Cini NewsSandalwood

ಇದೇ ತಿಂಗಳ 31ರಂದು ಕೋಮಲ್ ನಟನೆಯ “ಕೋಣ” ಚತ್ರ ರಿಲೀಸ್

ಕುಪ್ಪಂಡಾಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತನಿಶಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಪಾಲ್, ರವಿಕಿರಣ್ .ಎನ್ ನಿರ್ಮಾಣ ಮಾಡಿರುವ ಕೋಣ ಸಿನಿಮಾದ ಬಿಡುಗಡೆ ದಿನಾಂಕ‌ ನಿಗದಿಯಾಗಿದೆ.‌ ಇದೇ ತಿಂಗಳ 31ರಂದು ಕೋಣ ಚಿತ್ರ ರಾಜ್ಯಾದ್ಯಂತ ತೆರೆಗೆ ಬರ್ತಿದೆ. ಈ ಕುರಿತು ನಿನ್ನೆ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಸುದ್ದಿ ಗೋಷ್ಟಿ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ನಟ ಕೋಮಲ್, ಕೋಣ ಚಿತ್ರ ಬಿಡುಗಡೆ ಮಾಡುವ ಟೈಮ್ ಬಂದಿದೆ.‌ ಕೋಣ ಚಿಕ್ಕ ವಯಸ್ಸಿನಿಂದ ಕನೆಕ್ಟೆಡ್. ನಾನು ಸ್ಕೂಲ್ ನಲ್ಲಿ ಓದಬೇಕಾದರೆ‌ ನಮ್ಮ ಟೀಚರ್ ಕೋಣ ಕೋಣ ಎನ್ನುತ್ತಿದ್ದರು. ನನಗೆ ಆಗ ಕೋಪ ಬರುತ್ತಿತ್ತು. ಈಗ ಕೋಣ ಪಿಕ್ಚರ್ಸ್ ಮಾಡುತ್ತಿರುವುದು ಖುಷಿಯಾಗುತ್ತದೆ. ಇಡೀ ತಂಡದ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಚಿತ್ರ ನನಗೆ ತೃಪ್ತಿ ಕೊಟ್ಟಿದೆ ಎಂದರು.

ನಟಿ ತನಿಶಾ ಕುಪ್ಪಂಡ ಮಾತನಾಡಿ,‌ ಕೋಣ ಸಿನಿಮಾದಲ್ಲಿ ನಾನು ಲಕ್ಷ್ಮಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದೇವೆ. ಅಕ್ಟೋಬರ್ 31ರಂದು ನಮ್ಮ ಚಿತ್ರ ತೆರೆಗೆ ಬರ್ತಿದೆ. ಕೋಮಲ್ ಸರ್ ನಾರಾಯಣ ಎಂಬ ಪಾತ್ರ ಮಾಡಿದ್ದಾರೆ. ಅವರ ಪತ್ನಿಯಾಗಿ ನಾನು ನಟಿಸಿದ್ದೇನೆ. ಇಷ್ಟು ದಿನ ನೀನು ನೋಡದ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ಈ ಪಾತ್ರ ನೋಡಿ ಇವರು ಈ ರೀತಿ ನಟಿಸಬಹುದಾ ಎನ್ನಬಹುದು. ಪ್ರೊಡ್ಯೂಸರ್ ಆಗಿ ನಾನು ಹೆಜ್ಜೆ ಮುಂದೆ ಇಡಲು ಕಾರಣ ರವಿ ಕಿರಣ್ ಸರ್ ಹಾಗೂ ಕಾರ್ತಿಕ್ ಸರ್ ಎಂದರು.

ಕೋಮಲ್ ಕುಮಾರ್ ನಾಯಕನಾಗಿ, ತನಿಶಾ ಕುಪ್ಪಂಡ ನಾಯಕಿಯಾಗಿ ನಟಿಸಿದ್ದಾರೆ. ಕೀರ್ತಿರಾಜ್, ರಿತ್ವಿ ಜಗದೀಶ್, ರಾಘು ರಾಮನಕೊಪ್ಪ, ವಿಜಯ್ ಚೆಂಡೂರ್, ಎಂ.ಕೆ.ಮಠ್, ರಂಜಿತ್ ಗೌಡ, ತುಕಾಲಿ ಸಂತೋಷ್, ಹುಲಿ ಕಾರ್ತಿಕ್, ನಿರಂಜನ್, ಅನಂತ್, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಸುಷ್ಮಿತ, ಜಗಪ್ಪ, ಮಂಜು ಪಾವಗಡ, ಕುರಿ ಸುನಿಲ್, ನಮ್ರತಾ ಗೌಡ, ವಿನಯ್ ಗೌಡ, ಮೋಹನ್ ಕೃಷ್ಣರಾಜ್ ಹೀಗೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಡಾರ್ಕ್ ಕಾಮೆಡಿ ಶೈಲಿಯಲ್ಲಿ ‘ಕೋಣ’ ಸಿನಿಮಾ ಮೂಡಿಬರಲಿದೆ. ಹರಿಕೃಷ್ಣ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ನಾಗೇಶ್.ಎನ್ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಒಂದು ನೈಜ ಘಟನೆಯನ್ನು ಆಧರಿಸಿ ಈ ಚಿತ್ರ ತಯಾರಾಗಿದ್ದು ತೆರೆಗೆ ಬರಲು ಸಿದ್ಧವಾಗಿದೆ.

ಶಶಾಂಕ್ ಶೇಷಗಿರಿ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವೀನಸ್ ನಾಗರಾಜ್ಮೂರ್ತಿ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದು,ಉಮೇಶ್ ಆರ್. ಬಿ. ಅವರ ಸಂಕಲನ ಚಿತ್ರಕ್ಕಿದೆ, ಸಾಹಸ ನಿರ್ದೇಶಕರಾಗಿ ವಿನೋದ್‌ ಕುಮಾರ್‌, ಮುರುಗ ಮಾಸ್ಟರ್ ಅವರ ನೃತ್ಯ ನಿರ್ದೇಶನ ಹಾಗೂ ಶಶಿಕುಮಾರ್ ಅವರ ಸಂಭಾಷಣೆ ಕೋಣ ಚಿತ್ರಕ್ಕಿದೆ.

error: Content is protected !!