Cini NewsSandalwood

ರಮೇಶ್ ರೆಡ್ಡಿ ನಿರ್ಮಾಣದ “ಘುಸ್ಪೈಥಿಯಾ” ಹಿಂದಿ ಚಿತ್ರದ ಟ್ರೇಲರ್ ಬಿಡುಗಡೆ

Spread the love

ಸ್ಯಾಂಡಲ್​ವುಡ್​ನಲ್ಲಿ ‘ಉಪ್ಪು ಹುಳಿ ಖಾರ’, ‘ನಾತಿಚರಾಮಿ’, ‘ಪಡ್ಡೆಹುಲಿ’, ‘100’, ‘ಗಾಳಿಪಟ 2’ ಚಿತ್ರಗಳನ್ನು ನಿರ್ಮಿಸಿರುವ ಹಾಗೂ ಪ್ರಸ್ತುತ ಬಹು ನಿರೀಕ್ಷಿತ “45” ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕ ರಮೇಶ್ ರೆಡ್ಡಿ ಅವರು ಬಾಲಿವುಡ್ ನಲ್ಲಿ “ಘುಸ್ಪೈಥಿಯಾ” ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಮೇಶ್ ರೆಡ್ಡಿ, ಜ್ಯೋತಿಕ ಶೆಣೈ ಹಾಗೂ ಮಂಜರಿ ಸುಸಿ ಗಣೇಶನ್ ನಿರ್ಮಿಸಿರುವ ಈ ಚಿತ್ರವನ್ನು ಸುಸಿ ಗಣೇಶನ್ ನಿರ್ದೇಶಿಸಿದ್ದಾರೆ. ಸೈಬರ್ ಕ್ರೈಮ್ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಮುಂಬೈನಲ್ಲಿ ಅದ್ದೂರಿಯಾಗಿ ನೆರವೇರಿತು.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕನ್ನಡದಲ್ಲೇ ಮಾತನಾಡಿ ಎಲ್ಲರ ಗಮನ ಸೆಳೆದ ನಿರ್ಮಾಪಕ ರಮೇಶ್ ರೆಡ್ಡಿ, ಈ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರವಿರಲಿ. ಮುಂದೆ ಕೂಡ ಹಿಂದಿ ಚಿತ್ರಗಳನ್ನು ನಿರ್ಮಿಸುತ್ತೇನೆ ಎಂದು ಹೇಳಿದ್ದಾರೆ. ಆಗಸ್ಟ್ 9 ರಂದು AA ಫಿಲಂಸ್ ಮೂಲಕ ಬಿಡುಗಡೆಯಾಗಲಿರುವ ಈ ಚಿತ್ರದ ತಾರಾಬಳಗದಲ್ಲಿ ವಿನೀತ್ ಕುಮಾರ್ ಸಿಂಗ್, ಊರ್ವಶಿ ರೌಟೇಲ, ಅಕ್ಷಯ್ ಒಬೆರಾಯ್ ಮುಂತಾದವರಿದ್ದಾರೆ.

Visited 1 times, 1 visit(s) today
error: Content is protected !!