Cini NewsSandalwoodTV Serial

ಯುವ ಪ್ರತಿಭೆಗಳ  “ಎಜುಕೇಟಡ್ ಬುಲ್ಸ್” ಮುಹೂರ್ತಕ್ಕೆ ಚಾಲನೆ.

Spread the love

ಡಾ.ಅಂಬರೀಷ್, ದೇವರಾಜ್, ಶಶಿಕುಮಾರ್, ಜಗ್ಗೇಶ್ ಇನ್ನು ಮುಂತಾದ ಸ್ಟಾರ್ ನಟರ ಚಿತ್ರಗಳನ್ನು ನಿರ್ದೇಶನ ಮಾಡಿರುವ ಹಿರಿಯ ತಂತ್ರಜ್ಞ ಜಿ.ಕೆ.ಮುದ್ದುರಾಜ್ ಗ್ಯಾಪ್ ನಂತರ *’ಎಜುಕೇಟಡ್ ಬುಲ್ಸ್*’ ಸಿನಿಮಾಕ್ಕೆ *ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳುವ ಜತೆಗೆ ಎಂ.ಎಸ್. ಎಂಟರ್‌ಪ್ರೈಸಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ*. ಮೊನ್ನೆಯಷ್ಟೇ ಶ್ರೀ ಚಾಮುಂಡೇಶ್ವರಿ ಸ್ಟುಡಿಯೋ ಆವರಣದಲ್ಲಿರುವ ವಿನಾಯಕನ ಸನ್ನಿದಿಯಲ್ಲಿ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನಡೆಯಿತು. ಸಿನಿಪಂಡಿತ ಜಯರಾಮ್.ಸಿ.ಎ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಮಂಜುನಾಥ್‌ಬಾಬು ಕ್ಯಾಮಾರ್ ಆನ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಅಂದ ಹಾಗೆ *ಮುದ್ದುರಾಜ್ ನಿರ್ದೇಶನ ಮಾಡುತ್ತಿರುವುದು 41ನೇ ಚಿತ್ರವೆಂಬುದು ವಿಶೇಷ*.

ಹಳ್ಳಿಯ ಪದವೀಧರನೊಬ್ಬ ಉದ್ಯೋಗದ ಸಲುವಾಗಿ ನಗರಕ್ಕೆ ಬರುತ್ತಾನೆ. ಈತನೊಂದಿಗೆ ಆಕೆಯು ಬರುತ್ತಾಳೆ. ಮುಂದೆ ವಿದ್ಯಾವಂತ ಯುವಕರ ಸ್ನೇಹವಾಗುತ್ತದೆ. ನಂತರ ಇಲ್ಲಿ ನಡೆಯುವ ಅನೇಕ ಘಟನೆಗಳು ಹಾಗೂ ಪ್ರೀತಿ ಬೆಸೆಯುವ ಸನ್ನಿವೇಶವು ಹಾಸ್ಯ ರೂಪದಲ್ಲಿ ಸಾಗುತ್ತದೆ. ತಾರಾಗಣದಲ್ಲಿ ನೀರಜ್, ಅಜಯ್‌ಕುಮಾರ್, ತೇಜಸ್‌ಕುಮಾರ್, ರಾಕೇಶ್, ಪೂರ್ವಿಕಾ, ಮಾರುತಿರಾಜ್, ಚಿದಾನಂದ ಮುಂತಾದವರು ಅಭಿನಯಿಸುತ್ತಿದ್ದಾರೆ. ಛಾಯಾಗ್ರಹಣ ಧನುಷ್‌ರಾಜಗೆರೆ, ಸಂಕಲನ ಸಂಜೀವರೆಡ್ಡಿ, ಕಥೆ ಎಂ.ಪಿ.ಅರುಣ್‌ಕುಮಾರ್, ಸಂಭಾಷಣೆ ಹರಿಣಿ, ಸಾಹಸ ಥ್ರಿಲ್ಲರ್‌ಮಂಜು, ಕಲೆ ಬಾಬು ಖಾನ್, ನಿರ್ಮಾಣ ನಿರ್ವಹಣೆ ಸಫೈರ್‌ರವಿ ಅವರದಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೂಂಡಿದೆ.

Visited 1 times, 1 visit(s) today
error: Content is protected !!