Cini NewsSandalwood

ಪೋಸ್ಟ್ ಪ್ರೊಡಕ್ಷನ್ ಹಂತದ ಅನೀಶ್ ತೇಜೇಶ್ವರ್ ಸಾರಥದ “ಲವ್OTP”

Spread the love

ತನ್ನ ಟೈಟಲ್ ಮೂಲಕವೇ ಬಹಳಷ್ಟು ಸದ್ದನ್ನ ಮಾಡಿರುವಂತಹ ಚಿತ್ರ “ಲವ್ OTP”. ಈಗ ಹೈದ್ರಾಬಾದಿನಲ್ಲಿ ಪೋಸ್ಟ್ ಪ್ರೊಡಕ್ಷನ್ ಭರದಿಂದ ಸಾಗಿದ್ದು, ಕೊನೆಯ ಹಂತದ ಕೆಲಸಗಳಲ್ಲಿ ಚಿತ್ರತಂಡ ನಿರತವಾಗಿದೆ. ಕನ್ನಡ , ತೆಲುಗಿನಲ್ಲಿ ಅನೀಶ್ ತೇಜೇಶ್ವರ್ “ಲವ್OTP” ಚಿತ್ರವನ್ನ ನಿರ್ದೇಶನದ ಜೊತೆಗೆ ನಟಿಸಿದ್ದಾರೆ. ಇತ್ತೀಚಿಗೆ ಈ ಚಿತ್ರತಂಡ ಮೂಹೂರ್ತದ ವಿಡಿಯೋ‌ ಹಂಚಿಕೊಂಡದ್ದು, ತಮ್ಮ ಕೆಲಸಗಳೆಲ್ಲ ಅಚ್ಚುಕಟ್ಟಾಗಿ ನಡೆಯುತ್ತಿರುವುದರ ಬಗ್ಗೆ ಚಿತ್ರ ತಂಡ ಸಂತೋಷವಾಗಿದೆ.

*ಲವ್ OTP* ಅನ್ನೋ ಇವತ್ತಿಮ ಟ್ರೆಂಡಿಗೆ ತಕ್ಕಂತೆ ಲವ್. ಈ ಯುಗದ ಲವ್ ಬ್ರ್ಯಾಂಡಿಗೆ ತಕ್ಕ ಟೈಟಲ್ ಅನೌನ್ಸ್ ಮಾಡಿ ಹುಬ್ಬೇರಿಸಿದ್ದ ನಟ , ನಿರ್ದೇಶಕ ಅನೀಶ್ ತೇಜೇಶ್ವರ್ ಇದೀಗ ಸಿನಿಮಾನ ಪ್ರೇಕ್ಷಕರೆದುರಿಗೆ ತಲುಪಿಸೋ ಹೊಸ್ತಿಲಲ್ಲಿದ್ದಾರೆ. ಅದ್ರಂತೆ ಹೈದ್ರಾಬಾದಿನಲ್ಲಿ ಚಿತ್ರತಂಡ ಬೀಡುಬಿಟ್ಟಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನ ಮುಗಿಸುತ್ತಿದೆ. ಅನೀಶ್ ತೇಜೇಶ್ವರ್ ನಟಿಸಿ ನಿರ್ದೇಶಿಸುತ್ತಿರುವ
“ಲವ್ OTP” ಚಿತ್ರವನ್ನ ಭಾವಪ್ರೀತ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ವಿಜಯ್. ಎಂ. ರೆಡ್ಡಿ ನಿರ್ಮಾಸ್ತಿದ್ದಾರೆ.

ಈ “ಲವ್ OTP” ಚಿತ್ರಕ್ಕೆ ಗುಣಮಟ್ಟದ ತಾರಾಗಣ ತಂತ್ರಜ್ಞರ ದಂಡೇ ಕೆಲಸ ಮಾಡಿದ್ದು, ಹಾಗೇ ಹಲವಾರು ವಿಶೇಷ ವಿಚಾರಗಳು ಅಚ್ಚರಿಗಳು ಈ ಸಿನಿಮಾ ತುಂಬೆಲ್ಲಾ ಇದ್ದು, ಎಲ್ಲವನ್ನೂ ಒಂದೊಂದಾಗಿ‌ ವಿವರಿಸುತ್ತಾ ಪ್ರಚಾರ ಮಾಡೋ ಯೋಚನೆಯಲ್ಲಿದೆ ಚಿತ್ರತಂಡ. ಎರಡು ಭಾಷೆಯಲ್ಲಿ ಸಿದ್ದವಾಗುತ್ತಿರುವ ಈ ಚಿತ್ರ ಅತಿ ಶೀಘ್ರದಲ್ಲೇ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ.

Visited 1 times, 1 visit(s) today
error: Content is protected !!