Cini NewsSandalwood

’ಸೂರ್ಯನ ಸಾಟರ್ಡೆ’ ಚಿತ್ರದಲ್ಲಿ ಪ್ರಿಯಾಂಕಾ ಮೋಹನ್ ಖಾಕಿ ಖದರ್ ಲುಕ್

Spread the love

ನ್ಯಾಚುರಲ್ ಸ್ಟಾರ್ ನಾನಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ’ಸೂರ್ಯನ ಸಾಟರ್ಡೆ’. ಈ ಚಿತ್ರದಲ್ಲಿ ನಾನಿಗೆ ಜೋಡಿಯಾಗಿ ಪ್ರಿಯಾಂಕಾ ಮೋಹನ್ ಅಭಿನಯಿಸುತ್ತಿದ್ದಾರೆ. ಗ್ಯಾಂಗ್ ಲೀಡರ್ ನಂತರ ನಾನಿ ಹಾಗೂ ಪ್ರಿಯಾಂಕಾ ಈ ಚಿತ್ರಕ್ಕೆ ಒಂದಾಗಿದ್ದು, ಇಂದು, ಪ್ರಿಯಾಂಕಾ ಮೋಹನ್ ಅವರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ. ಪ್ರಿಯಾಂಕಾ ಮೋಹನ್ ಚಾರುಲತಾ ಎಂಬ ಪೋಲೀಸ್ ಪಾತ್ರ ಪೋಷಿಸಸುತ್ತಿದ್ದು, ಭುಜದ ಮೇಲೆ ಬ್ಯಾಗ್ ಏರಿಸಿಕೊಂಡು ಮಂದಹಾಸ ಬೀರಿರುವ ಲುಕ್ ನ್ನು ಚಿತ್ರತಂಡ ರಿವೀಲ್ ಮಾಡಿದೆ.

’ಸೂರ್ಯನ ಸಾಟರ್ಡೆ’ ಪಕ್ಕಾ ಮಾಸ್ ಆಕ್ಷನ್ ಎಂಟರ್ ಟೈನರ್ ಸಿನಿಮಾ ಆಗಿದ್ದು, ಈ ಹಿಂದೆ ನಾನಿ ನಾಯಕನಾಗಿದ್ದ ‘ಅಂಟೆ ಸುಂದರಾನಿಕಿ’ ಎಂಬ ಹಾಸ್ಯ ಪ್ರಧಾನ ಕೌಟುಂಬಿಕ ಪ್ರೇಮಕತಾ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಆತ್ರೇಯಾ ಮತ್ತೊಮ್ಮೆ ನಾನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ತಮಿಳು ಸ್ಟಾರ್ ನಟ ಎಸ್‌ಜೆ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಜೇಕ್ಸ್ ಬಿಜಾಯ್ ಸಂಗೀತ, ಮುರಳಿ ಜಿ ಛಾಯಾಗ್ರಹಣವಿದೆ. ’ಸೂರ್ಯನ ಸಾಟರ್ಡೆ’ ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬರಲಿದೆ. ತ್ರಿಬಲ್ ಆರ್ ಸೇರಿದಂತೆ ಹಲವರು ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಡಿಡಿವಿ ಎಂಟರ್ ಟೈನರ್ ಬ್ಯಾನರ್ ನಡಿಯಲ್ಲಿ ದಾನಯ್ಯ ಹಾಗೂ ಕಲ್ಯಾಣ್ ದಾಸರಿ ’ಸೂರ್ಯನ ಸಾಟರ್ಡೆ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

 

Visited 1 times, 1 visit(s) today
error: Content is protected !!