Cini NewsTV Serial

“ಬಿಗ್ ಬಾಸ್ ಸೀಸನ್ 10” ಆಟ ಶುರು

Spread the love

ಕನ್ನಡ ರಿಯಾಲಿಟಿ ಶೋಗಳಲ್ಲಿ ಪ್ರೇಕ್ಷಕರ ಮನಸ್ಸನ್ನು ಹೆಚ್ಚು ಗೆದ್ದಂತ “ಬಿಗ್ ಬಾಸ್ ಸೀಸನ್ 10” ರ ಶೋ ಇದೆ ಅಕ್ಟೋಬರ್ 8ರಂದು ಮನೆ ಮನೆಯಲ್ಲಿ ನೂರು ದಿನಗಳ ಕಾಲ ರಾರಾಜಿಸಲಿದೆ. ಕಲರ್ಸ ಕನ್ನಡದಲ್ಲಿ ಪ್ರತಿ ದಿನ ರಾತ್ರಿ 9:30ಕ್ಕೆ ಪ್ರಸಾರವಾಗಲಿದ್ದು, ಜೊತೆಗೆ ಜಿಯೋ ಸಿನಿಮಾದಲ್ಲಿ 24ಗಂಟೆ ನೇರ ಪ್ರಸಾರ ಆಗಲಿದೆ. ಇತ್ತೀಚೆಗೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕಲರ್ಸ ಕನ್ನಡ ಚಾನೆಲ್‌ನ ಬ್ಯುಸಿನೆಸ್ ಹೆಡ್ ಪ್ರಶಾಂತ ನಾಯಕ ಮಾತನಾಡಿ ‘ದೊಡ್ಡ ರಿಯಾಲಿಟಿ ಶೋ ಅಂದ್ರೆ ಬಿಗ್ ಬಾಸ್.

ಸೀಸನ್ ಎರಡರಿಂದ ನಮ್ಮ ಚಾನೆಲ್‌ನಲ್ಲಿ ಪ್ರಸಾರ ಮಾಡತಾ ಬರುತ್ತಿದ್ದು, ಈ ಸಲದ ‘ಬಿಗ್ ಬಾಸ್’ ಮನೆ ಬದಲಾಗಿದೆ. ಇಡೀ ಇಂಡಿಯಾದಲ್ಲಿ ದೊಡ್ಡ ಮನೆ ನಮ್ಮದು. ಕಳೆದ ಎಲ್ಲಾ ಸೀಸನ್‌ಗಳ ನಿರೂಪಣೆಯನ್ನು ಸುದೀಪ್ ಅವರೇ ಮಾಡತಾ ಬರುತ್ತಿದ್ದು, 10 ಶೋಗಳನ್ನು ಒಬ್ಬರೇ ನಿರೂಪಣೆ ಮಾಡುತ್ತಿರುವುದು ಕೂಡ ವಿಶೇಷ.

ಮುಂಬೈ ಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ರಾಮ್ ಚರಣ್

ನಮ್ಮ ಈ ಪ್ರಯತ್ನಕ್ಕೆ ಸುದೀಪ್ ಅವರು ಸಾಕಷ್ಟು ಇನ್ ಫುಟ್ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು. ನಂತರ ಬಾನೀಜಿ ಮತ್ತು ಎಂಡಮಾನ್ ಶೈನ್‌ನ ಸಿಇಒ ದೀಪಕ್ ಧರ್ ಮಾತನಾಡಿ ಕನ್ನಡದ ಬಿಗ್ ಬಾಸ್ ಮಾರ್ಕೆಟ್ ಚನ್ನಾಗಿ ಇದೆ. ಇದೆಲ್ಲಾ ಸುದೀಪ್ ಹಾಗೂ ಪ್ರೇಕ್ಷಕರಿಂದ ಆಗಿದೆ ಎಂದರು.

ಇನ್ನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಿಚ್ಚ ಸುದೀಪ್ ನನ್ನ ಪ್ರಕಾರ ಬಿಗ್ ಬಾಸ್ ಸ್ಕ್ರಿಪ್ಟ್ ಮಾಡಿದ ಶೋ ಅಲ್ಲ. ಈ ರಿಯಾಲಿಟಿ ಶೋ ಮೂಲಕ ವಿಭಿನ್ನ ಕ್ಯಾರೆಕ್ಟರ್‌ಗಳ ಪರಿಚಯ ಆಗುತ್ತದೆ. ನಂಗೆ ಮೊದಲ ಸೀಸನ್ ಚಾಲೆಂಜ್ ಆಗಿತ್ತು. 6ನೇ ಸೀಸನ್‌ನಲ್ಲಿ ನಡೆದ ಘಟನೆಗಳಿಂದ ‘ಬಿಗ್ ಬಾಸ್’ನಿಂದ ಹೊರಗೆ ಹೋಗಬೇಕು ಎಂದುಕೊಂಡಿದೆ. ಉಳಿದಂತೆ ಎಲ್ಲಾ ಸೀಸನ್ ಮನಸ್ಸಿಗೆ ತೃಪ್ತಿ ಕೊಟ್ಟಿದೆ.

ವಿದೇಶದ ಶೋ ಒಂದು ಭಾರತಕ್ಕೆ ಬಂದು ಒರಿಜಿನಲ್ ಚಾನೆಲ್‌ಗಳಲ್ಲೂ ಪ್ರಸಾರ ಆಗತಾ ಕನ್ನಡದಲ್ಲಿ 10ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ‘ಹ್ಯಾಪಿ ಬಿಗ್ ಬಾಸ್’ ಎಂಬ ಥೀಮ್ ಹೊಂದಿರುವುದು ಈ ಬಾರಿಯ ಬಿಗ್‌ಬಾಸ್‌ನ ವಿಶೇಷವಾಗಿದೆ. ಹದಿನಾರು ಸ್ಪರ್ಧಿಗಳು ಭಾಗವಹಿಸಲಿರುವ ಈ ಸೀಸನ್ನಿನ ಮನೆಯನ್ನು ಕಾಯಲು 73 ಕ್ಯಾಮರಾಗಳು ಸಜ್ಜಾಗಿವೆ.

ದಿನದ 24 ಗಂಟೆ ಜಿಯೋ ಸಿನಿಮಾನಲ್ಲಿ ಫ್ರೀಯಾಗಿ ನೋಡಿ ಬಿಗ್‌ಬಾಸ್. ಅಂದಹಾಗೇ ಇದೇ ಮೊದಲ ಬಾರಿ ಬಿಗ್ ಬಾಸ್ ಕನ್ನಡ ಜಿಯೋ ಸಿನಿಮಾನಲ್ಲಿ ದಿನದ 24 ಗಂಟೆ ನೇರ ಪ್ರಸಾರ ಆಗಲಿದೆ. ಇಲ್ಲಿ ವಾಹಿನಿಯಲ್ಲಿ ಪ್ರಸಾರವಾಗುವ ದಿನದ ಎಪಿಸೋಡಿನ ಹೊರತಾಗಿಯೂ ಹಲವು ವೈವಿಧ್ಯದ ಎಕ್ಸ್ಕ್ಲೂಸಿವ್ ಮತ್ತು ಅನ್‌ಸೀನ್ ಮನರಂಜನಾ ಕಂಟೆಂಟ್ ಗಳನ್ನು ನೋಡಬಹುದು.

ಜೊತೆಗೆ ಈ ವೇದಿಕೆಯಲ್ಲಿ ಪ್ರೇಕ್ಷಕರಿಗೆ ಸಂವಾದ ನಡೆಸುವ ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲದೆ ಟೀವಿಯಲ್ಲಿ ಷೋ ನೋಡಿ ಅಲ್ಲಿ ಕೇಳಲಾದ ಪ್ರಶ್ನೆಗಳಿಗೆ ಜಿಯೋ ಸಿನಿಮಾದಲ್ಲಿ ಉತ್ತರಿಸುವ ಮೂಲಕ ಪ್ರತಿದಿನವೂ ರೋಮಾಂಚನಕಾರಿ ಬಹುಮಾನಗಳನ್ನು ಪ್ರೇಕ್ಷಕರು ಗೆಲ್ಲಬಹುದು ಎಂದರು. ಒಟ್ಟರೆ ಬಹಳ ಸುದೀರ್ಘವಾಗಿ ಬಿಗ್ ಬಾಸ್ ಕಾರ್ಯಕ್ರಮದ ರೂಪರೇಷೆಗಳನ್ನು ಸುಧೀರ್ಘವಾಗಿ ತಂಡ ಹೊರ ಹಾಕಿತು

Visited 1 times, 1 visit(s) today
error: Content is protected !!