Cini NewsSandalwood

ʼಎಕ್ಕʼ ಸಿನಿಮಾದ ಬ್ಯಾಂಗಲ್‌ ಬಂಗಾರಿ ಸಾಂಗ್‌… ರಿಲೀಸ್.

Spread the love

ಯುವ ರಾಜ್‌ಕುಮಾರ್-ಸಂಜನಾ ಆನಂದ್‌ ಬಿಂದಾಸ್‌ ಡ್ಯಾನ್ಸ್. ಯುವ‌  ನಾಯಕನಾಗಿ ನಟಿಸುತ್ತಿರುವ ಎಕ್ಕ ಸಿನಿಮಾದಿಂದ ಹೊಸ ಅಪ್‌ ಡೇಟ್‌ ಸಿಕ್ಕಿದೆ. ಟೈಟಲ್‌ ಟ್ರ್ಯಾಕ್‌ ಹಾಗೂ ಟೀಸರ್‌ ಮೂಲಕ ಕುತೂಹಲ ಹೆಚ್ಚಿಸಿರುವ ಚಿತ್ರತಂಡ ಇಂದು ಬ್ಯಾಂಗಲ್‌ ಬಂಗಾರಿ ಎಂಬ ಹೊಸ ಹಾಡನ್ನು ಅನಾವರಣ ಮಾಡಿದೆ. ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಬ್ಯಾಂಗಲ್‌ ಬಂಗಾರಿ ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ನಾಯಕ ಯುವರಾಜ್‌ ಕುಮಾರ್‌ ಹಾಗೂ ನಾಯಕಿ ಸಂಜನಾ ಆನಂದ್‌ ಈ ಗೀತೆಗೆ ಹೆಜ್ಜೆ ಹಾಕಿದ್ದಾರೆ.

ತನ್ನ ಇಷ್ಟದ ಹುಡ್ಗಿಯನ್ನು ಬ್ಯಾಂಗಲ್‌ ಬಂಗಾರಿ ಅಂತಾ ಕರೆಯುತ್ತಾ ನಾಯಕ ಕುಣಿದು ಕುಪ್ಪಳಿಸಿರುವ ಮೆಲೋಡಿ ಹಾಡು ಇದಾಗಿದೆ. ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಮುರಳಿ ಮಾಸ್ಟರ್ ಅವರ ನೃತ್ಯ ಸಂಯೋಜನೆ, ಚರಣ್ ರಾಜ್ ಅವರ ಸಂಗೀತ ನೀಡಿದ್ದು, ಅಂತೋನಿ ದಾಸನ್ ‘ಬ್ಯಾಂಗಲ್ ಬಂಗಾರಿ’ಗೆ ಕಂಠ ಕುಣಿಸಿದ್ದಾರೆ.

ʼಎಕ್ಕ’ ಸಿನಿಮಾವನ್ನು ಪಿಆರ್‌ಕೆ, ಜಯಣ್ಣ ಹಾಗೂ ಕೆಆರ್‌ಜಿ ಸ್ಟುಡಿಯೋ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಚಿತ್ರದಲ್ಲಿ ಯುವ ರಾಜ್‌ಕುಮಾರ್ ಸಖತ್ ರಫ್ ಆ್ಯಂಡ್ ಟಫ್ ರೋಲ್ ಮಾಡಿದ್ದಾರೆ. ರಕ್ತಸಿಕ್ತ ಜಗತ್ತಿನ ಹೊಸ ಅಧ್ಯಾಯ ಅಂತಲೂ ಫೀಲ್ ಆಗುತ್ತದೆ. ಆ ರೀತಿಯ ಪೋಸ್ಟರ್‌ಗಳು ಈಗಾಗಲೇ ರಿಲೀಸ್ ಆಗಿವೆ. ನಾಯಕ ಯುವರಾಜ್‌ ಕುಮಾರ್‌ಗೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಸಾಥ್‌ ಕೊಟ್ಟಿದ್ದಾರೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿದೆ. ಭಾರೀ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾವೀಗ ಜುಲೈ 18ಕ್ಕೆ ರಿಲೀಸ್‌ ಆಗಲಿದೆ.

Visited 1 times, 1 visit(s) today
error: Content is protected !!