಂಟೆಂಟ್ ಇರೋ ಮತ್ತೊಂದು ಸಿನಿಮಾ ಲವ್ ಮ್ಯಾಟ್ರು ಚಿತ್ರ ಕೂಡ ಬಿಡುಗಡೆಗೆ ತಯಾರಿ ಮಾಡಿಕೊಂಡಿದೆ.

ಈಗ ಚಿತ್ರಮಂದಿರಕ್ಕೆ ಸಿನಿಪ್ರೇಕ್ಷಕರು ಬರುತ್ತಿರುವ ಖುಷಿಯಲ್ಲಿ “ಲವ್ ಮ್ಯಾಟ್ರು” ಚಿತ್ರದ ನಾಯಕ ಹಾಗೂ ನಿರ್ದೇಶಕ ವಿರಾಟ್ ಬಿಲ್ವ ಇದೆ ಆಗಸ್ಟ್ 22 ಕ್ಕೆ ರಿಲೀಸ್ ಮಾಡುವ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಈ ಹಿಂದೆ SILVERHYTHM ಬ್ಯಾನರ್ ಮೂಲಕ ವಂದನಾ ಪ್ರಿಯ ನಿರ್ಮಾಣ ಮಾಡಿರುವ ಲವ್ ಮ್ಯಾಟ್ರು ಸಿನಿಮಾ ಆಗಸ್ಟ್ 1 ತಾರೀಕು ರಿಲೀಸ್ ಮಾಡ್ಬೇಕು ಅಂತ ಪ್ಲ್ಯಾನ್ ಮಾಡ್ಕೊಂಡಿದ್ದರು. ಈಗ ಮುಂದಕ್ಕೆ ಹೋಗಿದೆ. ಆ ಬಗ್ಗೆ ವಿರಾಟ ಬಿಲ್ವ ಹೇಳಿದ್ದು ಹೀಗೆ, ತುಂಬಾ ಪಾಸಿಟಿವ್ ಬೆಳವಣಿಗೆಗಳಿಂದ ಅಂದು ಸಿನಿಮಾವನ್ನು ರಿಲೀಸ್ ಮಾಡಲಿಲ್ಲ. ಆಗಸ್ಟ್ 1ರ ಬದಲಿಗೆ ಆಗಸ್ಟ್ 22ಕ್ಕೆ ಸಿನಿಮಾ ಬಿಡುಗಡೆ ಮಾಡ್ತಾ ಇದ್ದೇವೆ. ಒಂದು ನಿರ್ಧಾರ ತೆಗೆದುಕೊಂಡಾಗ ಅದರಲ್ಲಿ ಪ್ಲಸ್ ಅಂಡ್ ಮೈನಸ್ ಎರಡು ಪಾಯಿಂಟ್ ಅಡಗಿರುತ್ತೆ. ನಾವೂ ತುಂಬಾ ಅವಲಂಬಿತರಾಗಿರೋದು ಪಾಸಿಟಿವ್ ಯೋಚನೆಯ ಮೇಲೆ. ಒಂದು ಮಿಥ್ ಕ್ರಿಯೇಟ್ ಆಗಿತ್ತು. ಕನ್ನಡ ಚಿತ್ರಗಳನ್ನ ನೋಡೋದಕ್ಕೆ ಜನ ಬರ್ತಾ ಇಲ್ಲ ಅಂತ. ಆ ಸುಳ್ಳನ್ನ ಮುರಿದು ಹಾಕಿರೋದು ಸು ಫ್ರಂ ಸೋ ಸಿನಿಮಾ. ಒಂದು ಸಿನಿಮಾ ತುಂಬಾ ಚೆನ್ನಾಗಿ ಆಗ್ತಾ ಇದೆ ಅಂದಾಗ, ಅದರಲ್ಲೂ ನಮ್ಮ ಕನ್ನಡ ಸಿನಿಮಾ ಅದ್ಭುತವಾದ ರೆಸ್ಪಾನ್ಸ್ ಪಡೆಯುತ್ತಿದೆ ಎಂದಾಗ ನಾವೂ ಪೂರಕವಾಗಿ ನಿಂತುಕೊಳ್ಳಬೇಕು. ಹೀಗಾಗಿ ನಮ್ಮ ಸಿನಿಮಾವನ್ನು ಪೋಸ್ಟ್ ಪೋನ್ ಮಾಡಿದ್ದೇವೆ ಎಂದಿದ್ದಾರೆ.

ಹಾಗೇ ನಿರ್ಮಾಪಕರು ಯಾವತ್ತಿಗೂ ಬಿಸಿನೆಸ್ ಬಗ್ಗೆಯೂ ಯೋಚನೆ ಮಾಡ್ತಾರೆ. ಅದೇ ರೀತಿ ವಂದನಾ ಕೂಡ ಯೋಚನೆ ಮಾಡಿದ್ದು, ಬಿಸಿನೆಸ್ ಆಯಾಮ, ಇಂಡಸ್ಟ್ರಿಯ ಓವರ್ ಆಲ್ ಆಯಾಮ ನೋಡಿ ಒಂದು ನಿರ್ಧಾರಕ್ಕೆ ಬಂದೆವು. ತುಂಬಾ ತುಂಬಾ ನಂಬಿರೋದು ಕಂಟೆಂಟ್ ಕಿಂಗ್ ಅಂತ. ಅಟ್ ದಿ ಸೇಮ್ ಟೈಮ್ ಆಡಿಯನ್ಸ್ ಕೂಡ ಕಿಂಗ್. ಹೀಗಾಗಿ ಒಂದೊಳ್ಳೆ ಸಮಯ ಮಾಡಿಕೊಂಡು ಸಿನಿಮಾ ರಿಲೀಸ್ ಮಾಡ್ಬೇಕು ಅಂತ ಈ ನಿರ್ಧಾರ ತೆಗೆದುಕೊಂಡೆವು ಎಂದಿದ್ದಾರೆ ನಿರ್ಮಾಪಕಿ ವಂದನಾ. ಎಲ್ಲಾ ಅಂದುಕೊಂಡಂತೆ ಪೂರ್ವ ತಯಾರಿ ಮಾಡಿಕೊಂಡು ಈ ಚಿತ್ರವನ್ನು ಆಗಸ್ಟ್ 22ರಂದು ರಾಜ್ಯದ್ಯಂತ ಅದ್ದೂರಿಯಾಗಿ ತೆರೆಯ ಮೇಲೆ ತರಲು ಸಕಲ ಸಿದ್ಧತೆಯನ್ನ ಮಾಡಿಕೊಂಡಿದೆ ಚಿತ್ರತಂಡ.

error: Content is protected !!