“ಸರ್ವಾಂತರ್ಯಾಮಿ”ಚಿತ್ರದ ಶಿವತಾಂಡವದ ಹಾಡು ಬಿಡುಗಡೆ
ರಂಗಭೂಮಿ ಹಿನ್ನೆಲೆ ಇರುವ ರಂಗಸ್ವಾಮಿ ಕಪಿನಿಪಾಳ್ಯ ನಿರ್ದೇಶನದ, ಹಿತ ಆರ್ ಗೌಡ ನಿರ್ಮಾಣದ “ಸರ್ವಾಂತರ್ಯಾಮಿ” ಎಲ್ಲರ ಕೈಯಲ್ಲೂ ನಾನೇ ಸ್ವಾಮಿ’ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಪೂರ್ಣಗೊಂಡಿದೆ. ಚಿತ್ರಕ್ಕೆ ನಿರ್ದೇಶಕ ಹಾಗು ಗೀತರಚನೆಕಾರ ಕೆ.ರಾಮ್ ನಾರಾಯಣ್ ಬೆನ್ನೆಲುಬಾಗಿ ನಿಂತಿದ್ದಾರೆ
ಶಿವರಾತ್ರಿಯ ಹಿನ್ನೆಲೆಯಲ್ಲಿ ಶಿವನ ಬಗ್ಗೆ ನಿರ್ದೇಶಕ ರಂಗಸ್ವಾಮಿ ಅವರೆ ಬರೆದಿರುವ ಶಿವನ ಕುರಿತಾದ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ. ಶಿವ ತಾಂಡವದ ಈ ಗೀತೆಗೆ ರಮೇಶ್ ಕೃಷ್ಣ ಸಂಗೀತ ನೀಡಿದ್ದು, ರಂಗಸ್ವಾಮಿ ಕಪನಿಪಾಳ್ಯ ಹಾಗೂ ಸಂಜನಾ ಅಭಿನಯಿಸಿದ್ದಾರೆ. ವೇದಸ್ಯ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಿರ್ದೇಶಕ ಹಾಗೂ ನಟ ರಂಗಸ್ವಾಮಿ ಕಪನಿಪಾಳ್ಯ ಕಪನಿಪಾಳ್ಯ ಮಾತನಾಡಿ, ಕಳೆದ 35 ವರ್ಷಗಳ ಹಿಂದೆ ಚಿತ್ರರಂಗದಲ್ಲಿದ್ದೆ, ಅಂದಿನಿಂದ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಆಸೆ ಇತ್ತು. ಹೀಗಾಗಿ ಈ ಚಿತ್ರ ಮಾಡಿದ್ದೇನೆ. ನಿರ್ದೇಶನದ ಜೊತೆಗೆ ಶಿಕ್ಷಕನ ಪಾತ್ರದಲ್ಲೂ ಆಭಿನಯಿಸಿದ್ದೇನೆ. ರಾಮ್‍ನಾರಾಯಣ್ ಬೆನ್ನೆಲುಬಾಗಿ ನಿಂತಿದ್ದಾರೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಚಿತ್ರದಲ್ಲಿ ನಾನೇ ಬರೆದಿರುವ ನಾಲ್ಕು ಹಾಡುಗಳಿದೆ. ಶಿವರಾತ್ರಿ ಸಂದರ್ಭದಲ್ಲಿ ಮೊದಲ ಹಾಡನ್ನು ಬಿಡುಗಡೆ ಮಾಡುತ್ತಿದ್ದೇವೆ.
“ಸರ್ವಾಂತರ್ಯಾಮಿ” ಅಂದರೆ ಮೊಬೈಲ್. ಅದರಿಂದ ಆಗುವ ಅನುಕೂಲ, ಅನಾನುಕೂಲಗಳನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಇದೊಂದು ಮಕ್ಕಳ ಚಿತ್ರ. ಮಕ್ಕಳಿಗಾಗಿ ಮಾಡಿದ್ದೇನೆ. ಚಿತ್ರೀಕರಣ ಮುಗಿದಿದ್ದು ಡಬ್ಬಿಂಗ್ ಸಹ ಪೂರ್ಣಗೊಂಡಿದೆ. ಸದ್ಯದಲ್ಲಿಯೇ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ನಿರ್ಮಾಪಕಿ ಹಿತಾ ಆರ್ ಗೌಡ ಮಾತನಾಡಿ ರಂಗಭೂಮಿ ಒಲವು ಅಪ್ಪನ ಮೇಲೆ ಇತ್ತು, ಅಪ್ಪ ಪಾತ್ರವನ್ನು ಜೀವಿಸಿದ್ದಾರೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು. ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ ಕೆ ರಾಮ್ ನಾರಾಯಣ್ ಮಾತನಾಡಿ ನಿರ್ದೇಶಕ ರಂಗಸ್ವಾಮಿ ಅವರು ನನಗೆ ಹದಿನೈದು ವರ್ಷಗಳ ಪರಿಚಯ. ಅವರ ಸಿನಿಮಾ ಮಾಡುವ ಕನನು ಈಗ ನನಸಾಗಿದೆ. ಒಳ್ಳೆಯ ತಂಡ ಕಟ್ಟಿಕೊಂಡು ಸಿನಿಮಾ ಮಾಡಿದ್ದಾರೆ ತಂಡಕ್ಕೆ ಹಾಗೂ ಚಿತ್ರಕ್ಕೆ ಒಳ್ಳೆಯದಾಗಲಿ ಎಂದರು
ಮೊದಲ ಬಾರಿಗೆ ನಟಿಸಿದ್ದೇನೆ. ಆರಂಭದ ಚಿತ್ರದಲ್ಲಿ ಪಾರ್ವತಿ ದೇವಿಯ ಪಾತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿರುವುದು ಖುಷಿ ಕೊಟ್ಟಿದೆ ಎಂದು ನಟಿ ಸಂಜನಾ ಹೇಳಿದರು.ಕಲಾವಿದ ಸೂರ್ಯ ಪ್ರವೀಣ್ ಮಾತನಾಡಿ ಹಾಡು ಚೆನ್ನಾಗಿ ಬಂದಿದೆ. ಇದರಲ್ಲಿ ನನ್ನದು ವಿಭಿನ್ನ ಪಾತ್ರ ಎಂದರು.
ಕಲಾವಿದ ನಾಗರಾಜ್ ಮಾತನಾಡಿ 20 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ. ಮೊದಲ ಬಾರಿಗೆ ಪೋಸ್ಟರ್ ನಲ್ಲಿ ಕಾಣಿಸಿಕೊಳ್ಳುವಂತಹ ಮುಖ್ಯ ಪಾತ್ರ ಮಾಡಿದ್ದೇನೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಮಗಳಿಗಾಗಿ ಅಪ್ಪ ಏನೆಲ್ಲಾ ಮಾಡುತ್ತಾರೆ ಎನ್ನುವುದೇ ಚಿತ್ರದ ಒಂದೆಳೆ ಕಥೆ ಎಂದು ಹೇಳಿದರು. ಛಾಯಾಗ್ರಾಹಕ ರಾಜು ಹೆಮ್ಮಿಗೆಪುರ, ಕಲಾವಿದರಾದ ವಿಕ್ಟರಿ ವಾಸು, ಮೈರಾ, ಅಮೂಲ್ಯ ನಾರಾಯಣ್,ಉಮೇಶ್ ಸಕ್ಕರೆನಾಡು, ಉಮೇಶ್ ಪುಂಗ ಮತ್ತಿತರರು ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.
