Cini NewsSandalwoodTollywood

ರಶ್ಮಿಕಾ ಮಂದಣ್ಣ ನಟನೆಯ “ದಿ ಗರ್ಲ್‌ ಫ್ರೆಂಡ್” ಸಿನಿಮಾದ ಹೊಸ ಹಾಡು ರಿಲೀಸ್

Spread the love

ರಶ್ಮಿಕಾ ಮಂದಣ್ಣ ಹಾಗೂ ದೀಕ್ಷಿತ್ ಶೆಟ್ಟಿ ಅಭಿಯದ ದಿ ಗರ್ಲ್‌ಫ್ರೆಂಡ್ ಸಿನಿಮಾದ ಹೊಸ ಹಾಡು ರಿಲೀಸ್ ಆಗಿದೆ. ಯಾವ ಕಡೆ ಕಥೆ ಎಂಬ ಮೆಲೋಡಿ ಗೀತೆ ಟೀ-ಸಿರೀಸ್ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಅನಾವರಣಗೊಂಡಿದೆ.

ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ಚಿನ್ಮಯಿ ಶ್ರೀಪಾದ ಹಾಗೂ ಹೇಶಾಮ್ ಅಬ್ದುಲ್ ವಹಾಬ್ ಹಾಡಿಗೆ ಧ್ವನಿಯಾಗಿದ್ದಾರೆ. ಹೇಶಾಮ್ ಅಬ್ದುಲ್ ವಹಾಬ್ ಸಾಹಿತ್ಯ ಕೂಡ ಒದಗಿಸಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ ನಡುವಿನ ಆನ್ ಸ್ಕ್ರೀನ್ ಕೆಮಿಸ್ಟ್ರಿ ಹಾಡಿನ ಮೋಡಿಗೆ ಮತ್ತಷ್ಟು ಮೆರುಗು ನೀಡಿದೆ.

ದಿ ಗರ್ಲ್‌ಫ್ರೆಂಡ್ ಚಿತ್ರ ಬಹುಭಾಷೆಯಲ್ಲಿಯೇ ರಿಲೀಸ್ ಆಗುತ್ತಿದೆ. ಹೀಗಾಗಿ ಕನ್ನಡ, ತೆಲುಗು, ತಮಿಳು ಹೀಗೆ ಬಹುಭಾಷೆಯಲ್ಲಿಯೇ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ದಿ ಗರ್ಲ್ ಫ್ರೆಂಡ್ ನಿನಿಮಾವನ್ನು ರಾಹುಲ್ ರವೀಂದ್ರನ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಧೀರಜ್ ಮೊಗಿಲಿನೇನಿ ಮತ್ತು ವಿದ್ಯಾ ಕೊಪ್ಪಿನೀಡಿ ಚಿತ್ರಕ್ಕೆ ಹಣ ಹೂಡಿದ್ದಾರೆ. ಟೈಟಲ್ಲೇ ಹೇಳುವಂತೆ ಇದು ಲವ್ ಸ್ಟೋರಿ ಸಿನಿಮಾ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ದಿ ಗರ್ಲ್ ಫ್ರೆಂಡ್’ ಸಿನಿಮಾ ತೆರೆಗೆ ಬರಲಿದೆ. ಕೃಷ್ಣನ್ ವಸಂತ್ ಛಾಯಾಗ್ರಹಣ, ಹೇಶಮ್ ಅಬ್ದುಲ್ ವಹಾಬ್ ಸಂಗೀತ ಚಿತ್ರಕ್ಕಿದೆ. ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರು ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ.

Visited 1 times, 1 visit(s) today
error: Content is protected !!