Cini NewsSandalwood

“ರಕ್ಕಿ”ಯ ಹೈ- ಎನರ್ಜಿ ಹುಕ್ ಸಿಗ್ನೇಚರ್ ಸ್ಟೆಪ್ ಬಿಡುಗಡೆ.

Spread the love

ಬಹು ನಿರೀಕ್ಷಿತ ಕನ್ನಡ ಸಿನಿಮಾ *“ರಕ್ಕಿ”* ಯ ಫಸ್ಟ್ ಡ್ರಾಪ್ ಅಧಿಕೃತವಾಗಿ ಬಿಡುಗಡೆಗೊಂಡಿದ್ದು, ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟೈಲಿಷ್ ಬಜ್ ಸೃಷ್ಟಿಸಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಆಶೀರ್ವಾದದೊಂದಿಗೆ ರೂಪುಗೊಂಡಿರುವ ರಕ್ಕಿ ಚಿತ್ರವನ್ನು SNR ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುರೇಶ್ ಸಾಲಿಗ್ರಾಮ ನಿರ್ಮಾಣ ಮಾಡಿದ್ದು, ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ.

ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದ “ರಗಡೋ ರಕ್ಕಿ” ಎಂಬ ಹೈ- ಎನರ್ಜಿ ಹುಕ್ ಸಿಗ್ನೇಚರ್ ಸ್ಟೆಪ್ ತನ್ನ ಹೊಸತನ ಮತ್ತು ಮಾಸ್ ಅಪೀಲ್‌ನಿಂದ ಗಮನ ಸೆಳೆದಿದೆ. ನೃತ್ಯ ನಿರ್ದೇಶಕ ಕಂಬಿ ರಾಜು ಅವರ ಕೊರಿಯೋಗ್ರಫಿಯಲ್ಲಿ ಮೂಡಿಬಂದ ಈ ವಿಶಿಷ್ಟ ಸ್ಟೆಪ್ ಅನ್ನು ಹೀರೋ ರಕ್ಕಿ ಸುರೇಶ್ ಉತ್ತಮವಾಗಿ ಪ್ರದರ್ಶಿಸಿದ್ದು, ಹೊಸ ನಾಯಕನ ಆತ್ಮವಿಶ್ವಾಸಭರಿತ ಪರಿಚಯಕ್ಕೆ ಸಾಕ್ಷಿಯಾಗಿದೆ.

ಚಿತ್ರದ ಎಲ್ಲಾ ಟಾಕಿ ಭಾಗಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಪ್ರಸ್ತುತ ಡಬ್ಬಿಂಗ್ ಹಂತಕ್ಕೆ ಚಿತ್ರ ಪ್ರವೇಶಿಸಿದೆ. ಶೀಘ್ರದಲ್ಲೇ ಬೆಂಗಳೂರು ಹೊರಗೆ ತೆರಳಿ, ಚಿತ್ರದ ಎರಡು ಪ್ರಮುಖ ಹಾಡುಗಳ ಚಿತ್ರೀಕರಣ ನಡೆಸಲು ತಂಡ ಸಜ್ಜಾಗಿದೆ. ಈ ಹಾಡುಗಳು ಚಿತ್ರದ ಪ್ರಮುಖ ಹೈಲೈಟ್‌ಗಳಾಗಿರುವ ನಿರೀಕ್ಷೆಯಿದೆ.

ರಕ್ಕಿ ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಥ್ರಿಲ್ಲರ್, ಅಪರಾಧ ಆಧಾರಿತ ಕಥಾವಸ್ತುವಿನೊಂದಿಗೆ ಬಲಿಷ್ಠ ಕಮರ್ಷಿಯಲ್ ನಿರೂಪಣೆಯನ್ನು ಹೊಂದಿದೆ. ರಕ್ಕಿ ಸುರೇಶ್ ನಾಯಕನಾಗಿ ನಟಿಸಿದ್ದು, ನಾಯಕಿಯರಾಗಿ ಆಶಿಕಾ ಸೋಮಶೇಖರ್ ಮತ್ತು ಪಲ್ಲವಿ ಮಂಜುನಾಥ್ ಅಭಿನಯಿಸಿದ್ದಾರೆ. ಜೊತೆಗೆ ಬಿ. ಸುರೇಶ್, ಸಂಪತ್ ಮೈತ್ರೇಯ, ಬಲರಾಜ್ ವಾಡಿ, ರಮೇಶ್ ಪಂಡಿತ್, ಹರಿಣಿ ಶ್ರೀಕಾಂತ್, ಹರ್ಷ ಅರ್ಜುನ್, ಡಾ. ಸುಧಾಕರ್ ಶೆಟ್ಟಿ, ಸೂರಜ್ ಕಿರಣ್ ಸೇರಿದಂತೆ ಅನೇಕ ಹಿರಿಯ ಮತ್ತು ಪ್ರತಿಭಾವಂತ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ವೆಂಕಟ್ ಭಾರದ್ವಾಜ್ , ಸಂಗೀತ ಲೋಕಿ ತವಸ್ಯ , ಛಾಯಾಗ್ರಹಣ ಐಸಾಕ್ ಪ್ರಭಾಕರ್, ಸಂಕಲನ ದೀಪು ಎಸ್ ಕುಮಾರ್ , ಸಹ ನಿರ್ದೇಶಕ ಲಾರೆನ್ಸ್ , ಸ್ಟಂಟ್ಸ್ ಶಿವ ,ನೃತ್ಯ ನಿರ್ದೇಶನ ಕಂಬಿ ರಾಜು ,ಹೈಟ್ ಮಂಜು ರವರದಾಗಿದೆ. ಕಥಾವಸ್ತು ಮತ್ತು ಉತ್ಸಾಹಭರಿತ ಹೊಸ ಮುಖದೊಂದಿಗೆ “ರಕ್ಕಿ” ಕನ್ನಡ ಸಿನಿರಸಿಕರಿಗೆ ವಿಭಿನ್ನ ಅನುಭವ ನೀಡುವ ಭರವಸೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಚಿತ್ರದ ಇನ್ನಷ್ಟು ಅಪ್ಡೇಟ್ಸ್ ಮತ್ತು ಪ್ರಚಾರ ಸಾಮಗ್ರಿಗಳು ಬಿಡುಗಡೆಯಾಗಲಿವೆ.

Visited 2 times, 2 visit(s) today
error: Content is protected !!