Cini NewsKollywoodTollywoodTV Serial

ಕೆವಿಎನ್ ನಿರ್ಮಾಣದ “ಜನ ನಾಯಗನ್” ಚಿತ್ರದ ಮೊದಲ ನೋಟ… 2026 ಜನವರಿ 9ರಂದು ರಿಲೀಸ್.

ಬಹಳಷ್ಟು ಕುತೂಹಲವನ್ನು ಮೂಡಿಸಿದಂತಹ ನಟ ದಳಪತಿ ವಿಜಯ್ ರವರ “ಜನ ನಾಯಗನ್” ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯ ನಿರ್ಮಾಪಕ ವೆಂಕಟ್. ಕೆ . ನಾರಾಯಣ ನಿರ್ಮಾಣದ ಈ ಅದ್ದೂರಿ ಚಿತ್ರದ ಮೊದಲ ನೋಟ ದಳಪತಿ ವಿಜಯ್ ರ 51ನೇ ಹುಟ್ಟು ಹಬ್ಬದ ಸಂಭ್ರಮದ ವಿಶೇಷವಾಗಿ ಹೊರ ತಂದಿದ್ದಾರೆ.

https://drive.google.com/drive/folders/1ubxoxyPPwZYptl0JrNRZTbXPP_w34Iyb

ತನ್ನ ಮೊದಲ ನೋಟದಲ್ಲಿ ದಳಪತಿ ವಿಜಯ್ ಖದರ್ ಲುಕ್ ನಲ್ಲಿ ರಾಯಲ್ ಸಿಂಹಸದ ಮೇಲೆ ಖಡ್ಗ ಹಿಡಿದು ಕುಳಿತಿರುವ ಮಾಸ್ ಪೋಸ್ಟರ್ ಅಭಿಮಾನಿಗಳಲ್ಲಿ ಬಹಳಷ್ಟು ಕುತೂಹಲವನ್ನು ಮೂಡಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಮುಖ್ಯಸ್ಥರಾದ ವೆಂಕಟ್. ಕೆ .ನಾರಾಯಣ್ ಎಲ್ಲಾ ಭಾಷೆಗಳಲ್ಲೂ ಚಿತ್ರ ನಿರ್ಮಾಣವ ಮಹಾದಾಸೆ ಹೊಂದಿದ್ದು, ನಿರೀಕ್ಷೆಯಂತೆ ಅದ್ದೂರಿ ಚಿತ್ರಗಳನ್ನು ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಇಂದು ನಟ ದಳಪತಿ ವಿಜಯ್ ಹುಟ್ಟುಹಬ್ಬದಂದು ಬಿಡುಗಡೆ ಮಾಡಿರುವ ಗ್ಲೀಮ್ಸ್ ಎಲ್ಲರ ಮೆಚ್ಚುಗೆ ಪಡೆದು , ಅಭಿಮಾನಿಗಳ ಖುಷಿ ಇಮ್ಮಡಿ ಗೊಳಿಸಿದೆ. ಅದರಲ್ಲೂ ಈ ಚಿತ್ರ ದಳಪತಿ ವಿಜಯ್ ಕೊನೆಯ ಚಿತ್ರವಾಗಿದೆ. ‘ಜನ ನಾಯಗನ್’ ಕಾಲಿವುಡ್ ಸ್ಟಾರ್‌ ನಟ ದಳಪತಿ ವಿಜಯ್ ರವರ 69ನೇ ಚಿತ್ರವಾಗಿದೆ. ನಟ ವಿಜಯ್ ಸಿನಿಮಾಗಿಂತಲೂ ರಾಜಕೀಯದ ಕಡೆ ಹೆಚ್ಚಾಗಿ ಗಮನ ಹರಿಸುತ್ತಿದ್ದು, ತಮ್ಮದೇ ಹೊಸ ಪಕ್ಷ ಸ್ಥಾಪಿಸಿಕೊಂಡು ರಾಜಕೀಯಕ್ಕೆ ಧುಮುಕಿದ್ದಾರೆ. ಹಾಗಾಗಿ ಚಿತ್ರರಂಗಕ್ಕೆ ಗುಡ್‌ ಬೈ ಹೇಳಿಲಿದ್ದಾರೆ. ಅವರು ನಟಿಸಿರುವ ಕೊನೆ ಸಿನಿಮಾ ‘ಜನ ನಾಯಗನ್’ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಈ ಚಿತ್ರವು 2026 ಜನವರಿ 09ಕ್ಕೆ , ಅಂದರೆ ವಿಶೇಷವಾಗಿ ತಮಿಳುನಾಡಿನಲ್ಲಿ ಪೊಂಗಲ್ ಸಂಭ್ರಮದ ದಿನ ಅದ್ದೂರಿಯಾಗಿ ಚಿತ್ರ ತೆರೆಯ ಮೇಲೆ ಬರಲಿದೆ.

ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ವೆಂಕಟ್. ಕೆ. ನಾರಾಯಣ ನಿರ್ಮಾಣದ ಈ ಹೈ ಬಜೆಟ್ “ಜನ ನಾಯಗನ್” ಚಿತ್ರಕ್ಕೆ ಅದ್ದೂರಿ ನಿರ್ಮಾಣವಾಗುತ್ತಿದ್ದು , ಈ ಚಿತ್ರದಲ್ಲಿ ಅಭಿಮಾನಿಗಳಿಗೆ ಇಷ್ಟ ಆಗುವಂತಹ ಎಲ್ಲ ಅಂಶಗಳು ಸೇರಿಕೊಂಡಿದೆಯಂತೆ. ದೊಡ್ಡ ಬಜೆಟ್ನಲ್ಲಿ ವೆಂಕಟ್. ಕೆ . ನಾರಾಯಣ ಯಾವುದೇ ಕೊರತೆ ಇಲ್ಲದಂತೆ ಅದ್ದೂರಿಯಾಗಿ ಚಿತ್ರ ಬರಲು ಬಂಡವಾಳ ಹೂಡಿದ್ದಾರೆ. ಈಗ ಈ “ಜನ ನಾಯಗನ್” ಚಿತ್ರದ ಮೊದಲ ನೋಟ ದಳಪತಿ ವಿಜಯ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿದೆ. ಕೆವಿಎನ್ ಸಂಸ್ಥೆ ನಿರ್ಮಾಣದ ಈ “ಜನ ನಾಯಗನ್” ಚಿತ್ರಕ್ಕೆ ಹೆಚ್ . ವಿನೋತ್ ನಿರ್ದೇಶನ , ಅನಿರುದ್ದ್ ರವಿಚಂದರ್ ಸಂಗೀತ, ಸತ್ಯನ್ ಸೂರ್ಯನ್ ಛಾಯಾಗ್ರಹಣ ,ಆನ್ಲ್ ಅರಸು ಸಾಹಸ , ಪ್ರದೀಪ್ ಇ ರಾಘವ ಸಂಕಲನ , ಶೇಖರ್ ವಿ. ಜಿ . ,ಸುಧನ್ ನೃತ್ಯ ನಿರ್ದೇಶನವಿರುವ ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಸೇರಿಕೊಂಡಿದೆ. ಈಗಾಗಲೇ ವಿತರಣಾ ಸಂಸ್ಥೆಯ ಮೂಲಕ ಭರ್ಜರಿ ಯಶಸ್ಸನ್ನ ಕಂಡಿರುವ ಕೆವಿಎನ್ ನಿರ್ಮಾಣ ಸಂಸ್ಥೆ , ಚಿತ್ರ ನಿರ್ಮಾಣದ ಕ್ಷೇತ್ರದಲ್ಲೂ ಭರ್ಜರಿ ಯಶಸ್ಸನ್ನ ಕಾಣುವ ಹಾದಿಯಲ್ಲಿ ಸಾಗುತ್ತಿದೆ.

error: Content is protected !!