Cini NewsSandalwood

“ದೇವರು ರುಜು ಮಾಡಿದನು” ಚಿತ್ರಕ್ಕೆ ಸಿಂಪಲ್ ಸುನಿ ಸಾರಥ್ಯ.

ಚಂದನವನದಲ್ಲಿ ಸಿನಿಮಾ ತಂಡಕ್ಕೂ ಹಾಗೂ ಪತ್ರಕರ್ತರಿಗೂ ಒಂದು ಅಚ್ಚುಕಟ್ಟಾದಂತ ಪತ್ರಿಕಾಗೋಷ್ಠಿಗೆ ಇದ್ದಂತ ಪ್ರಮುಖ ಸ್ಥಳವೇ ಗಾಂಧಿನಗರದ ಗ್ರೀನ್ ಹೌಸ್. ವರನಟ ಡಾ. ರಾಜಕುಮಾರ್ ರಿಂದ ಉದ್ಘಾಟನೆಗೊಂಡ ಗ್ರೀನ್ ಹೌಸ್ ಪಾರ್ಟಿ ಹಾಲ್ ನಲ್ಲಿ ನೂರಾರು ಪ್ರೆಸ್ ಮೀಟ್ ಗಳು ನಡೆದಿದೆ. ಆ ಹೋಟೆಲ್ ಮುಖ್ಯಸ್ಥರಲ್ಲಿ ಒಬ್ಬರಾದ ಗೋವಿಂದ್ ರಾಜ್ ಈಗ ಗ್ರೀನ್ ಹೌಸ್ ಮೂವೀಸ್ ಬ್ಯಾನರ್ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಇನ್ನೊಂದು ವಿಶೇಷ ಏನೆಂದರೆ ಈ ಚಿತ್ರದ ಮೂಲಕ ತಮ್ಮ ಪುತ್ರ.ವಿರಾಜ್ ನನ್ನ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ಇನ್ನು ಈ ಒಂದು ಚಿತ್ರವನ್ನು ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಕೈಗೆತ್ತಿಕೊಂಡಿದ್ದಾರೆ. ‘ದೇವರು ರುಜು ಮಾಡಿದನು’ ಎಂಬುದು ಕುವೆಂಪುರವರ ಕವಿತೆ ಸಾಲಾಗಿದ್ದು , ಅದನ್ನೇ ಚಿತ್ರದ ಟೈಟಲ್ ಆಗಿ ಇಟ್ಟಿದ್ದಾರೆ. ಇನ್ನೂ ಚಿತ್ರದ ನಾಯಕ ವಿರಾಜ್ ರಂಗಭೂಮಿ ಪ್ರತಿಭೆಯಾಗಿದ್ದು , ಚಿತ್ರಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಉಳಿದಂತೆ ಚಿತ್ರದ ನಾಯಕಿ ಮತ್ತು ಇನ್ನಿತರ ಕಲಾವಿದರ ಹುಡುಕಾಟದಲಿದ್ದು, ಶೂಟಿಂಗ್ ಅನ್ನು ಸೆಪ್ಟೆಂಬರ್ ನಲ್ಲಿ ಶುರು ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಮುಂದಿನ ಅಪ್ಡೇಟ್ ಗಳನ್ನು ಚಿತ್ರತಂಡ ಕೆಲವೇ ದಿನಗಳಲ್ಲಿ ಹಂಚಿಕೊಳ್ಳಲಿದ್ದಾರೆ. ಮತ್ತೊಂದು ಸಿನಿಮಾ ನೈಂಟಿನ ಕುಟುಂಬವು ಚಿತ್ರರಂಗವನ್ನು ಪ್ರವೇಶ ಮಾಡುತ್ತಿದೆ

error: Content is protected !!