Cini NewsSandalwoodTV Serial

ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷ ಸುರೇಶ್. ಎನ್. ಎಂ.

ಬಹು ನಿರೀಕ್ಷಿತ 2022 – 23 ನೇ ಸಾಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಈ ಬಾರಿ ಜಿದ್ದಾಜಿದ್ದಿನಲ್ಲಿ ನಡೆದಿದೆ. ಅಧ್ಯಕ್ಷ ಸ್ಥಾನಕಾಗಿ ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಉಪಾಧ್ಯಕ್ಷರು , ಖಜಾಂಚಿ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವಲಯ ಸಮಿತಿಯ ಸದಸ್ಯರ ಭವಿಷ್ಯ ಹೊರಬಿದ್ದಿದೆ. ಒಟ್ಟು ಮತಗಳು 1599, ಅದರಲ್ಲಿ 967 ಮತಗಳು ಚಲಾವಣೆಯಾಗಿದೆ.

ಗೆದ್ದವರ ಪಟ್ಟಿ :-
1. ಅಧ್ಯಕ್ಷ – ಸುರೇಶ್. ಎನ್. ಎಂ.

2. ಉಪಾಧ್ಯಕ್ಷ ನಿರ್ಮಾಪಕ – ಪ್ರಮೀಳಾ ಜೋಷಾಯ್
3. ಉಪಾಧ್ಯಕ್ಷ ವಿತರಕ – ಜಿ. ವೆಂಕಟೇಶ್
4. ಉಪಾಧ್ಯಕ್ಷ ಪ್ರದರ್ಶಕ – ನರಸಿಂಹಲು

5. ಗೌರವ ಉಪಾಧ್ಯಕ್ಷ ನಿರ್ಮಾಪಕ – ಬಾ. ಮ. ಗಿರೀಶ್
6. ಗೌರವ ಉಪಾಧ್ಯಕ್ಷ ವಿತರಕ – ಕರಿಸುಬ್ಬು
7. ಗೌರವ ಉಪಾಧ್ಯಕ್ಷ ಪ್ರದರ್ಶಕ – ಸುಂದರ್ ರಾಜು

8. ಖಜಾಂಚಿ – ಜಯಸಿಂಹ ಮುಸುರಿ

ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವಲಯ ಸಮಿತಿಯ ಸದಸ್ಯರ ಆಯ್ಕೆಯಾಗಿದ್ದು ,ಗೆದ್ದ ತಂಡದವರ ಸಂಭ್ರಮ ಜೋರಾಗಿದ್ದು ನಾಳೆ ಚುನಾಯಿತರಾಗಿರುವ ಪದಾಧಿಕಾರಿಗಳಿಗೆ  ಅಧಿಕಾರ ಹಸ್ತಾಂತರ ವಾಗಲಿದೆ.

error: Content is protected !!