Cini NewsSandalwood

ಕೆ.ಆರ್.ಜಿ. ಸ್ಟೂಡಿಯೋಸ್ ಚೊಚ್ಚಲ ಮಲಯಾಳಂ ಚಿತ್ರ “ಪಡಕ್ಕಳಂ”ಗೆ ಚಾಲನೆ

Spread the love

ಕೆ.ಆರ್.ಜಿ. ಸ್ಟೂಡಿಯೋಸ್ ಮತ್ತು ಫ್ರೈಡೇ ಫಿಲಂ ಹೌಸ್ ನ ಪ್ರಥಮ ಸಹಯೋಗ ಮತ್ತು ಕೆ.ಆರ್.ಜಿ. ಬ್ಯಾನರ್‌ನ ಮೊದಲ ಮಲಯಾಳಂ ಚಿತ್ರವೂ ಆದ “ಪಡಕ್ಕಳಂ” ಚಿತ್ರಕ್ಕೆ ಮುಹೂರ್ತದ ಮೂಲಕ ಚಾಲನೆ ಸಿಕ್ಕಿದೆ. ಚಿತ್ರತಂಡ ಇಂದು ಕೊಚ್ಚಿಯಲ್ಲಿ ಮುಹೂರ್ತದ ಮೂಲಕ ಹಾಗೂ ಒಂದು ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರವನ್ನು ಅಧಿಕೃತವಾಗಿ ಆರಂಭಿಸಿದೆ.

“ಪಡಕ್ಕಳಂ” ಒಂದು ಹಾಸ್ಯಭರಿತ ಫ್ಯಾಂಟಸಿಯ ಚಿತ್ರವಾಗಿದ್ದು, ಚಿತ್ರವನ್ನು ಮನು ಸ್ವರಾಜ್ ನಿರ್ದೇಶಿಸುತ್ತಾರೆ. ಈ ಚಿತ್ರ ಅವರ ಮೊದಲ ಪ್ರಯತ್ನವಾಗಿದ್ದು, ಇದನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ.ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಖ್ಯಾತ ಮಲಯಾಳಂ ನಟ, ನಿರ್ಮಾಪಕ ವಿಜಯ್ ಬಾಬು ಫ್ರೈಡೇ ಫಿಲಂ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ.

Visited 1 times, 1 visit(s) today
error: Content is protected !!