Cini NewsSandalwood

ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ಮಹಿಳಾ‌ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸಾಥ್

Spread the love

ಮಕ್ಕಳ ಚಿತ್ರಕ್ಕೆ ವೇದಿಕೆ ಕಲ್ಪಿಸಿ ಕೊಡುವ ಉದ್ದೇಶದಿಂದ ‘ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್’ ‘ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ’ವನ್ನು ಆರಂಭಿಸಿದ್ದು, ಇದರ ಎರಡನೇ ಆವೃತ್ತಿಗೆ ನಿನ್ನೆ ಚಾಲನೆ ಸಿಕ್ಕಿದೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ‘ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ’ಕ್ಕೆ ಚಾಲನೆ ನೀಡುವ ಮೂಲಕ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಿರ್ಮಾಪಕರಾದ ಭಾ.ಮಾ.ಹರೀಶ್, ಉಮೇಶ್ ಬಣಕಾರ್ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಎಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಬೆಂಗಳೂರಿನ ಜಿಟಿ‌ ಮಾಲ್ ನಲ್ಲಿರುವ ಉತ್ಸವ ಲೆಗಸಿಯಲ್ಲಿ ಮಕ್ಕಳ‌ ಚಲನಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಬಳಿಕ ನಾಗಲಕ್ಷ್ಮೀ ಚೌಧರಿ ಮಾತನಾಡಿ, ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಮಕ್ಕಳನ್ನು ಹದಿನಾರು ವರ್ಷದವರೆಗೆ ಕಲಾವಿದರನ್ನಾಗಿ ಪರಿವರ್ತನೆ ಮಾಡುವಂತಹ ಸಂಸ್ಥೆಯಾಗಿದೆ. ಅದು ಬಹಳ ಎತ್ತರಕ್ಕೆ ಬೆಳೆಯಲಿ. ಮಕ್ಕಳ‌ ಕಲೆಯನ್ನು ಯಶಸ್ಸಿನತ್ತ ತೆಗೆದುಕೊಂಡು ಹೋಗಲಿ. ಅವರು ನಡೆಸುತ್ತಿರುವ ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ‌ ಚಲನಚಿತ್ರ ಪ್ರದರ್ಶನ ಯಶಸ್ವಿಯಾಗಲಿ. ನೂರಾರು ಪ್ರತಿಭೆಗಳಿಗ ಅವಕಾಶ ಸಿಗಲಿ.‌‌ ಒಂದೊಳ್ಳೆ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದರು.

ಉಮೇಶ್ ಬಣಕಾರ್ ಮಾತನಾಡಿ, ಇದೊಂದು ಸುಂದರ ಕಾರ್ಯಕ್ರಮ. ಉಲ್ಲಾಸ್, ತಮ್ಮದೇ ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ನಡಿ ಮಕ್ಕಳನ್ನು ತಯಾರು ಮಾಡಿ ಸಿನಿಮಾ ಇಂಡಸ್ಟ್ರೀಗೆ ಬಿಡುವ ಕಾರ್ಯ ಮಾಡುತ್ತಿದ್ದಾರೆ.‌ ಇದರ ಜೊತೆಗೆ ಈಗ ಮಕ್ಕಳ ಚಲನಚಿತ್ರೋತ್ಸವ ಆರಂಭಿಸಿದ್ದು, ಅವರ ಈ ಜರ್ನಿಗೆ ಶುಭವಾಗಲಿ ಎಂದರು.

ಇದೇ ತಿಂಗಳ 22ರಿಂದ 26ರವೆಗೆ ಐದು ದಿನಗಳ ಕಾಲ ಎರಡನೇ ಆವೃತ್ತಿಯ ‘ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ’ ನಡೆಯಲಿದೆ. ಆಯ್ದ ಮಕ್ಕಳ ಸಿನಿಮಾಗಳಿಗೆ 18 ಬೇರೆ ಬೇರೆ ವಿಭಾಗದಲ್ಲಿ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗುತ್ತಿದೆ. ಈ ಬಾರಿ ಒಟ್ಟು 9 ಸಿನಿಮಾಗಳ ಪ್ರದರ್ಶನ ನಡೆಯಲಿದೆ. ಕನ್ನಡ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಕೇವಲ ಕನ್ನಡ ಭಾಷೆ ಚಿತ್ರಗಳ ಪ್ರದರ್ಶನವಿರಲಿದೆ.

Visited 1 times, 1 visit(s) today
error: Content is protected !!