ಕೊಳ್ಳಿ ದೆವ್ವದ ಹಾವಳಿಯಲ್ಲಿ ಸೈಕಲಾಜಿಕಲ್ ಥ್ರಿಲ್ಲರ್ “ರಕ್ಕಸಪುರದೊಳ್” (ಚಿತ್ರವಿಮರ್ಶೆ-ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : ರಕ್ಕಸಪುರದೊಳ್
ನಿರ್ದೇಶಕ : ರವಿ ಸಾರಂಗ
ನಿರ್ಮಾಪಕ : ರವಿವರ್ಮಾ
ಸಂಗೀತ : ಅರ್ಜುನ್ ಜನ್ಯ
ಛಾಯಾಗ್ರಹಣ : ವಿಲಿಯಂ ಡೇವಿಡ್
ತಾರಾಗಣ : ರಾಜ್ ಬಿ ಶೆಟ್ಟಿ , ಸ್ವಾಧಿಷ್ಡ ಕೃಷ್ಣ , ಅರ್ಚನಾ ಕೊಟ್ಟಿಗೆ, ಗೋಪಾಲ್ ದೇಶಪಾಂಡೆ , ಬಿ ಸುರೇಶ , ಜಾಂಗೀರ್ , ಹಾಗೂ ಮುಂತಾದವರು…
ಅನಾದಿಕಾಲದಿಂದಲೂ ನಡೆದುಕೊಂಡು ಬಂದಂತಹ ಆಚಾರ , ಪದ್ಧತಿ , ಸಂಪ್ರದಾಯ ಎನ್ನುವಂತಹ ಜನರ ನಡುವೆ ಮೂಢನಂಬಿಕೆಯ ಬಗ್ಗೆ ಇಟ್ಟುಕೊಳ್ಳುತ್ತಾರೋ ಅಂತವರನ್ನು ನಂಬಿಸುವವರು ಕೂಡ ಇದೆ ಇರುತ್ತಾರೆ. ಅಂತದ್ದೇ ಒಂದು ಕುತೂಹಲ ಭರಿತವಾದ ಕೊಳ್ಳಿ ದೆವ್ವದ ಹಾವಳಿ , ಭೂತ ಪ್ರೇತಗಳ ಸುತ್ತ ತತ್ತರಿಸುವ ಜನರ ನಡುವೆ ಮಾನಸಿಕ ತಲ್ಲಣದ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ರಕ್ಕಸಪುರದೊಳ್”. ಪೊಲೀಸ್ ಇಲಾಖೆಯಿಂದ ಸಸ್ಪೆಂಡ್ ಆದಂತ ಅಧಿಕಾರಿ ಶಿವ (ರಾಜ್ ಬಿ ಶೆಟ್ಟಿ) ಗೆ ಜೀವನದಲ್ಲಿ ಎದುರಾದ ಒಂದು ಘಟನೆ ಮಾನಸಿಕವಾಗಿ ಗೊಂದಲಕ್ಕೆ ದೂಡಿರುತ್ತದೆ. ಆದರೂ ತನ್ನ ಕೆಲಸದಲ್ಲಿ ಪ್ರಾಮಾಣಿಕನಾಗಿದ್ದು , ಹಿರಿಯ ಅಧಿಕಾರಿ ಆರು ತಿಂಗಳ ವರೆಗೂ ಯಾವುದೇ
ಕಿರಿಕಿರಿ ಇಲ್ಲದ ರಕ್ಕಸಪುರ ಎಂಬ ಪೊಲೀಸ್ ಠಾಣೆಗೆ ವರ್ಗಾಯಿಸುತ್ತಾರೆ.
ಆ ಊರಿನ ಜನರು ಬಹಳ ಮುಗ್ಧರು , ತಮ್ಮ ಕೆಲಸ ಹಾಗೂ ತಾವು ನಂಬಿರುವಂತಹ ಸಿದ್ದಯ್ಯ ಸ್ವಾಮೀಜಿ (ಬಿ ಸುರೇಶ್) ಆಶೀರ್ವಾದವೇ ಜೀವನ ಎಂದು ಬದುಕುತ್ತಾರೆ. ಇನ್ನು ಆ ಸ್ಟೇಷನ್ನ ಅಡ್ಡ ಮಾಡಿಕೊಂಡು ಕಾಲ ಕಳೆಯುವ ಪೊಲೀಸ್ ಸಿಬ್ಬಂದಿ. ಇನ್ಸ್ಪೆಕ್ಟರ್ ಶಿವ ಸದಾ ಎಣ್ಣೆ ಮತ್ತಿನಲ್ಲೇ ಇರುವುದನ್ನು ಕಂಡು ಪತ್ನಿ ರೂಪ (ಸ್ವಾಧಿಷ್ಡ ಕೃಷ್ಣ) ಕೂಡ ಆಗಾಗ ಎಚ್ಚರಿಕೆ ನೀಡುತ್ತಾಳೆ.
ಇನ್ನು ತನ್ನ ಮನೆಯ ಮುಂದೆ ಇರುವ ಪಾರ್ವತಿ (ಅರ್ಚನಾ ಕೊಟ್ಟಿಗೆ) ಯ ಪುಟ್ಟ ಮಗಳು ಬೆಳ್ಳಿ ಜೊತೆ ಶಿವನ ಮಾತುಕತೆ.
ಇನ್ನು ಹಳ್ಳಿಯ ಜನರು ದೇವರು, ದೈವದ ಮೇಲೆ ಭಯ ಭಕ್ತಿ ಜಾಸ್ತಿ. ಅವರ ಈ ದೌರ್ಬಲ್ಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿರುವ ಸ್ವಾಮೀಜಿ ಯಾವುದೇ ಮಂಗಳ ಕಾರ್ಯ ಅಥವಾ ಕೆಲಸಕ್ಕೆ ಹೋಗಬೇಕಾದರೂ ಸಿದ್ದಯ್ಯಸ್ವಾಮಿ ಕೊಟ್ಟ ತಾಯತ ಕೊಟ್ಟ ರುದ್ರಾಕ್ಷಿಯನ್ನು ಧರಿಸಿಯೇ ತೆರಳುತ್ತಾರೆ. ಮನೆಗೆ ಯಾವುದೇ ದುಷ್ಟಶಕ್ತಿ ಬರಬಾರದೆಂದು ಆತ ಕೊಟ್ಟ ಕಾಯಿ ಕಟ್ಟುತ್ತಾರೆ. ಜನರ ಈ ವಿಚಿತ್ರ ನಂಬಿಕೆಗಳನ್ನು ಶಿವಾ ಅಲ್ಲಗಳೆಯುತ್ತಾನೆ. ಆದರೂ
ಕಾಗೆಗಳು ಸತ್ತು ಬಿದ್ದಾಗ, ಅದು ಅಪಶಕುನವೆಂದು ಹೇಳುವ ಸಿದ್ದಯ್ಯ ಮರಗಳು ಭಸ್ಮವಾಗುವ ಘಟನೆಗಳು ,
ನಿರಂತರ ಸರಣಿ ಕೊಲೆಗಳು , ಯುವತಿಯರು ನಾಪತ್ತೆಯಗಿ ಮುಖ, ಕೈಕಾಲು ಸುಟ್ಟ ರೀತಿಯಲ್ಲಿ ಪತ್ತೆಯಾಗುತ್ತದೆ. ಇದು ಕೊಳ್ಳಿ ದೆವ್ವವೇ ಎಲ್ಲರನ್ನೂ ಬಲಿ ತಗೊಳ್ಳುತ್ತಿದೆ ಎಂದು ನಂಬುವ ಜನ ಮತ್ತಷ್ಟು ಭಯ ಬೀಳುತ್ತಾರೆ. ಮುಂದೇನು ಅನ್ನುವಷ್ಟರಲ್ಲಿ ಹಿರಿಯ ಅಧಿಕಾರಿಗಳ ಒತ್ತಡ , ಹಳ್ಳಿ ಜನರ ಪರಿಸ್ಥಿತಿ ಕಂಡು ಇದರ ಹಿಂದಿರುವ ಸತ್ಯ ಅಸತತೆಯನ್ನು ಕಂಡುಹಿಡಿಯಲು ಮುಂದಾಗುತ್ತಾನೆ. ಇದು ಕೊಳ್ಳಿ ದೆವ್ವದ ಕಾಟವೇ..
ಹಿಂದಿರುವ ಸೂತ್ರಧಾರಿ ಯಾರು…
ಕೊಲೆಗಳು ಹೇಗೆ ನಡೆಯುತ್ತೆ…
ಇನ್ಸ್ಪೆಕ್ಟರ್ ಗೆ ಸಿಗುವ ಸುಳಿವು ಏನು…
ಕ್ಲೈಮಾಕ್ಸ್ ಕೇಳುವ ಸತ್ಯ ಯಾವುದು… ಇದಕ್ಕೆಲ್ಲ ನೀವು ಒಮ್ಮೆ ಈ ಚಿತ್ರವನ್ನು ನೋಡಬೇಕು.
ಇಡೀ ಚಿತ್ರದ ಕಥೆಯನ್ನು ಆವರಿಸಿಕೊಂಡಿದ್ದಾರೆ ನಟ ರಾಜ್ ಬಿ ಶೆಟ್ಟಿ . ಪ್ರತಿ ಚಿತ್ರದಲ್ಲೂ ವಿಭಿನ್ನ ಪಾತ್ರಗಳಿಗೆ ಒಡ್ಡಿಕೊಳ್ಳುವ ರಾಜ್ ಈ ಚಿತ್ರದಲ್ಲಿ ಆತ್ಮದ ಜತೆ ಮಾತನಾಡುವ ಖಾಯಿಲೆಯಿರುವ ಇನ್ಪೆಕ್ಟರ್. ಒಂಟಿ ಜೀವನ ನಡೆಸುವ ಆತ ಹೆಂಡತಿ ತನ್ನ ಜೊತೆಗೇ ಇದ್ದಾಳೆಂಬ ಭ್ರಮೆಯಲ್ಲಿ ಬದುಕುತ್ತಿರುತ್ತಾನೆ. ನೋಡುವ ಜನರಿಗೆ ಹುಚ್ಚು ಪೊಲೀಸ್ ಅನಿಸಿದರೂ , ಕೊನೆಗೆ ಆತನ ಖಾಯಿಲೆಯೇ ವರದಾನವಾಗಿ ರೋಚಕ ಕೊಲೆಗಳ ಸುತ್ತ ಭೇದಿಸುವ ಪಾತ್ರ ಗಮನ ಸೆಳೆಯುತ್ತದೆ.

ಇನ್ನು ನಾಯಕಿಯಾಗಿ ಅಭಿನಯಿಸಿರುವ ಸ್ವಾದಿಷ್ಟ ಕೃಷ್ಣ ಯಾವುದೇ ಗ್ಲಾಮರಸ್ ಇಲ್ಲದೆ ಚಿಕ್ಕ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಸ್ವಾಮೀಜಿ ಪಾತ್ರದಲ್ಲಿ ಬಿ ಸುರೇಶ್ ಅವರ ಶಿಷ್ಯನ ಪಾತ್ರದಲ್ಲಿ ಜಹಾಂಗೀರ್ , ಉಳಿದಂತೆ ಗೋಪಾಲ್ ದೇಶಪಾಂಡೆ , ಅರ್ಚನ ಕೊಟ್ಟಿಗೆ , ಪುಟ್ಟ ಮಗು ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದೆ.
ಇನ್ನು ವಿಶೇಷವಾಗಿ ಕ್ಲೈಮಾಕ್ಸ್ ನಲ್ಲಿ ಬರುವ ಪಾತ್ರಧಾರಿಯ ನಟನೆ ಅದ್ಭುತವಾಗಿ ಮೂಡಿ ಬಂದಿದೆ. ಇನ್ನು ಚಿತ್ರದ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ಕುತೂಹಲಕಾರಿಯಾಗಿದ್ದು , ಭ್ರಮೆ , ಭೂತ ಕೊಳ್ಳಿ ದೆವ್ವದ ಕಾಟ , ಹೆಣ್ಣಿನ ಬದುಕಿನ ಸಂಕಷ್ಟ, ಪ್ರೀತಿ, ಹಾಸ್ಯ, ನೋವು ನಲಿವುಗಳ ಸಮ್ಮಿಲನದ ಜೊತೆ ಕಾಣದ ಶಕ್ತಿಗಳ ಕೈವಾಡ ನಡುವೆ ಅದು ದೆವ್ವವೋ, ದೈವವೋ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ನೀಡುವ ಪ್ರಯತ್ನ ಮಾಡಿದರೆ.
ಚಿತ್ರದ ಮೊದಲ ಭಾಗ ಬಹಳ ಅದ್ಭುತವಾಗಿ ಮೂಡಿ ಬಂದಿದ್ದು , ದ್ವಿತೀಯ ಭಾಗ ಇನ್ನಷ್ಟು ಕಡಿತ ಗೊಳಿಸಿದ್ದಾರೆ ಚೆನ್ನಾಗಿರುತ್ತಿತ್ತು. ಸಾಹಸ ನಿರ್ದೇಶಕನಾಗಿ ಗುರುತಿಸಿಕೊಂಡ ರವಿವರ್ಮ ಈ ಚಿತ್ರದ ಮೂಲಕ ನಿರ್ಮಾಪಕನಾಗಿದ್ದು , ಒಂದು ಉತ್ತಮ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. ಈ ಚಿತ್ರದ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಗಮನ ಸೆಳೆದಿದ್ದು , ಛಾಯಾಗ್ರಹಕರ ಕೈಚಳಕ ಅದ್ಭುತವಾಗಿ ಮೂಡಿ ಬಂದಿದೆ. ಸಂಕಲನ , ಸಾಹಸ ಸೇರಿದಂತೆ ತಾಂತ್ರಿಕವಾಗಿ ಚಿತ್ರ ಉತ್ತಮವಾಗಿದೆ. ಒಟ್ಟಾರೆ ಎಲ್ಲಾ ವರ್ಗದ ಪ್ರೇಕ್ಷಕರು ನೋಡುವಂತಹ ಚಿತ್ರ ಇದಾಗಿದೆ.
