Cini NewsSandalwood

ಆರ್ ಎಕ್ಸ್ ಸೂರಿ ಮತ್ತು ಭೈರಾದೇವಿ ನಿರ್ದೇಶಕರ ಹೊಸ ಸಿನಿಮಾ ಅನೌನ್ಸ್.

Spread the love

ಆರ್‌ಎಕ್ಸ್ ಸೂರಿ ಹಾಗೂ ಭೈರಾದೇವಿ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಶ್ರೀಜೈ ಹೊಸ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಪ್ರೊಡಕ್ಷನ್ ನಂ.1 ವರ್ಕಿಂಗ್ ಟೈಟಲ್‌ನಲ್ಲಿ ಸಿನಿಮಾ ಅನೌನ್ಸ್ ಮಾಡಿದ್ದು, ಇತ್ತೀಚಿಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಸ್ಕ್ರಿಪ್ಟ್‌ ಪೂಜೆಯನ್ನು ಸರಳವಾಗಿ ನೆರವೇರಿದೆ. ಶ್ರೀಜೈ ಹೊಸ ಪ್ರಯತ್ನದಲ್ಲಿ ನಾಯಕನಾಗಿ ಸಂದೀಪ್ ನಾಗರಾಜ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸಂದೀಪ್ ಗೂಗ್ಲಿ ಅನಂತು vs ನುಸ್ರುತ್ ಪ್ರಭುತ್ವ 1/2 ಮೆಂಟ್ಲು, ಸಿನಿಮಾಗಳಲ್ಲಿ ನಟಿಸಿದ್ದು, ಇದೀಗ ಶ್ರೀಜೈ ಕಥೆಯಲ್ಲಿ ಕಂಪ್ಲೀಟ್ ಮಾಸ್ ಹಾಗೂ ರಗಡ್ ಗೆಟಪ್ ನಲ್ಲಿ ಅಭಿನಯಿಸಲಿದ್ದಾರೆ.

ರೌಡಿಸಂ‌ ಕಥೆ ಹೇಳ್ತಾರಾ ಶ್ರೀಜೈ
ಪ್ರೊಡಕ್ಷನ್ ನಂಬರ್ 1 ಟೈಟಲ್ ನಡಿ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿದೆ. ಪೋಸ್ಟರ್ ನೋಡ್ತಿದ್ರೆ ಇದು ರೌಡಿಸಂ‌ ಕಥೆ ಅನ್ನೋದು ಗೊತ್ತಾಗುತ್ತದೆ. ರಕ್ತ, ಮಚ್ಚು, ಹೆಣ, ಹಗ್ಗ ಎಲ್ಲವನ್ನೂ ನೋಡ್ತಿದ್ರೆ ಶ್ರೀಜೈ ರೌಡಿಸಂ‌ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸಲು ಹೊರಟಂತಿದೆ. ಡ್ರೀಮ್ ವರ್ಲ್ಡ್ ಸಿನಿಮಾಸ್ ಹಾಗೂ ರಾಧಾಕೃಷ್ಣ ಆರ್ಟ್ಸ್ ಬ್ಯಾನರ್‌ನಡಿ ಸಿನಿಮಾ ನಿರ್ಮಾಣವಾಗಲಿದೆ. ಸೋಲೋಮನ್ ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದು, ಕೆಜಿಎಫ್ ಸಿನಿಮಾ ಖ್ಯಾತಿಯ ಶ್ರೀಕಾಂತ್ ಸಂಕಲನ ಹಾಗೂ ಭೈರಾದೇವಿ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದ, ಸೆಂಥಿಲ್ ಪ್ರಶಾಂತ್ ಈ ಚಿತ್ರಕ್ಕೂ ಸಂಗೀತ ಒದಗಿಸಲಿದ್ದಾರೆ‌.

Visited 1 times, 1 visit(s) today
error: Content is protected !!