ಡಿಸೆಂಬರ್ 25 ರಿಂದ “45”ರ ಅಬ್ಬರ… ಶಿವಣ್ಣ , ಉಪ್ಪಿ , ರಾಜ್ ಬಿ ಶೆಟ್ಟಿ ಸಮಾಗಮ.
ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಚಿತ್ರ “45”. ಈಗಾಗಲೇ ತನ್ನ ಟ್ರೈಲರ್ ಹಾಡಿನ ಮೂಲಕ ಬಹಳಷ್ಟು ಸದ್ದನ್ನ ಮಾಡಿರುವ ಈ ಚಿತ್ರ ರಾಜದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲು ಸನ್ನದ್ಧವಾಗಿದೆ. ಚಿತ್ರ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯನ್ನ ಆಯೋಜನೆ ಮಾಡಿದ್ದ ನಿರ್ಮಾಪಕ ಎಂ. ರಮೇಶ್ ರೆಡ್ಡಿ ಮಾತನಾಡುತ್ತಾ ನಮ್ಮ ಚಿತ್ರ ಅಂದುಕೊಂಡಂತೆ ಬಹಳ ಸೊಗಸಾಗಿ ಬಂದಿದೆ. ನಾನು ಚಿತ್ರವನ್ನ ನೋಡಿದ್ದೇನೆ. ಅದರಲ್ಲೂ ವಿಶೇಷವಾಗಿ ನಾನು ಹೆಚ್ಚಾಗಿ ಶಿವಣ್ಣನ ಬಗ್ಗೆ ಮಾತನಾಡಬೇಕಿದೆ ಯಾಕೆಂದರೆ ನಮ್ಮ 45 ಚಿತ್ರದಲ್ಲಿ ಶಿವಣ್ಣ ರಾಜಕುಮಾರ ಆಗಿದ್ದಾರೆ. ರಾಜಕುಮಾರ್ ಅವರೇ ಎದ್ದುಬಂದಂತೆ ಇಲ್ಲಿ ಅಭಿನಯಿಸಿದ್ದಾರೆ. ಅವರ ಮಾತು, ಅಭಿನಯ ಯಾವುದೋ ಲೋಕಕ್ಕೆ ಬಂದ ಹಾಗಿದೆ ಎಂದು ನೇರವಾಗಿ ಸಂತಸವನ್ನ ಹಂಚಿಕೊಳ್ಳುವುದರ ಜೊತೆಗೆ
ನಮ್ಮ ರಿಯಲ್ ಸ್ಟಾರ್ ಉಪೇಂದ್ರರವರು ಜೀಪನ್ನ ಎತ್ತಿರುವ ರೀತಿಯೇ ಅದ್ಬುತ ,
ಅದೇ ರೀತಿ ನಮ್ಮ ಚಿತ್ರದ ಮತ್ತೊಬ್ಬ ಹೀರೋ ರಾಜ್ ಬಿ ಶೆಟ್ಟಿ ಇಡೀ ಚಿತ್ರದಿದ್ದಕ್ಕೂ ಓಡಿದ್ದಾರೆ. ಒಂದೊಂದು ಸನ್ನಿವೇಶವು ಅದ್ಭುತವಾಗಿ ಬಂದಿದೆ. ನನಗೆ ಹೆಚ್ಚು ಮಾತನಾಡುವುದಕ್ಕೆ ಆಗ್ತಿಲ್ಲ. ಇಡೀ ಚಿತ್ರದ ಮತ್ತು ತನ್ನ ಶಕ್ತಿ ಶಿವಣ್ಣ ಅಗಿದ್ದಾರೆ. ಹಾಗೆ ಗೀತಕ್ಕ ಮತ್ತು ಶಿವಣ್ಣನ ಪುತ್ರಿಯ ಸಹಕಾರವನ್ನು ಕೂಡ ನೆನೆಸಿಕೊಂಡರು. ಇನ್ನು ನಿರ್ದೇಶಕ ಅರ್ಜುನ್ ಜನ್ಯ ಕೂಡ ಬಹಳ ಶ್ರಮಪಟ್ಟಿದ್ದಾರೆ.

ಈ ನಮ್ಮ 45 ಸಿನಿಮಾ ಮೂರು ವರ್ಷದ ಶ್ರಮ. ಅರ್ಜುನ್ ಜನ್ಯಾ ಇಂದು ಚಿತ್ರದ ಒಂದಷ್ಟು ಟೆಕ್ನಿಕಲ್ ಕೆಲಸಕ್ಕಾಗಿ ಚೆನ್ನೆ`ಗೆ ಹೋಗಬೇಕಾಯಿತು, ಅವರ ಕೆಲಸವನ್ನು ತಾವೇ ಖುದ್ದಾಗಿ ನಿಂತು ಮಾಡುತ್ತಾರೆ. ಅವರದ್ದು ಅದ್ಘುತ ಕೆಲಸ , ಚಿತ್ರದ ಕೊನೆಯ ಇಪ್ಪತ್ತೈದು ನಿಮಿಷ ದಲ್ಲಿ ತಾನೆಂಥ ನಿರ್ದೇಶಕ ಎಂಬುದನ್ನು ಜನ್ಯಾ ಅನಾವರಣ ಮಾಡಿದ್ದಾರೆ. ಇನ್ನು ಉಪೇಂದ್ರ ಅವರದ್ದು ಪರಿಣಾಮಕಾರಿ ಪಾತ್ರ. ರಾಜ್ ಬಿ. ಶೆಟ್ಟಿ ಎಷ್ಟು ಪ್ರತಿಭಾವಂತ ಎಂಬುದು ಈ ಚಿತ್ರದಲ್ಲಿ ಗೊತ್ತಾಗುತ್ತೆ. ಕ್ಯಾಮರಾಮನ್ ಸತ್ಯ ಹೆಗಡೆ ಪರಿಣಾಮಕಾರಿಯಾಗಿ ಬರವಲ್ಲಿ ಶಕ್ತಿಗೂ ಮೀರಿ ಕೆಲಸ ಮಾಡಿದ್ದಾರೆ. ಇನ್ನು ನಮ್ಮ ಪ್ರಕಾಶ್ ಸಂಭಾಷಣೆ, ಸುರೇಶ್, ಮಂಜು,ಉಯಶ್ ಗೌಡ, ಮುರಳಿ, ಉಮೇಶ್, ಪುಟ್ಟರಾಜು, ಚೇತನ್, ಜಾನಿ ಮಾಸ್ಟರ್, ಸಿಜಿ ಮಾಡಿದ ರವಿಶಂಕರ್ ಹೀಗೆ ಚಿತ್ರಕ್ಕೆ ಕೆಲಸ ಮಾಡಿದವರ ಶ್ರಮವನ್ನ ಕೂಡ ಹೇಳುತ್ತಾ ಹೋದರು. ಈ ಚಿತ್ರದ ಬಿಡುಗಡೆ, ವಿದೇಶಿ ಮಾರುಕಟ್ಟೆ, ಒಟಿಟಿ ಹಕ್ಕು ಜೀ ಸಂಸ್ಥೆ ಇಷ್ಟ ಪಟ್ಟು ತೆಗೆದುಕೊಂಡಿದೆ. ಮೈತ್ರಿ- ತೆಲುಗಿನಲ್ಲಿ , ಎಜಿಎಸ್ ತಮಿಳಿನಲ್ಲಿ ವಿತರಣೆ ಮಾಡುತ್ತಿದೆ. ಸಂಗೀತ ನಿರ್ದೇಶಕ, ತನ್ನ ಪ್ರಥಮ ಪ್ರಯತ್ನದಲ್ಲಿ ಈ ಮಟ್ಟದ ಚಿತ್ರ ಮಾಡಲು ಹೇಗೆ ಸಾದ್ಯ ಎಂದು ಇವರೆಲ್ಲ ಅಚ್ಚರಿ ಪಟ್ಟರು ಎಂದು ರಮೇಶ್ ರೆಡ್ಡಿ ಹೇಳಿಕೊಂಡರು.

ಇನ್ನು ಈ ಚಿತ್ರದ ಕೇಂದ್ರಬಿಂದು ಸೆಂಚುರಿ ಸ್ಟಾರ್ ಶಿವಣ್ಣ ಮಾತನಾಡುತ್ತಾ ಕನ್ನಡ ಚಿತ್ರರಂಗಕ್ಕೆ ರಮೇಶ್ ರೆಡ್ಡಿ ಅಂತಹ ನಿರ್ಮಾಪಕರು ಬಹಳ ಅಗತ್ಯವಿದೆ. ಹಾಗೆಯೇ ಚಿತ್ರದ ಕ್ವಾಲಿಟಿ, ಅದರ ಮೇಕಿಂಗ್, ಜನ್ಯಾ ಅವರ ಕನಸು ಇಡೀ ಚಿತ್ರದಲ್ಲಿ ಆವರಿಸಿಕೊಂಡಿದೆ. ಮುಖ್ಯವಾಗಿ ರಮೇಶ್ ರೆಡ್ಡಿ ಅಪ್ಪಾಜಿ ಹೇಳುವಂತೆ ಅವರು ನಿಜವಾದ ಅನ್ನದಾತ. ಮೂರು ವರ್ಷ ಅನ್ನ ಹಾಕಿದ್ದಾರೆ. ಒಟ್ಟಿನಲ್ಲಿ ಸಿನಿಮಾವನ್ನು ಓಡಿಸಬಾರದು, ಅದು ಓಡಬೇಕು , ಈ ನಿಟ್ಟಿನಲ್ಲಿ 45 ಪಕ್ಕಾ ಮಲ್ಟೀ ಸ್ಟಾರರ್ ಚಿತ್ರ ಕನ್ನಡದ ದೊಡ್ಡ ಆಶಾಭಾವನೆ ಇಲ್ಲಿದೆ. ಖಂಡಿತ ಈ ಚಿತ್ರ ಬೇರೆದೇ ಲೆವೆಲ್ ನಲ್ಲಿ ಹೋಗಿ ದೊಡ್ಡ ಮಟ್ಟದ ಯಶಸ್ಸನ್ನ ಕಾಣುತ್ತದೆ ಎಂದರು. ನಟ ರಿಯಲ್ ಸ್ಟಾರ್ ಉಪೇಂದ್ರ ಮಾತನಾಡುತ್ತಾ ಈ ರೀತಿಯ ಆಲೋಚನೆ ಮಾಡಿರುವ ನಿರ್ದೇಶಕ ಅರ್ಜುನ್ ಜನ್ಯರ ಸಾಹಸವನ್ನು ಮೆಚ್ಚಲೇಬೇಕು , ಅದಕ್ಕೆ ಪೂರಕವಾಗಿ ನಿರ್ಮಾಪಕ ರಮೇಶ್ ರೆಡ್ಡಿ ರವರು ಕೂಡ ಅಷ್ಟೇ ಧೈರ್ಯ ಮಾಡಿ ಬಂಡವಾಳ ಹಾಕಿದ್ದಾರೆ ಅಂದುಕೊಂಡಂತೆ ಚಿತ್ರ ಅದ್ಭುತವಾಗಿ ಬಂದಿದೆ. ನಿರ್ಮಾಪಕರು ನಾನು ಜೀಪ್ ಎತ್ತಿದ್ದನ್ನು ಅದ್ಭುತ ಅಂದಿದ್ದಾರೆ. ಆದರೆ ಅವರು ಇಡೀ ಚಿತ್ರವನ್ನೇ ಎತ್ತಿದ್ದಾರೆ ಅವರು ಇನ್ನೆಷ್ಟು ಗ್ರೇಟ್ ಇರಬೇಕು ಎಂದು ನಿರ್ಮಾಪಕ ರಮೇಶ್ ರೆಡ್ಡಿಯನ್ನು ಹೊಗಳಿದರು. ಈ ಚಿತ್ರಕ್ಕೆ ಏನು ಬೇಕೋ ಅದನ್ನೆಲ್ಲ ಅಚ್ಚುಕಟ್ಟಾಗಿ ಮಾಡಿಸಿಕೊಂಡಿದೆ. ಶಿವಣ್ಣನ ಆಕ್ಟಿಂಗ್ ಹಾಗೂ ಕ್ಲೈಮ್ಯಾಕ್ಸ್ 25 ನಿಮಿಷ ಬರುವ ಸನ್ನಿವೇಶ ಅದ್ಬುತ , ಅದೇ ರೀತಿ ರಾಜ್ ಬಿ ಶೆಟ್ಟಿ ಕೂಡ ಅಷ್ಟೇ ಸೊಗಸಾಗಿ ಅಭಿನಯಿಸಿದ್ದಾರೆ. ಈ ರೀತಿಯ ವಿಭಿನ್ನ ಸಿನಿಮಾಗಳನ್ನ ನೋಡಿ ಪ್ರೇಕ್ಷಕರು ಗೆಲ್ಲಿಸಬೇಕು ಎಂದು ಕೇಳಿಕೊಂಡರು.

ಮತ್ತೊಬ್ಬ ನಟ ರಾಜ್ ಬಿ ಶೆಟ್ಟಿ ಮಾತನಾಡುತ್ತಾ ನಾನು ಈ ಚಿತ್ರದಲ್ಲಿ ಭಾಗಿಯಾಗಿರುವುದೇ ಬಹಳ ಸಂತೋಷವಾಗಿದೆ. ಶಿವಣ್ಣ ಹಾಗೂ ಉಪೇಂದ್ರ ಸರ್ ಜೊತೆ ಅಭಿನಯಿಸಿರುವುದು ಬಹಳ ಸಂತೋಷವಾಗಿದೆ. ನಾವು ಹೆಚ್ಚು ಮಾತನಾಡುವುದಕ್ಕಿಂತ ಸಿನಿಮಾ ಹೆಚ್ಚು ಮಾತನಾಡಬೇಕು ಎನ್ನುವುದು ನನ್ನ ಆಸೆ, ಇಡೀ ಚಿತ್ರದಲ್ಲಿ
ಶಿವಣ್ಣ ಹೈಲೈಟ್ ಆಗಿದ್ದಾರೆ. ಅವರ ಬಗ್ಗೆ ಈ ಸಿನಿಮಾ ಹೆಚ್ಚು ಮಾತನಾಡುತ್ತದೆ. ಇನ್ನು ರಮೇಶ್ ರೆಡ್ಡಿ ಈ ಚಿತ್ರಕ್ಕೆ ಮೂರರಷ್ಟು ಹೆಚ್ಚಿನ ಬಂಡವಾಳ ಹಾಕಿದ್ದಾರೆ, ಅದು ನೂರರಷ್ಟು ಬರಲಿ. ನಿರ್ಮಾಪಕರ ಕನಸು ದೊಡ್ಡದು, ಆ ಕನಸು ಮೀರಿ ಈ ಚಿತ್ರವನ್ನು ಮಾಡಿದ್ದಾರೆ. ನನ್ನದು ಈ ಚಿತ್ರದಲ್ಲಿ ಓಡುವ ಪಾತ್ರ , ಅದರ ವಿಶೇಷತೆ ಚಿತ್ರದಲ್ಲಿ ಗೊತ್ತಾಗಲಿದೆ ಎನ್ನುತ್ತಾ ಇದೇ ಸಮಯದಲ್ಲಿ ನಟ ಪ್ರಮೋದ್ ಶೆಟ್ಟಿ ತಂಡದಲ್ಲಿ ಯಾವುದೇ ಬಿನ್ನಾಬಿಪ್ರಯ ಇಲ್ಲ, ಎಂದು ಸ್ಪಷ್ಟ ಪಡಿಸಿದರು. ಚಿತ್ರದ ವಿತರಕ ಸುಪ್ರಿತ್ ಮಾತನಾಡಿ 170ಕ್ಕೂ ಮೇಲೆ ಚಿತ್ರ ಬಿಡುಗಡೆ ಕಾಣಲಿದೆ. ಅಭಿಮಾನಿಗಳಿಗೋಸ್ಕರ ಫ್ಯಾನ್ ಶೋ ನಡೆಯಲಿದೆ. ಚಿತ್ರ ಖಂಡಿತ ಎಲ್ಲರೂ ಇಷ್ಟಪಡುತ್ತಾರೆ. ನಿಮ್ಮೆಲ್ಲರ ಪ್ರೀತಿ ಸಹಕಾರ ಈ ಚಿತ್ರತಂಡಕ್ಕೆ ಇರಲಿ ಎಂದು ಕೇಳಿಕೊಂಡರು.