Cini NewsSandalwood

ಯುವ ಪ್ರತಿಭೆಗಳ ‘ಲೈಫ್ ಟುಡೇ’ ಚಿತ್ರದ ಸಿಕ್ಕರೆ ಸಿಕ್ಕರೆ… ಸಾಂಗ್ ರೀಲಿಸ್.

Spread the love

ಕಿರಣ್ ಆದಿತ್ಯ ಮತ್ತು ಲೇಖ ಚಂದ್ರ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ, ಕಾಂತ ಕಣ್ಣಲ್ಲಿ ಅವರ ನಿರ್ದೇಶನ ದಲ್ಲಿ ಮೂಡಿ ಬರುತ್ತಿರುವ ಮೇಘನಾ ಪ್ರದೀಪ್ ಅವರು ನಿರ್ಮಾಣ ಮಾಡಿರುವ ಚೊಚ್ಚಲ ಸಿನಿಮಾ ‘ಲೈಫ್ ಟುಡೇ’ ಸಿನಿಮಾದ ಸಿಕ್ಕರೆ ಸಿಕ್ಕರೆ ಸಾಂಗ್ ನ ಲಾಂಚ್ ಇವೆಂಟ್ ಎಮ್.ಎಸ್ ರಾಮಯ್ಯ ಕಾಲೇಜು ಮೈದಾನದಲ್ಲಿ ನಡೆಯಿತು.
ಎಂ.ಎಸ್ ರಾಮಯ್ಯ ಕಾಲೇಜಿನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮಾನ್ವಿತ ಹರೀಶ್, ಬಿಗ್ ಬಾಸ್ ಖ್ಯಾತಿಯ ರಿಷಾ ಗೌಡ ಮತ್ತು ಅಯೋಗ್ಯ ಮಹೇಶ್ ಅತಿಥಿಯಾಗಿ ಆಗಮಿಸಿ ತಂಡಕ್ಕೆ ಶುಭಕೋರಿದರು.

‘ಸಿಕ್ಕರೆ ಸಿಕ್ಕರೆ’ ಹಾಡಗೆ ಕೆ ರಾಮನಾರಾಯಣ್ ಅವರು ಸಾಹಿತ್ಯ ಬರೆದಿದ್ದು. ಈಗಾಗಲೇ ಸಿದ್ದಯ್ಯ ಸ್ವಾಮಿ ಬನ್ನಿ ಹಾಗೂ ಅಣ್ತಮ್ಮ ಜೋಡೆತ್ತು ಹಾಡನ್ನು ಹಾಡಿ ಫುಲ್ ಆನ್ ಟ್ರೆಂಡ್ ನಲ್ಲಿರುವ ಜೋಗಿ ಪ್ರೇಮ್ ಅವರು ಈ ಹಾಡಿಗೆ ಮತ್ತೆ ತಮ್ಮ ಧನಿಯನ್ನು ನೀಡಿದ್ದಾರೆ.
ಕನ್ನಡ ಸಿನಿಮಾ ರಂಗದಲ್ಲಿ ಲವ್ ಬ್ರೇಕ್ ಅಪ್ ಸಾಂಗ್ ಗಳ ದೊಡ್ಡ ಪಟ್ಟಿಯೇ ಇದೆ.ಇವತ್ತು ಬಿಡುಗಡೆಯಾದ ‘ಲೈಫ್ ಟುಡೇ’ ಸಿನ್ಮಾದ ಈ ‘ಸಿಕ್ಕರೆ ಸಿಕ್ಕರೆ’ ಹಾಡು ಕೂಡ ಇದೆ ಲಿಸ್ಟ್ ಸೇರ್ಪಡೆಯಾಗಿರುವ ಹೊಸ ಸಾಂಗ್. ಅದ್ಭುತವಾದ ಲಿರಿಕ್ಸ್ ಮತ್ತು ಪ್ರೇಮ್ ಅವರ ಧನಿ ಮತ್ತೆ ಮ್ಯಾಜಿಕ್ ಮಾಡಿದೆ.

ಲೈಫ್ ಟುಡೇ ಸಿನಿಮಾದ ನಾಯಕ ನಟ ಕಿರಣ್ ಆದಿತ್ಯ ರಿಯಾಲಿಟಿ ನ ಇಟ್ಕೊಂಡು ಮಾಡಿರೋ ಕಂಟೆಂಟ್ ಅದಕ್ಕೆ ಕಮರ್ಷಿಯಲ್ ಟಚ್ ಕೊಟ್ಟಿದೆ.ಕಾಲೇಜು ಯೂಥ್ಸ್ ಗೆ ಮಾಡಿರೋ ಸಿನಿಮಾ ಎಂದು ಹೇಳಿದರು. ಅಲ್ಲದೇ ತಾವು ಯಶ್ ಫ್ಯಾನ್ ಅಣ್ತಮ್ಮ ಇಲ್ಲಿ ಯಾರೂ ಹೀರೋಗಳನ್ನ ಹುಟ್ಟು ಹಾಕಲ್ಲ ನಮಗೆ ನಾವೇ ಹೀರೋ ಆಗ್ಬೇಕು ಅನ್ನೋದನ್ನ ಪಾಲಿಸ್ತೀನಿ ಎಂದರು.ಮಾನ್ವಿತ ಹರೀಶ್ ಅವರು ” ಸಾಂಗ್ ನೋಡಿದೆ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಸಿನಿಮಾ ಮಾಡೋದು ಎಷ್ಟು ಕಷ್ಟ ಅಂತ ಗೊತ್ತು. ಒಳ್ಳೆಯದಾಗ್ಲಿ ಎಂದು ವಿಶ್ ಮಾಡಿದ್ರು.

ಅಯೋಗ್ಯ ಮಹೇಶ್ ಅವರು ಸಾಂಗ್ ಬಗ್ಗೆ ಮಾತನಾಡುತ್ತಾ “ನನ್ನ ಫೇವರಿಟ್ ಶ್ರೀಧರ್ ಸರ್ ಹಾಡು.ಮುಸ್ಸಂಜೆ ಮಾತು ಆಗಲಿ ಅವರ ಎಲ್ಲಾ ಹಾಡು ತನ್ನದೇ ಆದ ಶೈಲಿಯನ್ನು ಹೊಂದಿದೆ.ಜತೆಗೆ ಸಿನಿಮಾದ ಎಕ್ಸಕ್ಯುಟಿವ್ ಪ್ರೊಡ್ಯೂಸರ್ ವೃಷಾ ಪಾಟೀಲ್ ಹಾಗೆ ಕಿರಣ್ ಅವರ ಶ್ರಮವನ್ನು ನಾನು ತುಂಬಾ ವರ್ಷಗಳಿಂದ ನೋಡ್ಕೊಂಡು ಬಂದಿದ್ದೇನೆ ಎಂದು ಹೇಳಿದ ಅವರು ಸಿನಿಮಾದ ಹೀರೋ ಕಿರಣ್ ಆದಿತ್ಯ ಅವರನ್ನು ಉದ್ದೇಶಿಸಿ ಡಿಬಾಸ್, ಸುದೀಪ್, ಧ್ರುವ ಸರ್ಜಾ, ಯಶ್ ಅವ್ರೆಲ್ಲಾರು ಬಂದಿದ್ದು ಜೀರೋ ದಿಂದಾನೆ. ನಿಮ್ಮದು ಈವಾಗ ಶುರುವಾಗ್ತಿದೆ.ನಿಮ್ಮ ಲೈಫ್, ಲೈಫ್ ಟುಡೇ ಇಂದಾನೆ ಬದಲಾಗುತ್ತೆ ಅಂತ ಹೇಳಿದರು.

Visited 1 times, 1 visit(s) today
error: Content is protected !!