Cini NewsSandalwood

ತರುಣ್ ಸುಧೀರ್ ನಿರ್ಮಾಣದ ಹೊಸ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಡಿ.ಇಮ್ಮಾನ್ ಸ್ವರ

Spread the love

ಕನ್ನಡದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ತರುಣ್ ಸುಧೀರ್ ಬಳಗದಲ್ಲಿ ಕೆಲಸ ಮಾಡಿರುವ ಪುನೀತ್ ರಂಗಸ್ವಾಮಿ ಎಂಬುವವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರ್ತಿರುವ ನೈಜ ಘಟನೆಯ “ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ”ಗೆ ಈಗ ಸಂಗೀತ ನಿರ್ದೇಶಕರು ಸಿಕ್ಕಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಮ್ಯೂಸಿಕ್ ಮಾಂತ್ರಿಕ ಡಿ.ಇಮ್ಮಾನ್ ತರುಣ್ ನಿರ್ಮಾಣದ ಚಿತ್ರಕ್ಕೆ ಟ್ಯೂನ್ ಹಾಕಲಿದ್ದಾರೆ.

ಇಮ್ಮಾನ್ ಮೂಲತಃ ತಮಿಳು ಸಂಗೀತ ನಿರ್ದೇಶಕ ಮತ್ತು ಗಾಯಕ. ತಮಿಳು ಹೊರತಾಗಿ ಅವರು ಕನ್ನಡ, ತೆಲುಗು, ಹಿಂದಿ, ಮಲಯಾಳಂ, ಚಿತ್ರಗಳು ಕೂಡ ಸಂಗೀತ ನೀಡಿದ್ದಾರೆ. ಡಿ.ಇಮ್ಮಾನ್ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’, ಪುನೀತ್ ಅಭಿನಯದ ನಟಸಾರ್ವಭೌಮ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಕನ್ನಡದಲ್ಲಿ ತಮ್ಮ ಸಪ್ತ ಸ್ವರದ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ.

ಚಾಮರಾಜನಗರದ ಮೂಲದ ಪ್ರೇಮ ಕಥೆಗೆ ರಕ್ಷಿತಾ ಪ್ರೇಮ್ ಸಹೋದರ ರಾಣಾ ಈ ಚಿತ್ರದ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆಯ ಟ್ಯಾಗ್‌ ಲೈನ್‌ ಇರುವ ಹೆಸರಿಡದ ಚಿತ್ರಕ್ಕೆ ಮಹಾನಟಿ ಖ್ಯಾತಿಯ ಪ್ರಿಯಾಂಕ ಅವರು ನಾಯಕಿ ಚಿತ್ರರಂಗಕ್ಕೆ ಮೊದಲ‌ ಹೆಜ್ಜೆ ಇಡುತ್ತಿದ್ದಾರೆ.

ಈ ಚಿತ್ರಕ್ಕೆ ತರುಣ್ ಮತ್ತು ಅಟ್ಲಾಂಟಾ ನಾಗೇಂದ್ರ ಎಂಬುವವರು ಜೊತೆ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಈ ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ ಇರಲಿದೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಉಳಿದ ತಾರಾಬಳಗವನ್ನು ಚಿತ್ರತಂಡ ಪರಿಚಯಿಸಲಿದೆ.

Visited 1 times, 1 visit(s) today
error: Content is protected !!