ಸೇಂಟ್ ಮದರ್ ಥೆರೇಸಾ ಯೂನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪಡೆದ ನಟಿ ಸಂಚಿತ ಶೆಟ್ಟಿ.
ಬಹುಭಾಷಾ ನಟಿ ಸಂಚಿತ ಶೆಟ್ಟಿ ಕನ್ನಡ , ತಮಿಳು ಹಾಗೂ ತೆಲುಗು ಸೇರಿದಂತೆ ಹಲವು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸಿ ಗಮನ ಸೆಳೆದಿದ್ದಾರೆ. ಹಾಗೆಯೇ ಸಮಾಜ ಸೇವೆಯಲ್ಲಿ ಯುವ ನಾಯಕಿಯಾಗಿ ಸಾಗಿರುವ ಸೇವೆಯನ್ನು ಗುರುತಿಸಿ ಸೇಂಟ್ ಮದರ್ ಥೆರೇಸಾ ಯೂನಿವರ್ಸಿಟಿ ಫಾರ್ ಡಿಜಿಟಲ್ ಎಜುಕೇಶನ್ ಎಕ್ಸಲೆನ್ಸ್ ಆಂಡ್ ಸಸ್ಟೈನಬಿಲಿಟಿ ಡೆವಲಪ್ಮೆಂಟ್, ಜೆಬಿಆರ್ ಹಾರ್ವರ್ಡ್, ಯುಎಸ್ಎ ಮತ್ತು ಆಸ್ಟ್ರೇಲಿಯಾ ಶಿಕ್ಷಣ ಸಂಸ್ಥೆಯು ನಟಿ ಸಂಚಿತ ಶೆಟ್ಟಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಮಂಗಳೂರು ಮೂಲದ ಸಂಚಿತ ಶೆಟ್ಟಿ ಶೈಕ್ಷಣಿಕ ಸಾಧನೆಗಳು, ಸಾಮಾಜಿಕ ಅನುಭವ, ಕೌಶಲ್ಯಗಳು, ಹೆಚ್ಚುವರಿ ಚಟುವಟಿಕೆಗಳು ಮತ್ತು ಅಗತ್ಯ ಸಂಖ್ಯೆಯ ಮೌಖಿಕ ಸಮಾಲೋಚನೆ ಗಳಲ್ಲಿ ಕಾಣಿಸಿಕೊಂಡು ತಮ್ಮದೇ ಚಾಪನ್ನ ಮೂಡಿಸಿಕೊಂಡಿದ್ದಾರೆ. ಇವರ ಈ ಸೇವೆಯನ್ನ ಗುರುತಿಸಿ ಜುಲೈ 12 ರಂದು ಕೊಯಿಂಬತ್ತೂರಿನ ಹೋಟೆಲ್ ವಿಜಯ್ ಇಲಾಂಜಾದಲ್ಲಿ ಸೇಂಟ್ ಮದರ್ ಥೆರೇಸಾ ಯೂನಿವರ್ಸಿಟಿ ಫಾರ್ ಡಿಜಿಟಲ್ ಎಜುಕೇಶನ್ ಎಕ್ಸಲೆನ್ಸ್ ಅವರು ನಟಿ ಸಂಚಿತ ಶೆಟ್ಟಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು. ಇದೇ ಸಂದರ್ಭದಲ್ಲಿ ಹಲವು ಸಾಧಕರಿಗೂ ಕೂಡ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಇನ್ನು ನಮ್ಮ ಕರಾವಳಿ ಪ್ರತಿಭೆ ನಟಿ ಸಂಚಿತಾ ಶೆಟ್ಟಿ 2006ರಲ್ಲಿ ಮುಂಗಾರು ಮಳೆ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆದು , ತದನಂತರ ಮಿಲನ , ಉಡ , ಗಗನಚುಕ್ಕಿ , ಸೇರಿದಂತೆ ಪರಭಾಷೆಯ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ಪ್ರಖ್ಯಾತಿಯನ್ನು ಪಡೆದಂತ ನಟಿ ಸಂಚಿತಾ ಶೆಟ್ಟಿ ಗೌರವ ಡಾಕ್ಟರೇಟ್ ಪಡೆದಿರುವುದು ಅವರ ಅಭಿಮಾನಿಗಳು ಹಾಗೂ ಕುಟುಂಬ ವರ್ಗ , ಸ್ನೇಹಿತರಿಗೂ ಸಂತೋಷವನ್ನು ತಂದಿದೆ.