Cini NewsSandalwood

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ”ಕಾಂತಾರ ಚಾಪ್ಟರ್ 1” ಬಿಡುಗಡೆಗೆ ಸಿದ್ಧ

Spread the love

ಬಹುನಿರೀಕ್ಷಿತ ಚಲನಚಿತ್ರ ಕಾಂತಾರ ಚಾಪ್ಟರ್ 1, ಅಕ್ಟೋಬರ್ 2, 2025 ರಂದು ವಿಶ್ವಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ರಿಷಬ್ ಶೆಟ್ಟಿ ಅವರು ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿನ ವೀಕ್ಷಕರಿಗಾಗಿ, ಈ ಚಿತ್ರವನ್ನು ಡ್ರೀಮ್ ಸ್ಕ್ರೀನ್ಸ್ ಇಂಟರ್‌ನ್ಯಾಷನಲ್ ವಿತರಿಸಲಿದ್ದು, ಅಲ್ಲಿನ ಸಿನಿಪ್ರಿಯರು ಈ ದೈವಿಕ ಕಥೆಯನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಜಾಗತಿಕವಾಗಿ ಮೆಚ್ಚುಗೆ ಗಳಿಸಿದ್ದ ಕಾಂತಾರ (2022) ಚಿತ್ರದ ಪ್ರಿಕ್ವೆಲ್ ಆಗಿರುವ ಈ ಸಿನಿಮಾ, ನಮ್ಮ ಸಂಸ್ಕೃತಿ, ಜಾನಪದ ಮತ್ತು ಆಧ್ಯಾತ್ಮಿಕತೆಯ ಬೇರುಗಳನ್ನು ಮತ್ತಷ್ಟು ಆಳವಾಗಿ ಪರಿಚಯಿಸಲಿದೆ.

ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರವು ಭಾರತೀಯ ಹಾಗೂ ಜಾಗತಿಕ ಸಿನಿಪ್ರಿಯರಿಗೆ ಒಂದು ಅದ್ಭುತ ಅನುಭವ ನೀಡಲಿದೆ.ಕಾಲಾತೀತ ಕಥೆಗಳನ್ನು ಸೃಷ್ಟಿಸುವ ಹೊಂಬಾಳೆ ಫಿಲ್ಮ್ಸ್‌ನ ದೂರದೃಷ್ಟಿಯ ಭಾಗವಾಗಿರುವ ಕಾಂತಾರ ಚಾಪ್ಟರ್ 1, ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.

Visited 1 times, 1 visit(s) today
error: Content is protected !!