Cini NewsSandalwoodTV Serial

ಇದೇ ಜೂನ್ 27ರಂದು “ಅವನಿರಬೇಕಿತ್ತು” ಚಿತ್ರ ರಿಲೀಸ್.

Spread the love

ಸ್ಯಾಂಡಲ್ ವುಡ್ ಗೆ ಮತ್ತೊಂದು ಯುವ ಜೋಡಿ ಬೆಳ್ಳಿ ಪರದೆ ಮೇಲೆ ಮೋಡಿ ಮಾಡಲು ಬರುತ್ತಿದ್ದಾರೆ. ನೋವಿಕಾ ಸಿನಿ ಪ್ರೊಡಕ್ಷನ್ ನಿರ್ಮಾಣದಲ್ಲಿ ಅಶೋಕ್ ಸಾಮ್ರಾಟ್ ನಿರ್ದೇಶನದಲ್ಲಿ ಬಿಡುಗಡೆಯಾಗುತ್ತಿರುವಂತಹ ಚಿತ್ರ “ಅವನಿರಬೇಕಿತ್ತು”. ಕನ್ನಡಕ್ಕೆ ಹೊಸಬರ ಹೊಸ ಬಗೆಯ ಸಿನಿಮಾ ಇದಾಗಿದ್ದು , ಈ ಚಿತ್ರದ ‘ಅಂದಕಾಲತ್ತಿಲ್.. ಇಂದಕಾಲತ್ತಿಲ್…’ ಹಾಡು ಬಹಳಷ್ಟು ಸದ್ದು ಮಾಡಿ ಪ್ರೇಕ್ಷಕರ ಗಮನವನ್ನು ಸೆಳೆದಿತ್ತು. ಹಾಗೆಯೇ ಮತ್ತೊಂದು ಹಾಡು ‘ಓ ಹೃದಯ…’ಕೂಡ ಮತ್ತೊಂದು ಪಟ್ಟು ಭರವಸೆಯನ್ನ ಹೆಚ್ಚಿಸಿತ್ತು. ಈ ನಡುವೆ ಟ್ರೈಲರ್ ರಿಲೀಸ್ ಮಾಡಿ, ಇಡೀ ಉದ್ಯಮಕ್ಕೆ ಮೆರಗು ತರೋ ಸೂಚನೆ ನೀಡಿದೆ ಚಿತ್ರತಂಡ. ಅದಕ್ಕೆ ಸಾಕ್ಷಿ ಎಂಬಂತೆ ಆರ್ಗ್ಯಾನಿಕ್ ಆಗಿ ಸೋಷಿಯಲ್ ಮಿಡಿಯಾದಲ್ಲಿ ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳಿಗೆ ಅಪ್ಪಟ ಕನ್ನಡ ಸಿನಿಪ್ರಿಯರಿಂದ ಪ್ರಶಂಸೆಗಳು ವ್ಯಕ್ತವಾಗ್ತಿವೆ.

ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿರೋ ಬಹುಮುಖ ಪ್ರತಿಭೆ ಅಶೋಕ್ ಸಾಮ್ರಾಟ್ ನಿರ್ದೇಶನದ ಚೊಚ್ಚಲ ಸಿನಿಮಾ ಅವನಿರಬೇಕಿತ್ತು. ಗೆಳೆಯ ಮುರಳಿ ಬಿ.ಟಿ. ಸಿನಿಮಾ ಕನಸಿಗೆ ಬಂಡವಾಳ ಹೂಡಿದ್ದಾರೆ. ಹಂಸಲೇಖ ಶಿಷ್ಯ ಲೋಕಿ ತವಸ್ಯಾ ಸಂಗೀತ ಸಂಯೋಜಿಸಿದ್ದು, ದೇವರಾಜ್ ಪೂಜಾರಿ ಛಾಯಾಗ್ರಹಣ ಮಾಡಿದ್ದಾರೆ. ತಾಂತ್ರಿಕವಾಗಿ ನಿಪುಣರ ತಂಡವನ್ನ ಕಟ್ಟಿಕೊಂಡು, ಹೊಸ ಬಗೆಯ ಕಥೆಯನ್ನ ಹೆಣೆದು, ವಿನೂತನ ಸ್ಕ್ರೀನ್ ಪ್ಲೇ ಜೊತೆಗೆ ಗುಣ ಮಟ್ಟದ ಮೇಕಿಂಗ್ ಮಾಡಿರೋ ಸಿನಿಮಾ “ಅವನಿರಬೇಕಿತ್ತು”. ಈ ಸಿನಿಮಾ ಹಲವಾರೂ ವಿಶೇಷ ವಿಚಾರಗಳಿಗೆ ಹೆಸರಾಗುವಂತೆ ಕಾಣ್ತಿದೆ. ಕನ್ನಡ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುವ ಭರವಸೆಯನ್ನೂ ನೀಡಲಿದೆ ಎಂದಿದೆ ಚಿತ್ರತಂಡ. ಈ ಚಿತ್ರದಲ್ಲಿ ನಾಯಕ ಭರತ್, ನಾಯಕಿ ಸೌಮ್ಯಾ ಹೊಸ ಮುಖಗಳೇ ಆದ್ರೂ ಟ್ರೈಲರ್ ನೋಡಿದಾಗ ಅನುಭವಸ್ಥ ಕಲಾವಿದರಿಗಿಂತ ಏನು ಕಡಿಮೆ ಇಲ್ಲ ಎನ್ನುವಂತೆ ಹಾಡುಗಳಲ್ಲಿ ಡ್ಯಾನ್ಸ್ ಮತ್ತು ಅಭಿನಯ ಮಾಡಿದ್ದಾರಂತೆ. ಈ ಚಿತ್ರದಲ್ಲಿ ಪ್ರಶಾಂತ್ ಸಿದ್ದಿ, ಕಿರಣ್ ನಾಯಕ್, ಹಿರಿಯ ನಟಿ ಲಕ್ಷ್ಮೀ ದೇವಮ್ಮ, ಮಂಜುನಾಥ್ ಎ.ಜಿ, ತೀರ್ಥ ಪೊನ್ನಮ್ಮ, ರಂಗನಾಥ್, ಬಸವ ಮೇತ್ರಿ, ಆಚಾರ್ಯ, ವಿಶೇಷ್, ನಾಗರಾಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರಂತೆ.

ಇನ್ನು ಈ ಚಿತ್ರದ ನಿರ್ಮಾಪಕರಾದ ಮುರಳಿ ಹಾಗೂ ನಿರ್ದೇಶಕ ಅಶೋಕ್ ಹೊಸಬರೇ ಆದ್ರೂ ಸಿನಿಮಾ ಬಗ್ಗೆ ಅಪಾರ ಪ್ರೀತಿ ಮತ್ತು ಅದರ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾ ಪ್ರೇಕ್ಷಕರನ್ನ ಗಮನದಲ್ಲಿಟ್ಟುಕೊಂಡು ಅವರಿಗೆ ಒಪ್ಪುವಂತಹ ಚಿತ್ರವನ್ನ ಮಾಡಿದೆಯಂತೆ. ಈಗಾಗಲೇ ಚಿತ್ರದ ಪ್ರಚಾರದ ಕಾರ್ಯ ಜೋರಾಗಿ ನಡೆಯುತ್ತಿದ್ದು , ಈ ಚಿತ್ರದ ಕಂಟೆಂಟ್ ವೀಕ್ಷಿಸಿ ಕೆ.ಆರ್.ಜಿ ಸ್ಟುಡಿಯೋಸ್ ವಿತರಣೆ ಮಾಡಲು ಮುಂದಾಗಿರೋದು ಈ ಸಿನಿಮಾ ಮೇಲಿನ ನಿರೀಕ್ಷೆ ಮತ್ತೊಂದು ಪಟ್ಟು ಹೆಚ್ಚಾಗುವಂತೆ ಮಾಡಿದೆ. ಈ ನಡುವೆ “ಅವನಿರಬೇಕಿತ್ತು” ಚಿತ್ರದ ಟ್ರೈಲರ್ ನ ನೋಡಿ ಪಿ.ಆರ್.ಕೆ ಸಂಸ್ಥೆಯ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಚಿತ್ರತಂಡವನ್ನ ಪ್ರಶಂಸಿಸಿದ್ದಾರೆ. ಎಲ್ಲಾ ವರ್ಗದವರನ್ನೂ ಸೆಳೆಯುವಂತಹ ಅಂಶಗಳಿರೋ ಈ ಚಿತ್ರವು ಜೂನ್ 27ರಂದು ರಾಜ್ಯದಾದ್ಯಂತ ರಿಲೀಸ್ ಆಗ್ತಿದೆ.

Visited 1 times, 1 visit(s) today
error: Content is protected !!