Cini NewsKollywood

ತಲೈವಾ-173 ಸಿನಿಮಾಗಾಗಿ ಒಂದಾದ ರಜನಿಕಾಂತ್ – ಕಮಲ್ ಹಾಸನ್

Spread the love

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಉಳಗನಾಯಗನ್ ಕಮಲ್ ಹಾಸನ್ ಸಿನಿಪ್ರೇಮಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಲೈವಾ 173ನೇ ಸಿನಿಮಾ‌ ಘೋಷಣೆಯಾಗಿದೆ. ಈ ಚಿತ್ರಕ್ಕೆ ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ.

ಕಮಲ್ ಹಾಸನ್ ತಮ್ಮದೇ ನಿರ್ಮಾಣ ಸಂಸ್ಥೆಯಾದ ರಾಜ್‌ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಕಂಪನಿ ಮೂಲಕ ರಜನಿಕಾಂತ್ ಚಿತ್ರ ನಿರ್ಮಾಣ ಮಾಡಲಿದ್ದಾರೆ.

ನಿರ್ದೇಶಕ ಯಾರು?
ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ಖುಷ್ಬು ಸುಂದರ್ ಅವರ ಪತ್ನಿ ಸಿ ಸುಂದರ್ ತಲೈವಾ ಅವರ 173ನೇ ಚಿತ್ರ ನಿರ್ದೇಶನ ಮಾಡಲಿದ್ದಾರೆ. ರಜನಿಗೆ ಅರುಣಾಚಲಂ‌ ಎಂಬ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಇವರು, ಕಮಲ್ ಹಾಸನ್ ಗೆ ಅನ್ಬೆ ಶಿವಂ‌ ಎಂಬ ಚಿತ್ರ ನಿರ್ದೇಶನ ಮಾಡಿದ್ದಾರೆ.

ಯಾವಾಗ ರಿಲೀಸ್
ಸಿ ಸುಂದರ್ ನಿರ್ದೇಶನ ಮಾಡಲಿರುವ ಕಮಲ್ ನಿರ್ಮಾಣ ಮಾಡಲಿರುವ ರಜನಿ ನಟಿಸಲಿರುವ ಈ ಚಿತ್ರವನ್ನು 2027ರ ಪೊಂಗಲ್ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

Visited 1 times, 1 visit(s) today
error: Content is protected !!