*ಕುತೂಹಲ ಮೂಡಿಸಿದ “ಕರಿಕಾಡ” ಚಿತ್ರದ ಟೀಸರ್ ಖದರ್.*
*2 ಮಿಲಿಯನ್ ಗೂ ಅಧಿಕ ವೀಕ್ಷಣೆಯಾದ ಆಕ್ಷನ್, ಲವ್, ರಿವೆಂಜ್ ಸಬ್ಜೆಕ್ಟ್ ನ ರೋಚಕತೆ.*
ಚಂದನವನಕ್ಕೆ ಮತ್ತೊಂದು ವಿಭಿನ್ನ ಕಥಾನಕದ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ. ಇನ್ನು ಅಧಿಕೃತವಾಗಿ ಬಿಡುಗಡೆಗೊಂಡಿರುವ ಟೀಸರ್ ಆರಂಭದಲ್ಲೇ ವರಹ ಸ್ವಾಮಿ ಎಂಟ್ರಿ ಚಿತ್ರದ ಗೆಲುವಿನ ಲಕ್ಷಣ ತೋರಿದಂತಿದೆ. ನಮ್ಮ ಮಣ್ಣಿನ ಸೊಗಡನ್ನ ಸೂಸುವಂತಹ ಕಥೆಯಲ್ಲಿ ದಟ್ಟ ಅರಣ್ಯದ ನಡುವೆ ಕುತೂಹಲ ಮೂಡಿಸುವ ಸನ್ನಿವೇಶಗಳು , ಭರ್ಜರಿ ಆಕ್ಷನ್ , ಫೈಯರ್ ಬ್ಲಾಸ್ಟ್ , ಕೋವಿ ಹಿಡಿದು ಬೇಟೆ ಆಡುವ ರೀತಿ, ಖದರ್ ಡೈಲಾಗ್ಸ್ , ಗ್ರಾಫಿಕ್ ತಂತ್ರಜ್ಞಾನ , ಛಾಯಾಗ್ರಾಹಕರ ಕೈಚಳಕ , ಹಿನ್ನೆಲೆ ಸಂಗೀತದ ಅಬ್ಬರ ಇದೆಲ್ಲವೂ ಚಿತ್ರದ ಟೀಸರ್ ಗೆ ಕಳಶ ಪ್ರಾಯದಂತೆ ಅದ್ಭುತವಾಗಿ ಮೂಡಿ ಬಂದಿದೆ. ಇದೊಂದು ಮ್ಯೂಸಿಕಲ್ ಜರ್ನಿ ಹಾಗೂ ಅಡ್ವೆಂಚರ್ಸ್ ಎಲಿಮೆಂಟ್ ಹೊಂದಿರುವಂತಹ ಚಿತ್ರವಾಗಿದ್ದು , ಟೀಸರ್ ಭರವಸೆ ಹುಟ್ಟಿಸ್ತಿದೆ.
ಸಾಹಸಮಯ ದೃಶ್ಯ ದೊಂದಿಗೆ ಪ್ರೇಮಕಥೆಯ ರೂಪಕವಾಗಿ ಒಂದು ರಿವೇಂಜ್ ಸ್ಟೋರಿಯಂತೆ ಕಾಣುತ್ತಿರುವ ಈ ಟೀಸರ್ ತಾಂತ್ರಿಕವಾಗಿ ಉತ್ತಮವಾಗಿದೆ. ಪರಭಾಷಾ ಚಿತ್ರಗಳಿಗೆ ಸೆಡ್ಡು ಹೊಡೆಯುವಂತೆ ಬಂದಿರುವ ಈ ಚಿತ್ರದ ಟೀಸರ್ ನೋಡಿದ ಲಹರಿ ಸಂಸ್ಥೆ ಬೆಂಬಲವನ್ನ ನೀಡಿದೆ. ಹಾಗೆ ಈ ಚಿತ್ರತಂಡಕ್ಕೆ ಕಾರ್ಪೊರೇಟ್ ಜಗತ್ತಿನ ಬ್ರಾಂಡ್ಸ್ ಕೂಡ ಸಾಥ್ ನೀಡುತ್ತಿದ್ದು , ಅದ್ದೂರಿಯಾಗಿ ಈ ಚಿತ್ರವನ್ನ ಪ್ಯಾನ್ ಇಂಡಿಯಾ ಹಾದಿಯಲ್ಲಿ ಸದ್ದು ಮಾಡಲು ಸಿದ್ಧವಾಗಿದೆ.

*ಪ್ರತಿಭಾನ್ವಿತ ಕಲಾವಿದರ ಹಾಗೂ ತಂತ್ರಜ್ಞಾನ ಬಳಗದ ಸಮಾಗಮ.*
ಬಣ್ಣದ ಬದುಕು ಎಲ್ಲರನ್ನ ಆಕರ್ಷಿಸುತ್ತದೆ. ಆದರೆ ಕೆಲವರನ್ನ ಮಾತ್ರ ತನ್ನತ್ತ ಸೆಳೆಯುತ್ತದೆ. ಸಿನಿಮಾ ಮೇಲೆ ಯಾರಿಗೆ ಪ್ರೀತಿ , ಆಸಕ್ತಿ , ಶ್ರದ್ಧೆ ಇರುತ್ತೋ ಅವರಿಗೆ ಗೆಲುವು ಸಿಕ್ಕೇ ಸಿಗುತ್ತೆ. ಅಂತದ್ದೇ ಭರವಸೆಯೊಂದಿಗೆ ಯುವ ನಟ ನಟರಾಜ್ ಬೆಳ್ಳಿ ಪರದೆ ಮೇಲೆ ಪ್ರಥಮ ಬಾರಿಗೆ ನಾಯಕನಾಗಿ ಪ್ರವೇಶ ಮಾಡುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ಚಿತ್ರಕಥೆ , ಸಂಭಾಷಣೆ ಹಾಗೂ ನಿರ್ದೇಶನವನ್ನ ಕೆ. ವೆಂಕಟೇಶ್ ಮಾಡಿದ್ದು , ರಿದ್ಧಿ ಎಂಟರ್ಟೈನ್ಮೆಂಟ್ಸ್ ಮೂಲಕ ದೀಪ್ತಿ ದಾಮೋದರ್ ಜೊತೆ ಸಹ ನಿರ್ಮಾಣದಲ್ಲಿ ರವಿಕುಮಾರ್ .ಎಸ್.ಆರ್ , ನಟರಾಜ. ಎಸ್. ಆರ್ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಪ್ರಕಾಶ್. ಎಸ್.ಆರ್ ಹಾಗೂ ದಿವಾಕರ್ ಬಿ.ಎಮ್. ಸಾಥ್ ನೀಡಿದ್ದಾರೆ.

ಈ ಒಂದು ವಿಭಿನ್ನ ಚಿತ್ರಕ್ಕೆ ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ಸಂಗೀತ , ಜೀವನ್ ಗೌಡ ಛಾಯಾಗ್ರಹಣ ದೀಪಕ್ ಸಿ.ಎಸ್ ಸಂಕಲನವಿದೆ. ಯುವ ನಟ ಕಾಡ ನಟರಾಜ್ ಜೊತೆಗೆ ನಾಯಕಿಯಾಗಿ ನಿರೀಕ್ಷಾ ಶೆಟ್ಟಿ, ಬಾಲನಟಿ ರಿದ್ಧಿ , ಮಂಜು ಸ್ವಾಮಿ , ಯಶ್ ಶೆಟ್ಟಿ , ಗೋವಿಂದ ಗೌಡ , ದೀವಾಕರ್ , ಕಾಮಿಡಿ ಕಿಲಾಡಿ ಸೂರ್ಯ , ದಿ.ರಾಕೇಶ್ ಪೂಜಾರಿ , ವಿಜಯ್ ಚಂಡೂರು , ಚಂದ್ರಪ್ರಭ , ಕರಿಸುಬ್ಬು , ಗಿರಿ , ಬಾಲರಾಜವಾಡಿ , ಮಾಸ್ಟರ್ ಆರ್ಯನ್ ಹಾಗೂ ಮುಂತಾದವರು ಅಭಿನಯಿಸಿದ್ದಾರೆ. ನಿರೀಕ್ಷೆ ಹುಟ್ಟಿಸಿರುವ “ಕರಿಕಾಡ” ಚಿತ್ರ ಬಹುಭಾಷೆಯಲ್ಲಿ ತಯಾರಾಗಿದ್ದು , 2026ಕ್ಕೆ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡಲು ತಂಡ ಸಜ್ಜಾಗಿದೆಯಂತೆ.