Cini NewsSandalwood

ಅಪ್ಪ – ಮಗನ ಗಟ್ಟಿ ಕಥೆ “ನಾನು ಕರುಣಾಕರ” ಚಿತ್ರ ಬಿಡುಗಡೆಗೆ ಸಿದ್ದ.

Spread the love

ಅಪ್ಪು ಅವರನ್ನ ಆರಾಧ್ಯ ದೈವ ಎಂದೇ ಕಾಣುವ ನಿರ್ದೇಶಕ ಕಮ್ ನಟ ಆರ್ಯನ್ ತೇಜಸ್, ಸದ್ಯ ನಾನು ಕರುಣಾಕರ ಎಂದು ಬರ್ತಾ ಇದ್ದಾರೆ. ಮೂಲತಃ ಹಾಸನದವರು. ರಂಗಭೂಮಿಯತ್ತ ಬಂದು ನಟನೆ, ನಿರ್ದೇಶನವನ್ನು ಕಲಿತರು. ಸಿಲ್ಲಿಲಲ್ಲಿ ಸೇರಿದಂತೆ ಹಲವು ಧಾರವಾಹಿಗಳಲ್ಲೂ ನಟಿಸಿದ್ದಾರೆ.

ದಿನೇ ದಿನೇ ಕಳೆದ ಮೇಲೆ ಕ್ಯಾಮೆರಾ ಅಸಿಸ್ಟೆಂಟ್ ಹಾಗೂ ನಿರ್ದೇಶನದ ಟೀಂ ಜೊತೆಗೆ ಕೆಲಸ ಮಾಡಿರ್ತಾರೆ. ಆದರೂ ಅದ್ಯಾಕೋ ಇಂಡಸ್ಟ್ರಿ ಕೈಹಿಡಿಯಲಿಲ್ಲ ಅನ್ನಿಸಿ ಮತ್ತೆ ಹಾಸನದತ್ತ ಪ್ರಯಾಣ ಬೆಳೆಸುತ್ತಾರೆ. ಆದ್ರೆ ಮತ್ತೆ ಕನಸು ಸುಮ್ಮನೆ ಇರೋದಕ್ಕೆ ಬಿಡಬೇಕಲ್ಲ. ಮತ್ತೆ ಬೆಂಗಳೂರಿಗೆ ವಾಪಾಸ್ ಬಂದವರು ಇದೀಗ ನಾನು ಕರುಣಾಕರ ಎಂಬ ಸಿನಿಮಾ ಮಾಡಿದ್ದಾರೆ.

ಈ ಮೊದಲು ಪಾರ್ಕ್ ರೋಡ್ 100 ರೂಪಾಯಿ ಸಿನಿಮಾವನ್ನ ಮಾಡಿದ್ದರು. ಅದು ಶಿಕ್ಷಣದ ಮೇಲೆ ಇದ್ದಂತ ಸಿನಿಮಾ. ಪಾರ್ಕ್ ರೋಡ್ 100 ರೂಪಾಯಿ ಸಿನಿಮಾ ನೂರಾರು ಶಾಲೆಗಳಲ್ಲಿ ಪ್ರಸಾರ ಮಾಡಲಾಗಿತ್ತು. ಎಲ್ಲರೂ ನೀಡಿದ ಸ್ಪೂರ್ತಿಯಿಂದಾನೇ ಇಂದು ಮತ್ತೊಂದು ಸಿನಿಮಾ ಆಗಿದೆ. ಕೊರೊನಾಗೂ ಮೊದಲು ಕಥೆಯನ್ನ ಮಾಡಿಕೊಂಡಿದ್ದರು.

ಸುನೀಲ್ ಅವರು ನಿರ್ಮಾಪಕರಾದ ಸಂತೋಷ ಅವರಿಗೆ ಕಥೆ ಹೇಳಿದಾಗ ಈ ಕಥೆನ ಸಿನಿಮಾ ಮಾಡಿದರೆ ಅದ್ಭುತವಾಗಿರುತ್ತೆದೆ ಎಂಬುದು ಅರ್ಥವಾದಾಗ ಸಿನಿಮಾಗೆ ತಕ್ಕಂತೆ ಕಥೆಯನ್ನು ಎಣೆದು ಸಿನಿಮಾ ಮಾಡಲಾಯ್ತು. ಕನ್ನಡಕ್ಕೆ ಒಂದು ಒಳ್ಳೆ ಸಿನಿಮಾ ಕೊಡಬೇಕು ಎಂಬ ನಿಟ್ಟಿನಲ್ಲಿ ನಮನ್ ನಾರಾಯಣ್ ಸಂತೋಷ್ ಮತ್ತು ವೈಭವ್ ಸುರೇಶ್ ,‌ಶ್ರೀಕಾಂತ ಬಿ ಬಿ, ರವರು ಚಿತ್ರದ ನಿರ್ಮಾಣ ಮಾಡಿದ್ದಾರೆ.

ನಾನು ಕರುಣಾಕರ ಸಿನಿಮಾ ಎಲ್ಲರ ಲೈಫ್ ಗೂ ತುಂಬಾನೇ ಕನೆಕ್ಟ್ ಆಗುತ್ತೆ ಎಂಬ ಭರವಸೆಯನ್ನ ಚಿತ್ರತಂಡ ನೀಡಿದೆ. ಇದೊಂದು ಅಪ್ಪ ಮಗನ ಹಾಗೂ ಗಂಡ ಹೆಂಡತಿಯ ಬಾಂಧವ್ಯವನ್ನು ಹೊತ್ತ ಕಥೆಯಾಗಿದೆ. ಇಡೀ ಫ್ಯಾಮಿಲಿ ಕೂತು ನೋಡಿದಾಗ ಆ ತುಂಟ ಒಬ್ಬೊಬ್ಬರ ಮನೆಯಲ್ಲೂ ಇರೋದು ನಿಮಗೆ ಅರಿವಾಗುತ್ತದೆ. ಸದ್ಯ ಸಿನಿಮಾ ತನ್ನೆಲ್ಲಾ ಕೆಲಸ ಮುಗಿಸಿ ಫೆಬ್ರವರಿ 6ಕ್ಕೆ ಸಿನಿಮಾ ರಿಲೀಸ್ ಆಗುತ್ತಾ ಇದೆ.

ನಮ್ಮ ಪಾಪ್ ಕಾರ್ನ್ ಸಿನಿಮಾ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗಿರುವ ನಾನು ಕರುಣಾಕರ ಸಿನಿಮಾಗೆ ನಿರ್ದೇಶನ ಮತ್ತು ಹೀರೋ ಆಗಿ ಆರ್ಯನ್ ತೇಜಸ್ ಕಾಣಿಸಿಕೊಂಡಿದ್ದಾರೆ. ಜೋಡಿಯಾಗಿ ಭಾರ್ಗವಿ ಎಲ್ ಎಲ್ ಬಿ ಖ್ಯಾತಿಯ ರಾಧಾ ಭಗವತಿ ಮಾ” ಭವೀಶ್ ಇದ್ದಾರೆ. ಉಳಿದಂತೆ ಕರಿಸುಬ್ಬು, ಎಂ.ಕೆ. ಮಠ,
ಬಿ ಎಂ ವೆಂಕಟೇಶ ಅಪೂರ್ವ, ಸೇರಿದಂತೆ ಹಲವರು ತೆರೆ ಹಂಚಿಕೊಂಡಿದ್ದಾರೆ.

Visited 1 times, 1 visit(s) today
error: Content is protected !!