Cini NewsMovie ReviewSandalwood

ನರಕ ದರ್ಶನದ ಪುರಾಣ…’ರುದ್ರ ಗರುಡ ಪುರಾಣ’ ಚಿತ್ರವಿಮರ್ಶೆ (ರೇಟಿಂಗ್ : 3 /5)

Spread the love

ರೇಟಿಂಗ್ : 3 /5
ಚಿತ್ರ : ರುದ್ರ ಗರುಡ ಪುರಾಣ
ನಿರ್ದೇಶಕ : ನಂದೀಶ್
ನಿರ್ಮಾಪಕ : ಅಶ್ವಿನಿ ವಿಜಯ್ ಲೋಹಿತ್
ಸಂಗೀತ : ಕೃಷ್ಣಪ್ರಸಾದ್
ಛಾಯಾಗ್ರಹಣ : ಸಂದೀಪ್
ತಾರಾಗಣ : ರಿಷಿ , ಪ್ರಿಯಾಂಕ ಕುಮಾರ್, ಗಿರಿ , ವಿನೋದ್ ಆಳ್ವ , ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಅಶ್ವಿನಿ ಗೌಡ, ಸಿದ್ಲಿಂಗು ಶ್ರೀಧರ್ , ಆಡುಸುಮಲ್ಲಿ ಜ್ವಾಲಾ ಕೋಟಿ , ಪ್ರಭಾಕರ್, ರಾಮ್ ಪವನ್ ಹಾಗೂ ಮುಂತಾದವರು…

ಸಾಮಾನ್ಯವಾಗಿ ಪಾಪ ಪುಣ್ಯದ ಲೆಕ್ಕಾಚಾರ ಭಗವಂತನಿಗೆ ಬಿಟ್ಟಿದ್ದು ಅನ್ನೋ ಮಾತಿದೆ. ಆದರೆ ಕಲಿಯುಗದಲ್ಲಿ ಕಲ್ಕಿಯೂ ಅವತಾರ ತಾಳಿ ಸರಿ ತಪ್ಪುಗಳಿಗೆ ಶಿಕ್ಷೆ ನೀಡುವ ಮುನ್ನವೇ… ಈ ವ್ಯಕ್ತಿ ಒಬ್ಬ ಪಾಪಿಗಳಿಗೆ ತಕ್ಕ ಪಾಠ ಕಲಿಸಲು ಮಾಡುವ ರಣತಂತ್ರದ ಸುತ್ತ ಸಸ್ಪೆನ್ಸ್ , ಥ್ರಿಲ್ಲರ್ , ಪೊಲೀಸ್ , ಪೊಲಿಟಿಕಲ್ ಹಾಗೂ ಹಾರರ್ ಟಚ್ ಮೂಲಕ ಸಾಗುವ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ ರುದ್ರ “ಗರುಡ ಪುರಾಣ”.

ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಯಾಗಿ ರೌಡಿಗಳನ್ನು ಸದೆಬಡೆಯುವ ಇನ್ಸ್ಪೆಕ್ಟರ್ ಗರುಡ (ರಿಷಿ). ರಾಜಕೀಯ ನಾಯಕ ಎಂಎಲ್ಎ ದೇವಿ ಶೆಟ್ಟಿ (ವಿನೋದ್ ಆಳ್ವ)ಯ ಪುತ್ರ ಮನೋಜ್ ನಿಗೂಢವಾಗಿ ಕಣ್ಮರೆಯಾಗಿರುತ್ತಾನೆ. ಈ ವಿಚಾರದಿಂದ ಎಂಎಲ್ಎ ತನ್ನ ರಾಜಕೀಯ ಜೀವನಕ್ಕೆ ಎಲ್ಲಿ ಮುಳುಗುವಾಗುತ್ತದೋ ಎಂಬ ಭಯದಿಂದ ತನ್ನ ಪ್ರಭಾವ ಬಳಸಿ ಅಧಿಕೃತವಾಗಿ ತನಿಖೆ ಮಾಡಿಸದೆ ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಗುಪ್ತವಾಗಿ ತನ್ನ ಮಗನನ್ನ ಹುಡುಕಿಸಲು ಮುಂದಾಗುತ್ತಾನೆ.

ಈ ಪ್ರಕರಣಕ್ಕೆ ಸೂಕ್ತ ವ್ಯಕ್ತಿ ಎಂದು ಖಡಕ್ ಅಧಿಕಾರಿ ರುದ್ರನಿಗೆ ಮನೋಜ್ ನನ್ನ ಪತ್ತೆ ಹಚ್ಚುವ ಜವಾಬ್ದಾರಿಯನ್ನು ನೀಡುತ್ತಾರೆ. ಒಬ್ಬಂಟಿ ರುದ್ರನಿಗೆ ಗೆಳತಿ ದಿವ್ಯ (ಪ್ರಿಯಾಂಕ ಕುಮಾರ್) ಪರಿಚಯವಾಗಿ ಪ್ರೀತಿಯ ಕಡೆ ಮನಸ್ಸು ವಾಗುತ್ತದೆ. ಇವರಿಬ್ಬರ ಪ್ರೀತಿಗೆ ಗೋವಿಂದು (ಡುಮ್ಮ ಗಿರಿ) ಪೊಲೀಸ್ ಪೇದೆ ಸಾತ್ ನೀಡುತ್ತಾನೆ.

ಇನ್ನು ಇಬ್ಬರು ಹಿರಿಯ ಅಧಿಕಾರಿಗಳ ಅಗ್ಗ ಜಗ್ಗಾಟದ ನಡುವೆ ಈ ಕೇಸಿನ ಜಾಡನ್ನ ಹಿಡಿದು ಮುಂದೆ ಸಾಗುವ ರುದ್ರನಿಗೆ ಚಿತ್ರ ವಿಚಿತ್ರ ಘಟನೆಗಳು ಎದುರಾಗುತ್ತಾ ಹೋಗುತ್ತದೆ. ಸುಮಾರು 25 ವರ್ಷಗಳ ಹಿಂದೆ ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ದ ಬಸ್ಸೊಂದು ಪ್ರಪಾತಕ್ಕೆ ಬಿದ್ದು ಅಪಘಾತಕ್ಕೀಡಾಗಿ ಎಲ್ಲರೂ ಸಾವನಪುತ್ತಾರೆ.

ಇದರ ಹಿಂದೆಯೂ ಒಂದಷ್ಟು ರಹಸ್ಯದ ವಿಚಾರ ತೆರೆದುಕೊಳ್ಳುತ್ತದೆ. ಈ ಪ್ರಕರಣವನ್ನು ಭೇದಿಸುತ್ತಾ ಹೋಗುವ ರುದ್ರನಿಗೆ ಹಲವರ ಮೇಲೆ ಅನುಮಾನವೂ ಮೂಡುತ್ತದೆ ಹಾಗೂ ಕಾಣದ ಶಕ್ತಿ ಆತ್ಮದ ಕೈವಾಡವು ಇದೆಯಾ ಎಂಬ ಗೊಂದಲವು ಮೂಡುತ್ತದೆ. ಇನ್ನು ನಾಪತ್ತೆ ಆದ ಎಂಎಲ್ಎ ಪತ್ರ ಸಿಗುವ ಹಂತಕ್ಕೆ ಬರುವುದರಲ್ಲಿ ರೋಚಕ ತಿರುಗು ಎದುರಾಗಿ ಸತ್ಯದ ಮೂಲಕ ಪಾಪಿಗಳ ಅಟ್ಟಹಾಸದ ವಿಚಾರ ಹೊರಬರುತ್ತದೆ.

ಅಪಹರಿಸಿದ್ದು ಯಾರು…
ರುದ್ರನಿಗೆ ಸಿಕ್ಕ ಸುಳಿವು ಏನು..
ಈ ಪ್ರಕರಣಕ್ಕೂ ಹಾಗೂ 25 ವರ್ಷಗಳ ಹಿಂದಿನ ಘಟನೆಗೂ ಏನು ಸಂಬಂಧ..?
ಅಗೋಚರ ಶಕ್ತಿ ಕೈವಾಡವೇ..
ಕ್ಲೈಮಾಕ್ಸ್ ಹೇಳುವ ಉತ್ತರ ಏನು…
ಈ ಎಲ್ಲಾ ವಿಚಾರ ತಿಳಿದುಕೊಳ್ಳಬೇಕಾದರೆ ಒಮ್ಮೆ ರುದ್ರ ಗರುಡ ಪುರಾಣ ಚಿತ್ರ ನೋಡಬೇಕು.

ಇನ್ನು ನಿರ್ದೇಶಕ ನಂದೀಶ್ ಆಯ್ಕೆ ಮಾಡಿಕೊಂಡಿರುವ ಕಥೆ ವಿಭಿನ್ನವಾಗಿದ್ದು , ಪುರಾಣದ ಶ್ಲೋಕಕ್ಕೆ ಪೂರಕವಾಗಿ ಪಾಪ ಪುಣ್ಯದ ನಡುವೆ ನಿಗೂಢ ಹಾದಿಯಲ್ಲಿ ಸಾಗಿ , ಹಾರರ್ ಟಚ್ ನೀಡುತ್ತಾ ಮೇಲ್ನೋಟಕ್ಕೆ ಥ್ರಿಲ್ಲರ್‍, ಸಸ್ಪೆನ್ಸ್ ಎಂದನಿಸಿದರೂ, ಮನ ಮುಟ್ಟುವ ಅಂಶವನ್ನು ಬೆಸೆದುಕೊಂಡಿದೆ.

ಒಂದಷ್ಟು ವಿಚಾರ ಇದ್ದಲ್ಲೇ ಗಿರ್ಕಿ ಹೊಡೆದಿದ್ದು, ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು , ಇದರ ನಡುವೆ ಪ್ರೇಕ್ಷಕರನ್ನು ಕೂರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕರ ಧೈರ್ಯವನ್ನು ಕೂಡ ಮೆಚ್ಚಲೇಬೇಕು. ಇನ್ನು ಚಿತ್ರದ ಸಂಗೀತ , ಹಿನ್ನೆಲೆ ಸಂಗೀತ , ಛಾಯಾಗ್ರಹಣದ ಕೈಚಳಕ , ಸಂಕಲನ ಕೆಲಸ ಉತ್ತಮವಾಗಿ ಮೂಡಿಬಂದಿದೆ. ಇನ್ನು ನಾಯಕ ರಿಷಿ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರಕ್ಕೆ ಜೀವ ತುಂಬಿದ್ದು , ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ.

ಇನ್ನು ತಮ್ಮ ಮ್ಯಾನೇರಿಸಂ ಹಾಗೂ ಡೈಲಾಗ್ ಡೆಲಿವರಿ ಗೆ ಹೆಚ್ಚು ಒತ್ತು ಕೊಟ್ಟು ಗಮನ ಸೆಳೆದಿದ್ದಾರೆ. ಮುದ್ದಾಗಿ ಕಾಣುವ ನಾಯಕಿ ಪ್ರಿಯಾಂಕಾ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ. ಎಂಎಲ್ಎ ಪಾತ್ರದಲ್ಲಿ ತಮ್ಮ ಗತ್ತಿನ ಮೂಲಕ ವಿನೋದ್‍ ಆಳ್ವ ಗಮನ ಸೆಳೆಯುತ್ತಾರೆ. ಅಶ್ವಿನಿ , ಸಿದ್ಲಿಂಗು ಶ್ರೀಧರ್‍, ಅವಿನಾಶ್‍ , ಗಿರಿ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಇದೊಂದು ರಿವೆಂಜ್ ಚಿತ್ರವಾಗಿದ್ದು , ಬಹಳ ಕುತೂಹಲಕಾರಿಯಾಗಿ ಸಾಗಿರುವ ಈ ರುದ್ರ ಗರುಡ ಪುರಾಣ ಚಿತ್ರವನ್ನು ಒಮ್ಮೆ ನೋಡುವಂತಿದೆ.

Visited 1 times, 1 visit(s) today
error: Content is protected !!