Cini NewsSandalwoodTV Serial

*“ಸೀಟ್ ಎಡ್ಜ್” ನಿಂದ ಹೊರಬಂತು ‘ವ್ಲಾಗ್‌-1 ದಿ ಲೂಪ್‌’ ಕಂಟೆಂಟ್‌ ವಿಡಿಯೋ.*

ಸ್ಯಾಂಡಲ್ ವುಡ್ ನಲ್ಲಿ ಸಸ್ಪೆನ್ಸ್ , ಥ್ರಿಲ್ಲರ್ , ಹಾರರ್ ಕಂಟೆಂಟ್ ಚಿತ್ರಗಳು ಪ್ರೇಕ್ಷಕರನ್ನ ಬಹಳ ಬೇಗ ಸೆಳೆಯುತ್ತದೆ. ಆ ನಿಟ್ಟಿನಲ್ಲಿ ಯುವನಟ ಸಿದ್ಧು ಮೂಲಿಮನಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರ ‘ಸೀಟ್‌ ಎಡ್ಜ್‌’ ತೆರೆಗೆ ಬರಲು ತಯಾರಾಗುತ್ತಿದೆ. ಡಾರ್ಕ್‌ ಕಾಮಿಡಿಯ ಜೊತೆಗೆ ಹಾರರ್‌-ಥ್ರಿಲ್ಲರ್‌ ಶೈಲಿಯಲ್ಲಿ ಮೂಡಿಬರುತ್ತಿರುವ ‘ಸೀಟ್‌ ಎಡ್ಜ್‌’ ಸಿನಿಮಾದಲ್ಲಿ ನಾಯಕ ಸಿದ್ಧು ಮೂಲಿಮನಿ ಅವರಿಗೆ ರವೀಕ್ಷಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ⁠ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಕಿರಣ್, ಪುನೀತ್ ಬಾಬು, ತೇಜು ಪೊನ್ನಪ್ಪ, ಮನಮೋಹನ್ ರೈ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಈ ಹಿಂದೆ ತೆರೆಗೆ ಬಂದಿದ್ದ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಹಾಗೂ ‘ಕ್ರಿಟಿಕಲ್ ಕೀರ್ತನೆಗಳು’ ಮೊದಲಾದ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಚೇತನ್ ಶೆಟ್ಟಿ ‘ಸೀಟ್‌ ಎಡ್ಜ್‌’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಎನ್‌. ಆರ್‌. ಸಿನಿಮಾ ಪ್ರೊಡಕ್ಷನ್ಸ್‌’ ಬ್ಯಾನರಿನಲ್ಲಿ ಗಿರಿಧರ ಟಿ. ವಸಂತಪುರ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ತನ್ನ ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ ‘ಸೀಟ್‌ ಎಡ್ಜ್‌’ ಚಿತ್ರತಂಡ, ಇದೀಗ ‘ವ್ಲಾಗ್‌-1 ದಿ ಲೂಪ್‌’ ಎಂಬ ಹೆಸರಿನಲ್ಲಿ ‘ಸೀಟ್‌ ಎಡ್ಜ್‌’ ಸಿನಿಮಾದ ಟೀಸರ್‌ ಮತ್ತು ಕಂಟೆಂಟ್‌ ಝಲಕ್‌ ಅನ್ನು ಬಿಡುಗಡೆ ಮಾಡಿದೆ. ‘ಸೀಡ್‌ ಎಡ್ಜ್‌’ ಸಿನಿಮಾದ ‘ವ್ಲಾಗ್‌-1 ದಿ ಲೂಪ್‌’ ಝಲಕ್‌ ಬಿಡುಗಡೆ ಮಾಡಿ ಮಾತನಾಡಿದ ಚಿತ್ರತಂಡ, ‘ಸೀಟ್‌ ಎಡ್ಜ್‌’ನಲ್ಲಿರುವ ವಿಶೇಷತೆಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿತು.

ಮೊದಲಿಗೆ ಮಾತನಾಡಿದ ‘ಸೀಟ್‌ ಎಡ್ಜ್‌’ ಚಿತ್ರದ ನಾಯಕ ನಟ ಸಿದ್ಧು ಮೂಲಿಮನಿ, ‘ಇದೊಂದು ಔಟ್‌ ಅಂಡ್‌ ಔಟ್‌ ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯಲ್ಲಿ ಮೂಡಿಬಂದಿರುವ ಸಿನಿಮಾ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ನಾನೂಬ್ಬ ಯು-ಟ್ಯೂಬ್‌ ವ್ಲಾಗರ್‌ ಆಗಿ ಕಾಣಿಸಿಕೊಂಡಿದ್ದೇನೆ. ಯಾರೂ ಹೋಗದ ಭಯಾನಕ್ಕೆ ಜಾಗವನ್ನು ಪ್ರೇಕ್ಷಕರಿಗೆ ಪರಿಚಯಿಸಬೇಕು ಎಂದು ಹಠಕ್ಕೆ ಬಿದ್ದ ನಾನು, ಘೋಸ್ಟ್ ಟೌನ್ ಗೆ ಹೋಗಿ ಘೋಸ್ಟ್ ಹಂಟಿಂಗ್ ವೀಡಿಯೋ ಮಾಡಲು ನಿರ್ಧರಿಸುತ್ತೇನೆ. ಕೊನೆಗೆ ನಾನು ಅಂದುಕೊಂಡಂತೆ ಘೋಸ್ಟ್‌ ಹಂಟಿಂಗ್‌ ವಿಡಿಯೋ ಮಾಡಿ ಆಡಿಯನ್ಸ್‌ಗೆ ತೋರಿಸುತ್ತೇನಾ..? ಇಲ್ಲಿವಾ..? ಈ ಘೋಸ್ಟ್‌ ಹಂಟಿಂಗ್‌ ಅನ್ನೋದು ಹೇಗಿರುತ್ತದೆ ಎಂಬುದೇ ನನ್ನ ಪಾತ್ರ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.

ನಾಯಕಿ ರವೀಕ್ಷಾ ಶೆಟ್ಟಿ ಮಾತನಾಡಿ, ‘ನಾನು ಈ ಸಿನಿಮಾದಲ್ಲಿ ಮಧ್ಯಮ ವರ್ಗದ ಕಾಲೇಜ್‌ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಘೋಸ್ಟ್‌ ಹಂಟಿಂಗ್‌ಗೆ ಹೋಗುವ ಯು-ಟ್ಯೂಬರ್‌ ಜೊತೆಗೆ ನಾನು ಕೂಡ ತೊಂದರೆಗೆ ಸಿಲುಕಿಕೊಳ್ಳುತ್ತೇನೆ. ಎರಡು ಶೇಡ್‌ಗಳಿರುವಂಥ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿದೆ. ಇಡೀ ಸಿನಿಮಾದ ನನಗೆ ಸಾಕಷ್ಟು ವಿಷಯಗಳನ್ನು ಕಲಿಸಿದೆ. ಒಳ್ಳೆಯ ಅನುಭವಗಳನ್ನು ಕೊಟ್ಟಿದೆ. ಒಳ್ಳೆಯ ಕಥೆ, ಹಾಡು, ಡ್ಯಾನ್ಸ್‌, ಕಾಮಿಡಿ, ಸೆಂಟಿಮೆಂಟ್‌, ಸಸ್ಪೆನ್ಸ್‌-ಥ್ರಿಲ್ಲರ್‌ ಹೋಗೆ ಎಲ್ಲಾ ಥರದ ಅಂಶಗಳೂ ಈ ಸಿನಿಮಾದಲ್ಲಿದೆ. ಖಂಡಿತವಾಗಿಯೂ ‘ಸೀಟ್‌ ಎಡ್ಜ್‌’ ಆಡಿಯನ್ಸ್‌ನ ‘ಸೀಟ್‌ ಎಡ್ಜ್‌’ ನಲ್ಲಿ ಕೂರಿಸುವಂಥ ಸಿನಿಮಾವಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು.

ನಿರ್ದೇಶಕ ಚೇತನ್‌ ಶೆಟ್ಟಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಯು-ಟ್ಯೂಬ್‌ ಮತ್ತು ಸೋಶಿಯಲ್‌ ಮೀಡಿಯಾಗಳಲ್ಲಿ ಅತಿಹೆಚ್ಚು ವೀವ್ಸ್‌ ಪಡೆಯಲು, ಜನಪ್ರಿಯರಾಗಲು ಯು-ಟ್ಯೂಬರ್ಸ್‌ ಮತ್ತು ವ್ಲಾಗರ್ಸ್‌ ಏನೇನು ಸಾಹಸಗಳನ್ನು ಮಾಡುತ್ತಾರೆ ಎಂಬ ಎಳೆಯನ್ನು ಇಟ್ಟುಕೊಂಡೆ ಈ ಸಿನಿಮಾ ಮಾಡಿದ್ದೇವೆ. ಇದು ಎಲ್ಲಾ ಥರದ ಆಡಿಯನ್ಸ್‌ಗೂ ಕನೆಕ್ಟ್‌ ಆಗುವಂಥ ಸಿನಿಮಾ. ನಮಗೆ ಗೊತ್ತಿಲ್ಲದ ವಿಷಯದಲ್ಲಿ ದುಸ್ಸಾಹಸಕ್ಕೆ ಕೈಹಾಕಿದರೆ, ಏನೇನು ಆಗಬಹುದು ಎಂಬುದನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ. ಡಾರ್ಕ್‌ ಕಾಮಿಡಿಯ ಜೊತೆಗೆ ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ. ‘ಸೀಟ್‌ ಎಡ್ಜ್‌’ ನಲ್ಲಿ ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ ಸಿಗೋದು ಗ್ಯಾರೆಂಟಿ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಿರ್ಮಾಪಕ ಗಿರಿಧರ ಟಿ. ವಸಂತಪುರ ಮಾತನಾಡಿ, ‘ಎಲ್ಲಾ ಕಲಾವಿದರು ಮತ್ತು ತಂತ್ರಜ್ಞರ ಸಹಕಾರದಿಂದ, ನಾವು ಅಂದುಕೊಂಡ ರೀತಿಯಲ್ಲಿ ಸಿನಿಮಾ ತುಂಬ ಚೆನ್ನಾಗಿ ಮೂಡಿಬರುತ್ತಿದೆ. ಸದ್ಯ ಶೂಟಿಂಗ್‌ ಕಂಪ್ಲೀಟ್‌ ಆಗಿದ್ದು, ಸಿ. ಜಿ, ಗ್ರಾಫಿಕ್ಸ್‌ ಮತ್ತಿತರ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳು ನಡೆಯುತ್ತಿದೆ. ಚಿತ್ರದಲ್ಲಿ ತಾಂತ್ರಿಕ ಕೆಲಸಗಳಿಗೆ ಸಾಕಷ್ಟು ಸಮಯ ಹಿಡಿಯುತ್ತಿದೆ. ಎಲ್ಲಾ ಥರದ ಪ್ರೇಕ್ಷಕರಿಗೂ ಇಷ್ಟವಾಗುವಂಥ, ಮನೆಮಂದಿ ಒಟ್ಟಾಗಿ ಕೂತು ನೋಡುವಂಥ ಸಿನಿಮಾ ಮಾಡಿದ್ದೇವೆ. ಆದಷ್ಟು ಬೇಗ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ’ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ನಟರಾದ ರಘು ರಾಮನಕೊಪ್ಪ, ಗಿರೀಶ್‌ ಶಿವಣ್ಣ, ಸಂಗೀತ ನಿರ್ದೇಶಕ ಆಕಾಶ್‌ ಪರ್ವ, ಛಾಯಾಗ್ರಹಕ ದೀಪಕ್ ಕುಮಾರ್ ಜೆ. ಕೆ ಮೊದಲಾದವರು ‘ಸೀಟ್‌ ಎಡ್ಜ್‌’ ಚಿತ್ರದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಬೆಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು ಸುತ್ತಮುತ್ತ ಸುಮಾರು 45 ದಿನಗಳ ಕಾಲ 45 ‘ಸೀಟ್‌ ಎಡ್ಜ್‌’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಅರ್ಮನ್ ಮಲ್ಲಿಕ್, ಟಿಪ್ಪು ಮೊದಲಾದ ಗಾಯಕರು ‘ಸೀಟ್‌ ಎಡ್ಜ್‌’ ಚಿತ್ರದ ಹಅಡುಗಳಿಗೆ ಧ್ವನಿಯಾಗಿದ್ದಾರೆ.

*- ‘ಸೀಟ್‌ ಎಡ್ಜ್‌’ ಚಿತ್ರದ ಕಥಾಹಂದರ -*

ಚಿತ್ರದ ನಾಯಕ ಯೂ-ಟ್ಯೂಬ್ ಬ್ಲಾಗರ್ ಆಗಿದ್ದು ಏನಾದರೂ ಸಾಧನೆ ಮಾಡಬೇಕೆಂಬ ಪ್ರಯತ್ನದಲ್ಲಿರುತ್ತಾನೆ ಆದರೆ ತಾನು ಮಾಡುತ್ತಿರುವ ವಿಡಿಯೋಗಳು ಟ್ರೋಲ್ ಪೇಜ್ಗಳಿಗೆ ಆಹಾರವಾಗಿ ನಗೆಪಾಟಲಿಗೆ ಗುರಿ ಆಗುತ್ತಾನೆ. ಈ ಮಧ್ಯೆ ಒಂದು ಹುಡುಗಿಯ ಜೊತೆ ಲವ್ ಆಗುತ್ತೆ. ನಾಯಕ ಮಾಡಿದ ಒಂದು ತಪ್ಪಿನಿಂದ ಲವ್ ಬ್ರೇಕಪ್ ಆಗುತ್ತೆ.ಒಂದು ಕಡೆ ತಾನು ಪ್ರೀತ್ಸಿದ ಹುಡುಗಿಯನ್ನು ಮರಳಿ ಪಡೆಯಬೇಕು, ಮತ್ತೊಂದು ಕಡೆ ಯೂ-ಟ್ಯೂಬ್ ಅಲ್ಲಿ ತನ್ನ ವೀವರ್ಸ್ಗಳಿಗೆ ವಿಭಿನ್ನವಾಗಿ ಏನಾದರೂ ಮಾಡಬೇಕೆಂದು ಯೋಚಿಸುತ್ತಿರುವಾಗ ಒಂದು ಭಯಂಕರವಾದ ಘೋಸ್ಟ್ ಟೌನ್ ಗೆ ಹೋಗಿ ಘೋಸ್ಟ್ ಹಂಟಿಂಗ್ ವೀಡಿಯೋ ಮಾಡಲು ನಿರ್ಧರಿಸುತ್ತಾನೆ. ಇದಕ್ಕೆ ಸ್ನೇಹಿತರಿಂದ ವಿರೋಧ ವ್ಯಕ್ತವಾಗುತ್ತದೆ. ನಂತರ ನಾಯಕ ಘೋಸ್ಟ್ ಟೌನ್ ಗೆ ಹೋಗುವನೆ, ತಾನು ಪ್ರೀತ್ಸಿದ ಹುಡುಗಿಯನ್ನು ಮರಳಿ ಪಡೆಯುವನೆ? ಯೂ-ಟ್ಯೂಬ್ ಬ್ಲಾಗರ್ ಆಗಿ ಸಾಧನೆ ಮಾಡುವನೆ? ಎನ್ನುವುದು ಚಿತ್ರದ ಕಥಾಹಂದರ.

error: Content is protected !!