Cini NewsSandalwoodTV Serial

ಶಿವಣ್ಣ ಮತ್ತು ಜೋಗಿ ಪ್ರೇಮ್  “J C”  ಟ್ರೈಲರ್ ಗೆ ಸಾಥ್.. ಫೆಬ್ರವರಿ 6ಕ್ಕೆ ಸಿನಿಮಾ ಬಿಡುಗಡೆ.

Spread the love

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಖದರ್ ಚಿತ್ರ ತೆರೆಯ ಮೇಲೆ ಬರಲು ಸಿದ್ಧವಾಗಿದೆ. ಡಾಲಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ ನಿರ್ಮಾಣದಲ್ಲಿ ಮೂಡಿ ಬಂದಿರುವ ಬಹು ನಿರೀಕ್ಷೆಯ “ಜೆಸಿ” ದಿ ಯೂನಿವರ್ಸಿಟಿ ಸಿನಿಮಾ ಫೆಬ್ರವರಿ 6ಕ್ಕೆ ಅದ್ದೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ. ಸೂರ್ಯ ಪ್ರಖ್ಯಾತ್ ಮತ್ತು ಭಾವನಾ ರೆಡ್ಡಿ ನಟನೆಯ ಜೆಸಿ ಸಿನಿಮಾದ ಟ್ರೈಲರ್ ರಿಲೀಸ್ ಮಾಡುವ ಜೊತೆಗೆ ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಿದ್ದಾರೆ.

ಡಾಲಿ ಅವರ ಪ್ರೀತಿಯ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಜೋಗಿ ಪ್ರೇಮ್ ಜೆಸಿ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಶುಭಹಾರೈಸಿದರು. ಜೆಸಿ ಒಂದು ಪಕ್ಕ ಮಾಸ್ ಸಿನಿಮಾ. ಜೈಲಿನ ಸುತ್ತ ನಡೆಯುವ ಕಥೆ. ಹಾಗಾಗಿ ಜೋಗಿಯ ಸೂಪರ್ ಹಿಟ್ ಜೋಡಿ ಶಿವಣ್ಣ ಮತ್ತು ಪ್ರೇಮ್ ಇಬ್ಬರೂ ಸೇರಿ ಟ್ರೈಲರ್ ರಿಲೀಸ್ ಮಾಡಿದರೆ ಸೂಪರ್ ಅಂತ ನಿರ್ಧರಿಸಿ ಇಬ್ಬರ ಬಳಿ ಟ್ರೈಲರ್ ಬಿಡುಗಡೆ ಮಾಡಿಸಲಾಯಿತು.

ಚೇತನ್ ಜೈರಾಮ್ ಅವರ ಚೊಚ್ಚಲ ನಿರ್ದೇಶನದಲ್ಲಿ ಬಂದಿರುವ ಜೆಸಿ, ಜೈಲಿನಲ್ಲಿ ನಡೆಯುವ ಕಥೆ. ಜೈಲು ಒಳಗಿನ ಅವ್ಯವಹಾರ, ಕೈದಿಗಳ ದರ್ಬಾರ್ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಫೈಟ್, ಕೊಲೆ, ರಕ್ತ ಇದರ ನಡುವೆ ಅಪ್ಪ ಮಗನ ಭಾವನಾತ್ಮಕ ಕಥೆಯನ್ನು ಹೇಳಲಾಗಿದೆ. ಟ್ರೇಲರ್ ನಲ್ಲಿ ಮಗ ಕಿರೀಟ ಹೊತ್ಕೊದಿದ್ರೂ ಪರವಾಗಿಲ್ಲ, ಕಳಂಕ ಹೊತ್ಕೋಬಾರ್ದು ಎನ್ನುವ ಡೈಲಾಗ್ ಗಮನ ಸೆಳೆಯುತ್ತಿದೆ.


ಜೆಸಿ ದಿ ಯೂನರ್ಸಿಟಿ ಟ್ರೈಲರ್ ನೋಡಿ ನಿರ್ದೇಶಕ ಪ್ರೇಮ್ ಮತ್ತು ಶಿವಣ್ಣ ಇಬ್ಬರು ಫಿದಾ ಆಗಿದ್ದಾರೆ. ಹೀರೋ ಪ್ರಖ್ಯಾತ್ ಅವರನ್ನು ಹಾಡಿ ಹೊಗಳಿದರು. ಹೀರೋ ಪ್ರಖ್ಯಾತ್ ನೋಡಿ ಶಿವಣ್ಣನ ಜೋತೆಗಿನ ಶೂಟಿಂಗ್ ಅನುಭವನ್ನು ಬಿಚ್ಚಿಟ್ಟರು ಜೋಗಿ ಪ್ರೇಮ್. ಹಾಗೂ ಯಾರಿಗೂ ಜೈಲಿನ ಅನುಭವ ಬೇಡ, ಅಲ್ಲಿ ದುಡ್ಡು ಇರೋನಿಗೆ ಮಾತ್ರ ಬೆಲೆ, ಎಷ್ಟೋ ಜನರಿಗೆ ಬೇಲ್ ಸಿಕ್ಕಿದ್ರು ಬಿಡಿಸಿಕೊಳ್ಳಲು ಆಗಲ್ಲ ಅಂತ ಸ್ಥಿತಿಯಲ್ಲಿದ್ದಾರೆ’ ಎಂದು ಪ್ರೇಮ್ ಜೈಲಿನ ಬಗ್ಗೆ ಹೇಳಿದರು. ಬಳಿಕ ಶಿವಣ್ಣನ ಹಾಗೆ ಲಾಂಗ್ ಹಿಡಿಯೋದನ್ನ ಕಲಿತಿದ್ದೀಯಾ ಎಂದು ಪ್ರಖ್ಯಾತ್ ನ ಹೊಗಳಿದರು.

ಶಿವಣ್ಣ ಕೂಡ ಟ್ರೈಲರ್ ನೋಡಿ ತುಂಬಾ ಖುಷಿ ಪಟ್ಟರು. ಜೈಲ್ ಒಂದು ಪರಿವರ್ತನೆಯ ಜಾಗ, ಜೈಲಿಗೆ ಹೋಗಿ ಬಂದವರು ಅನೇಕರು ಬದಲಾಗುತ್ತಾರೆ ಎಂದರು. ಭವಿಷ್ಯದ ಸ್ಟಾರ್ ಆಗುವ ಎಲ್ಲಾ ಕ್ವಾಲಿಟಿಗಳು ಪ್ರಖ್ಯಾತ್ ಅವರಲ್ಲಿ ಇದೆ. ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ, ಜೊತೆಗೆ ನೋಡಲು ಸಖತ್ ಸ್ಮಾರ್ಟ್ ಆಗಿದ್ದಾರೆ, ಲಕ್ ಕೂಡ ಇದೆ ಎಂದು ಪ್ರಖ್ಯಾತ್ ಅವರಿಗೆ ಹಾರೈಸಿದರು. ಟ್ರೈಲರ್ ರಿಲೀಸ್ ಮಾಡಿಕೊಟ್ಟ ಶಿವಣ್ಣ ಮತ್ತು ಜೋಗಿ ಪ್ರೇಮ್ ಅವರಿಗೆ ಡಾಲಿ ಧನ್ಯವಾದ ತಿಳಿಸಿದರು. ಚಿತ್ರರಂಗದಲ್ಲಿ ಒಬ್ಬ ಅಣ್ಣನ ಹಾಗೆ ಸಹಾಯಕ್ಕೆ ನಿಂತ ವ್ಯಕ್ತಿ ಶಿವಣ್ಣ. ನನ್ನ ಮೊದಲ ನಿರ್ಮಾಣದ ಸಿನಿಮಾದಿಂದ ಇಲ್ಲಿಯ ವರೆಗೂ ತುಂಬಾ ಸಹಾಯ ಮಾಡಿದ್ದಾರೆ. ಎಂದರು.

ಹೀರೋ ಪ್ರಖ್ಯಾತ್ ಮಾತನಾಡಿ, ದುಡ್ಡು ಇರೋರೆಲ್ಲ ಹೀರೋ ಆಗಲು ಸಾಧ್ಯಿಲ್ಲ. ಜನ ಒಪ್ಕೊಬೇಕು, ಸರಸ್ವತಿ ಆಶೀರ್ವಾದ ಇರಬೇಕು. ಸೂಪರ್ ಸ್ಟಾರ್ ಮಕ್ಕಳುಗು ಫೇಲ್ ಆಗಿರೋದು ಇದೆ. ಬಡವರ ಮಕ್ಕಳು ಸೂಪರ್ ಸ್ಟಾರ್ ಆಗಿರುವ ಉದಾಹರಣೆಯೂ ಇದೆ. ದುಡ್ಡು ಇದ್ರೆ ಎಲಕ್ಷನ್ ಗೆಲ್ಲಬಹುದು ಆದರೆ ಸಿನಿಮಾ ಗೆಲ್ಲಿಸೋದು ಕಷ್ಟ’ ಎಂದರು. ಇನ್ನೂ ನಾಯಕಿ ಭಾವನಾ ರೆಡ್ಡಿ ಮಾತನಾಡಿ, ಹೊಸಬರಿಗೆ ಅವಕಾಶ ನೀಡುತ್ತಿರುವ ಡಾಲಿ ಧನಂಜಯ ಅವರಿಗೆ ಧನ್ಯವಾದ ತಿಳಿಸಿದರು. ಎಲ್ಲರೂ ಸಿನಿಮಾ ನೋಡಿ ಎಂದು ಕೇಳಕೊಂಡರು. ಈ ಸಿನಿಮಾದಲ್ಲಿ ಖ್ಯಾತ ಸಾಹಸ ನಿರ್ದೇಶಕ ತ್ರಿಲ್ಲರ್ ಮಂಜು, ವಿಜಯ್ ಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೆಸಿ ಸಿನಿಮಾಗೆ ಖ್ಯಾತ ಡೈಲಾಗ್ ರೈಟರ್ ಮಾಸ್ತಿ ಅವರು ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ಛಾಯಾಗ್ರಾಹಣ, ರೋಹಿತ್ ಸೋವರ್ ಸಂಗೀತ ನಿರ್ದೇಶನವಿದೆ. ಸಿನಿಮಾ ಫೆಬ್ರವರಿ 6ಕ್ಕೆ ರಾಜ್ಯದಾದ್ಯಂತ ತೆರೆಗೆ ಬರುತ್ತಿದೆ.

Visited 1 times, 1 visit(s) today
error: Content is protected !!