Cini NewsSandalwoodTV Serial

ಫಿಲ್ಮ್​ಫೇರ್ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿ ಪಡೆದ (ಕೆರೆಬೇಟೆ) ಗೌರಿಶಂಕರ್.

Spread the love

ಬೆಳ್ಳಿ ಪರದೆಯ ತಾರೆಯರಿಗೆ ಹಾಗೂ ತಂತ್ರಜ್ಞರಿಗೆ ನೀಡುವಂತಹ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದಂತಹ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭವು ಕೇರಳದ ಕೊಚ್ಚಿಯಲ್ಲಿ ನಡೆಯಿತು. ಈ ಬಾರಿ 2024ನೇ ಸಾಲಿನ 70ನೇ ಫಿಲ್ಮ್‌ಫೇರ್ ಪ್ರಶಸ್ತಿ ಕಾರ್ಯಕ್ರಮ ಅದ್ದೂರಿಯಾಗಿ ಅಚ್ಚುಕಟ್ಟಾಗಿ ನೆರವೇರಿತು. ಅದರಲ್ಲೂ ವಿಶೇಷವಾಗಿ ಈ ಬಾರಿಯ ಫಿಲ್ಮ್​ಫೇರ್ ನಲ್ಲಿ ಕನ್ನಡಿಗರಿಗೆ ಸಾಕಷ್ಟು ವಿಭಾಗಗಳಲ್ಲಿ ಪ್ರಶಸ್ತಿಗಳು ಒಲಿದಿದೆ. ಇನ್ನು ಕೆರೆಬೇಟೆ
ಚಿತ್ರದ ನಾಯಕ ಗೌರಿಶಂಕರ್ ಅಭಿನಯಕ್ಕಾಗಿ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ ಈ ಚಿತ್ರದ ನಾಯಕಿ ಬಿಂದು ಶಿವರಾಮ್ ಕೂಡ ಅತ್ಯುತ್ತಮ ಚೊಚ್ಚಲ ಚಿತ್ರದ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇಡೀ ಚಿತ್ರತಂಡಕ್ಕೆ ಸೇರಿದಂತೆ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಹೆಮ್ಮೆಯ ತರುವಂತ ವಿಷಯವಾಗಿದೆ. ಈಗಾಗಲೇ ಈ ಕೆರೆಬೇಟೆ ಚಿತ್ರವು ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಹಲವಾರು ಚಿತ್ರೋತ್ಸವದಲ್ಲಿ ಭಾಗಿಯಾಗಿ ಬಹಳಷ್ಟು ಪ್ರಶಂಸೆಯನ್ನು ಪಡೆದುಕೊಂಡಿದೆ. ಈ ಬಾರಿ ದೊರಕಿರುವ ಈ ಫಿಲಂ ಫೇರ್ ಪ್ರಶಸ್ತಿ ಜನಮನ ಸಿನಿಮಾಸ್ ನ ನಿರ್ಮಾಪಕ ಗೌರಿಶಂಕರಿಗೆ ಮತ್ತಷ್ಟು ಉತ್ತಮ ಹಾಗೂ ಸದಭಿರುಚಿಯ ಚಿತ್ರವನ್ನು ನಿರ್ಮಾಣ ಮಾಡಲು ಉತ್ಸಾಹ ಬಂದಂತಾಗಿದೆ.


ಈ ಕೆರೆಬೇಟೆ ಸಿನಿಮಾ ಅಪ್ಪಟ ಹಳ್ಳಿ ಸೊಗಡಿನ ಚಿತ್ರ. ಜನಮನ ಸಿನಿಮಾ ಸಂಸ್ಥೆಯಲ್ಲಿ ಮಲೆನಾಡಿನ ಮೀನು ಬೇಟೆ ಸಂಸ್ಕೃತಿಯನ್ನು ಪರಿಚಯಿಸಿತ್ತು. ರಾಜ್‌ಗುರು ನಿರ್ದೇಶನದಲ್ಲಿ ಮೂಡಿಬಂದಿರುವ ಚೊಚ್ಚಲ ಸಿನಿಮಾದಲ್ಲಿ ನಾಯಕ ಗೌರಿಶಂಕರ್, ನಾಯಕಿ ಬಿಂದು ಗೌಡ , ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಹರಿಣಿ ಸೇರಿದಂತೆ ಅನೇಕ ದೊಡ್ಡ ಕಲಾವಿದರು ಬಣ್ಣ ಹಚ್ಚಿದರು. ಈ ಚಿತ್ರದಲ್ಲಿ ಅಭಿನಯಿಸಿರುವ ಪಾತ್ರಗಳು ಹಾಗೂ ತಾಂತ್ರಿಕ ವರ್ಗದವರ ಕೆಲಸ ಬಹಳ ಅಷ್ಟು ಕಟ್ಟಾಗಿ ಮೂಡಿಬಂದಿತ್ತು. ಒಂದಷ್ಟು ಪ್ರಾಮಾಣಿಕ ಪ್ರಯತ್ನಕ್ಕೆ ಉತ್ತಮ ಫಲ ಎನ್ನುವುದರ ಸಾಕ್ಷಿಯಾಗಿ ಸಿಕ್ಕಿರುವ ಈ ಫಿಲಂ ಫೇರ್ ಪ್ರಶಸ್ತಿಯೇ ಸಾಕ್ಷಿ ಎನ್ನುವಂತಿದೆ. ಈ ಬಾರಿಯ ಫಿಲ್ಮ್​ಫೇರ್ ನಲ್ಲಿ ಕನ್ನಡಿಗರಿಗೆ ಸಾಕಷ್ಟು ವಿಭಾಗಗಳಲ್ಲಿ ಪ್ರಶಸ್ತಿಗಳು ಬಂದಿವೆ.

Visited 1 times, 1 visit(s) today
error: Content is protected !!