Cini NewsSandalwoodTV Serial

*ಯುವ ಪ್ರತಿಭೆಗಳ “ಕರಿಕಾಡ” ಚಿತ್ರದ ಟೀಸರ್ ಬಿಡುಗಡೆ.*

Spread the love

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ವಿಭಿನ್ನ ಪ್ರಯತ್ನದ “ಕರಿಕಾಡ” ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರವು ಕನ್ನಡದಲ್ಲಿ ತಯಾರಾಗಿ ಪಂಚಭಾಷೆ ಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಇದೊಂದು ಮ್ಯೂಸಿಕಲ್ ಜರ್ನಿ & ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿರುವ ಸಿನಿಮಾ. ಮೂರು ತಿಂಗಳ ಹಿಂದೆ ಟೈಟಲ್ ಟೀಸರ್ ರಿಲೀಸ್ ಮಾಡಿ ಸದ್ದು ಮಾಡಿದ್ದ ಕರಿಕಾಡ ಚಿತ್ರತಂಡ ಇದೀಗ ಅಧಿಕೃತ ಟೀಸರ್ ರಿಲೀಸ್ ಮಾಡಿ. ಗಮನ ಸೆಳೆದಿದೆ. ಟೀಸರ್ ಭರವಸೆ ಹುಟ್ಟಿಸ್ತಿದೆ. ಸಾಹಸಮ ದೃಶ್ಯಕಾವ್ಯವಾಗಿ, ಪ್ರೇಮಕಥೆಯ ರೂಪಕವಾಗಿ, ನಮ್ಮ ಮಣ್ಣಿನ ಸೊಗಡನ್ನ ಸೂಸುವಂತಹ ಕಥಾಹಂದರ ಹೊಂದಿರುವಂತೆ ಕಾಣ್ತಿದೆ. ರಿವೇಂಜ್ ಸ್ಟೋರಿಯಂತೆ ಭಾಸವಾಗ್ತಿರೋ ಈ ಸಿಮಾದ ತಾರಾಗಣ ಮತ್ತು ತಾಂತ್ರಿಕತೆ ಗಮನ ಸೆಳೆಯುತ್ತಿದೆ.

ಕಾಡನಟರಾಜ್ ನಾಯಕ ನಟನಾಗಿ ಅಭಿನಯಿಸಿರೋ ಈ ಸಿನಿಮಾದಲ್ಲಿ ಬಲರಾಜವಾಡಿ , ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ತುಳು ಚಿತ್ರರಂಗದ ಚೆಲುವೆ ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಮಂಜು ಸ್ವಾಮಿ , ಗೋವಿಂದ ಗೌಡ , ದೀವಾಕರ್ , ಕಾಮಿಡಿ ಕಿಲಾಡಿ ಸೂರ್ಯ , ದಿ.ರಾಕೇಶ್ ಪೂಜಾರಿ , ವಿಜಯ್ ಚಂಡೂರು , ಚಂದ್ರಪ್ರಭ , ಕರಿಸುಬ್ಬು , ಗಿರಿ , ಮಾಸ್ಟರ್ ಆರ್ಯನ್ , ಬಾಲನಟಿ ರಿದ್ಧಿ , ಹಾಗೂ ಮುಂತಾದವರು. ಇನ್ನು ರಿದ್ಧಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್ನಡಿ ಕಾಡ ನಟರಾಜ್ ಅವರ ಧರ್ಮಪತ್ನಿ ದೀಪ್ತಿ ದಾಮೋದರ್ ತನ್ನ ಪತಿಯ ಕನಸಿನ ಗುರಿಗೆ ದಾರಿ ತೋರಿಸಿದ್ದಾರೆ. ಈ ದಾರಿಗೆ ಸ್ನೇಹಿತರಾದ ರವಿಕುಮಾರ್ ಎಸ್.ಆರ್ ಸಹ ನಿರ್ಮಾಣದ ಸಾಥ್ ನೀಡಿದ್ದಾರೆ.
ಕರಿಕಾಡ ಚಿತ್ರವನ್ನ ಕೆ .ವೆಂಕಟೇಶ್ ನಿರ್ದೇಶಿಸಿದ್ದು, ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ಸಂಗೀತ ಚಿತ್ರಕ್ಕಿದೆ. ಶಶಾಂಕ್ ಶೇಷಾಗರಿ ಅವರು ರಾಗ ಸಂಯೋಜನೆ ಜೊತೆಗೆ ಜಬರ್ದಸ್ತ್ ಹಿನ್ನಲೆ ಸಂಗೀತವನ್ನ ನೀಡಿದ್ದಾರೆ. ಕ್ಯಾಮರಾ ಸಾರಥಿಯಾಗಿ ಜೀವನ್ ಗೌಡ ಕೆಲಸ ಮಾಡಿದ್ದಾರೆ. ದೀಪಕ್ ಸಿ.ಎಸ್ ಸಂಕಲನವಿದೆ.

ಕರಿಕಾಡ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಚಿತ್ರತಂಡ ಚಿತ್ರದ ಹಲವು ವಿಶೇಷತೆಗಳನ್ನ ಮಾಧ್ಯಮದ ಮುಂದಿಟ್ಟಿದೆ. ಅದ್ರಲ್ಲೂ ಅಪ್ಪಟ ಕನ್ನಡಿಗರು ಮಾಡಿರೋ ಈ ಕನ್ನಡ ಚಿತ್ರವನ್ನ ನೋಡಿ ಬಾಲಿವುಡ್ ಫಿಲಂ ಟ್ರೇಡರ್ಸ್ ಖುದ್ದು ಈ ಚಿತ್ರವನ್ನ ಹಿಂದಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಅಲ್ಲದೇ ಕನ್ನಡ ಸಿನಿಮಾವೊಂದಕ್ಕೆ ಇಷ್ಟೊಂದು ಬ್ರ್ಯಾಂಡ್ ಗಳೂ ಬಂದಿರೋದು ಇದೇ ಮೊದಲಾಗಿದ್ದು, ಮಾರ್ಕೆಟಿಂಗ್ ವಿಚಾರದಲ್ಲಿ ಕರಿಕಾಡ ಸಿನಿಮಾ ಹಲವು ಮೊದಲುಗಳಿಗೆ ಸಾಕ್ಷಿಯಾಗಲಿದೆ ಎಂದು ತಿಳಿಸಿದೆ. ನಿರೀಕ್ಷೆ ಹುಟ್ಟಿಸಿದ ಹೊಸ ನಾಯಕ ಕಾಡ ನಟರಾಜ್ ನಟನೆಯ ಈ ಕರಿಕಾಡ ಚಿತ್ರ 2026ಕ್ಕೆ ವಿಶ್ವದಾದ್ಯಂತ 1200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಮಾಡುವ ತಯಾರಿ ನಡೆದಿದೆಯಂತೆ. ಈ ಕರಿಕಾಡ ಚಿತ್ರಕ್ಕೆ ಕಾರ್ಪೋರೇಟ್ ಜಗತ್ತಿನ ಬ್ರ್ಯಾಂಡ್ಸ್ ಸಾಥ್ ನೀಡಿದು, ಉತ್ತರ ಭಾರತದಲ್ಲಿ ದೊಡ್ಡದಾಗಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆಯಂತೆ.

Visited 2 times, 1 visit(s) today
error: Content is protected !!