Cini NewsTollywood

ಪದ್ಮಶ್ರೀ ಡಾ.ಅಲ್ಲು ರಾಮಲಿಂಗಯ್ಯ ಅವರ ಕಂಚಿನ ಪ್ರತಿಮೆ ಅನಾವರಣ

Spread the love

ತೆಲುಗು ಚಿತ್ರರಂಗದ ಖ್ಯಾತ ಹಿರಿಯ ಹಾಸ್ಯ ಕಲಾವಿದ ಹಾಗೂ ನಿರ್ಮಾಪಕ ಪದ್ಮಶ್ರೀ ಡಾ. ಅಲ್ಲು ರಾಮಲಿಂಗಯ್ಯ ಅವರ 101 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಲ್ಲು ಬ್ಯುಸಿನೆಸ್ ಪಾರ್ಕ್ ಉದ್ಘಾಟನೆ ಮತ್ತು ಕಂಚಿನ ಪ್ರತಿಮೆಯನ್ನು ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಅನಾವರಣ ಮಾಡಲಾಯಿತು.

ಸರಿ ಸುಮಾರು ಸಾವಿರಕ್ಕೂ ಹೆಚ್ಚು ಚಿತ್ರದಲ್ಲಿ ವಿಭಿನ್ನ ಪಾತ್ರಗಳಲ್ಲಿ ಗಮನ ಸೆಳೆದ ಅಲ್ಲು ರಾಮಲಿಂಗಯ್ಯ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಹೊಂದಿದ್ದರು. ಪದ್ಮಶ್ರೀ ಸೇರಿದಂತೆ ಜೀವಮಾನದ ಸಾಧನೆ ಹಾಗೂ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.

ಚಿತ್ರರಂಗಕ್ಕೆ ತಮ್ಮದೇ ಆದ ಅಪಾರ ಕೊಡುಗೆಯನ್ನು ನೀಡಿದ್ದು, ಇವರ ಮೊಮ್ಮಕ್ಕಳುಗಳಾದ ಅಲ್ಲು ಅರ್ಜುನ್ , ರಾಮ್ ಚರಣ್ , ಅಲ್ಲು ಸಿರಿಷ್ ಟಾಲಿವುಡ್ ನಲ್ಲಿ ಸ್ಟಾರ್ ನಟರುಗಳಾಗಿ ಮಿಂಚುತ್ತಿದ್ದಾರೆ. ಕುಟುಂಬದ ಹಿರಿಯ ವ್ಯಕ್ತಿಯಾದ ಪದ್ಮಶ್ರೀ ಡಾ. ಅಲ್ಲು ರಾಮಲಿಂಗಯ್ಯ ಅವರ 101ನೆಯ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುವ ಮೂಲಕ ಕಂಚಿನ ಪ್ರತಿಮೆ ಹಾಗೂ ಅಲ್ಲು ಬಿಸಿನೆಸ್ ಪಾರ್ಕ್ ಲೋಕಾರ್ಪಣೆ ಮಾಡಿದ್ದಾರೆ.

Visited 1 times, 1 visit(s) today
error: Content is protected !!