Cini NewsSandalwood

ಕರಾವಳಿಯ ಭಾಗದ ಸುತ್ತ “ಅಧಿಪತ್ರ”…ಕುತೂಹಲ ಹೆಚ್ಚಿಸಿದ ಟೀಸರ್.

Spread the love

ಸಿನಿಮಾವೊಂದು ಆರಂಭವಾದ ಬಳಿಕ ಕ್ರಿಯಾಶೀಲತೆಯ ಹಾದಿಯಲ್ಲಿಯೇ ಪ್ರೇಕ್ಷಕರನ್ನು ಸೆಳೆಯೋದಿದೆಯಲ್ಲಾ? ಅದು ನಿಜಕ್ಕೂ ಸವಾಲಿನ ಸಂಗತಿ. ಈ ನಿಟ್ಟಿನಲ್ಲಿ ನೋಡುವುದಾದರೆ, ಅಧಿಪತ್ರ ಮೊದಲ ಪ್ರಯತ್ನದಲ್ಲಿಯೇ ಗೆದ್ದಂತಿದೆ. ಬಿಡುಗಡೆಯಾಗಿರುವ ಅಧಿಪತ್ರ ಟೀಸರ್ ಕುತೂಹಲವನ್ನು ಗರಿಗೆದರುವಂತೆ ಮಾಡಿದೆ.

ಕರಾವಳಿ ಭಾಗದ ಕಥೆ ಹೊತ್ತು ಬಂದಿರುವ ಅಧಿಪತ್ರ ಸಿನಿಮಾ ಮೊದಲ‌ ತುಣುಕಿನಲ್ಲಿ‌ ಕರಾವಳಿ ಭಾಗದ ವಿಶೇಷ ಆಚರಣೆ ಆಟಿ ಕಳಂಜಾ , ಯಕ್ಷಗಾನ, ಹುಲಿ ಕುಣಿತದ ಜೊತೆಗೆ ಪ್ರೇಕ್ಷಕರನ್ನು ಸೀಟಿನ‌ ತುದಿಗೆ ಕುರಿಸುವ ಕಂಟೆಂಟ್ ಕೂಡ ಇದೆ. ಆದರೆ ಆ ಕಂಟೆಂಟ್ ಏನೂ ಅನ್ನೋದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಖಾಕಿ‌ ಖದರ್ ನಲ್ಲಿ ರೂಪೇಶ್ ಶೆಟ್ಟಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ನಿರ್ದೇಶಕ‌ ಚಯನ್ ಶೆಟ್ಟೆ ಗಟ್ಟಿ ಕಥೆಯೊಂದನ್ನು ಹೊತ್ತು ಬಂದಿರುವ ಸೂಚನೆ ಕೊಟ್ಟಿದ್ದಾರೆ.

‘ಕಾಂತಾರ’ ಸಿನಿಮಾದ ಖ್ಯಾತಿಯ ಪ್ರಕಾಶ್ ತುಮಿನಾಡು, ಎಂ.ಕೆ.‌ ಮಠ, ರಘು ಪಾಂಡೇಶ್ವರ್, ದೀಪಕ್ ರೈ, ಕಾರ್ತಿಕ್ ಭಟ್, ಅನಿಲ್ ಉಪ್ಪಾಲ್, ಪ್ರಶಾಂತ್ ತಾರಾಬಳಗದಲ್ಲಿದ್ದು, ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಜಾಹ್ನವಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.
ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್‌ನಡಿ‌ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮೇ ಗೌಡ ‌ಚಿತ್ರ ನಿರ್ಮಾಣ ಮಾಡಿದ್ದು, ಕಾರ್ತಿಕ್ ಶೆಟ್ಟಿ ಹಾಗೂ ಸತೀಶ್ ಶೆಟ್ಟಿ ಸಹ ನಿರ್ಮಾಣದಲ್ಲಿ ಹೆಗಲು ಕೊಟ್ಟಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿಯೇ ಬ್ಯುಸಿ ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ದಿನಾಂಕ ಘೋಷಿಸಲಿದೆ.

Visited 1 times, 1 visit(s) today
error: Content is protected !!