ಕ್ಲಾರಿಟಿ ಕೊಡುವ ಅವಶ್ಯಕತೆ ಇಲ್ಲ…ಸಿನಿಮಾನೇ ನನ್ನ ಜೀವನ.
ಬಡವರ ಮಕ್ಕಳು ಬೆಳೆಯೋದಕ್ಕೆ ಅಡ್ಡಿ ಆಗ್ತಿದೀಯಾ… ಅಥವಾ ಮಾಡ್ತಿದ್ದಾರಾ.. ಎಂಬ ಗೊಂದಲ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಮನುಷ್ಯರ ಬದುಕಲ್ಲಿ ಅವರ ಊಟ , ಉಪಚಾರ , ಉಡುಗೆ , ತೊಡುಗೆ ಎಲ್ಲವೂ ಅವರವರ ಸ್ವ ಇಚ್ಛೆಗೆ ಬಿಟ್ಟಿದ್ದು , ಅದಕ್ಕೆ ಸ್ವತಂತ್ರ ಇರಲೇಬೇಕು. ಇತ್ತೀಚಿಗೆ ಸುದ್ದಿ ಆದಂತ ಡಾಲಿ ಧನಂಜಯ ಬಿರಿಯಾನಿ ತಿಂದ ವಿಚಾರಕ್ಕೆ ಜಾತಿ , ಸಮುದಾಯದ ಗದ್ದಲ ಶುರುವಾಗಿದೆ. ಈ ಸುದ್ದಿ ಯಾರು…ಏಕೆ… ಮಾಡಿದರು ಅನ್ನೋದು ಒಂದೆಡೆಯಾದರೆ , ನಟ ಧನಂಜಯ್ ಪ್ರಕಾರ ಆಹಾರ ನಮ್ಮ ಇಷ್ಟದ ಪದ್ಧತಿ , ನಾನು ಈ ಹಿಂದೆಯೂ ಕೂಡ ಟಗರು ಚಿತ್ರ ಚಿತ್ರೀಕರಣದಲ್ಲಿ ಸೇರಿದಂತೆ ಹಲವು ನನ್ನ ಗೆಳೆಯರ ಬಿರಿಯಾನಿ ಹೋಟೆಲ್ಗಳನ್ನು ಇನಾಗ್ರೇಶನ್ ಮಾಡಿದ್ದೇನೆ. ಹಾಗೆಯೇ ಅಲ್ಲಿ ಬಿರಿಯಾನಿ ಟೆಸ್ಟ್ ಕೂಡ ಮಾಡಿದ್ದೆ , ಹಾಗೆಲ್ಲ ಇಲ್ಲದ ಸುದ್ದಿ ಈಗ ಯಾಕೆ ಈ ಮಟ್ಟಕ್ಕೆ ಬಂದಿದೆ ಗೊತ್ತಿಲ್ಲ , ಆದರೆ ನೀವು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟೆ , ಈ ವಿಚಾರಕ್ಕೆ ನಾನು ಉತ್ತರ ನೀಡುವ ಅವಶ್ಯಕತೆ ಇಲ್ಲ ಅನಿಸುತ್ತದೆ ಎಂದರು. ಹೌದು ಊಟ , ಬಟ್ಟೆಯ ವಿಚಾರಕ್ಕೆ ಸ್ವತಂತ್ರ ಇರಬೇಕು , ಜಾತಿ , ದ್ವೇಷ ಬೆಳೆಸಿಕೊಳ್ಳುವ ಅಗತ್ಯ ಬೇಕಿಲ್ಲ ಅನಿಸುತ್ತದೆ.

ಹೌದು , ಸಿನಿಮಾ ರಂಗದಲ್ಲಿ ಬೆಳೆಯಬೇಕು , ತನ್ನ ಕನಸಿನ ಆಸೆಯನ್ನು ಈಡೇರಿಸಿಕೊಳ್ಳಬೇಕೆಂಬ ಬಯಕೆ ಹುಟ್ಟೋದು ಸಹಜ. ಅದೇ ರೀತಿ ಹಾಸನ ಜಿಲ್ಲೆಯ ಕಲೆನಹಳ್ಳಿ ಗ್ರಾಮದ ಪ್ರತಿಭೆ ಸಿನಿಮಾ ರಂಗಕ್ಕೆ ಬಂದವರೇ ಧನಂಜಯ ಅಲಿಯಾಸ್ ಡಾಲಿ ಧನಂಜಯ್. ಈ ಬಣ್ಣದ ಬದುಕು ಯಾವಾಗ , ಯಾರನ್ನ , ಹೇಗೆ ಕರೆದುಕೊಂಡು ಹೋಗುತ್ತೆ ಅನ್ನೋದನ್ನ ಊಹಿಸಲು ಅಸಾಧ್ಯ. 2013ರಲ್ಲಿ ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದ ಮೂಲಕ ಸಿನಿಮಾಗೆ ಎಂಟ್ರಿ ಪಡೆದ ಧನಂಜಯ ಗೆ ಅದೃಷ್ಟದ ಬಾಗಿಲು ತೆರೆಯಿತು. ತದನಂತರ ರಾಟೆ, ಬಾಕ್ಸರ್, ಜೆಸಿ , ಬದ್ಮಾಶ್, ಅಲ್ಲಮ , ಎರಡನೇ ಸಲ , ಹ್ಯಾಪಿ ನ್ಯೂ ಇಯರ್ ಚಿತ್ರಗಳ ಮೂಲಕ ಭದ್ರಾ ನೆಲೆಯನ್ನ ಕಂಡರು. ಶಿವಣ್ಣ ಅಭಿನಯದ ಟಗರು ಚಿತ್ರದ ಮೂಲಕ ಡಾಲಿ ಪಾತ್ರದಲ್ಲಿ ಮಿಂಚಿ , ಜನರ ಮನಸ್ಸಿನಲ್ಲಿ ಡಾಲಿ ಧನಂಜಯ ಎಂದೇ ಗುರುತಿಸಿಕೊಂಡರು. ಮುಂದೆ ನಟ ರಾಕ್ಷಸನಾಗಿ ಬೆಳೆಯುತ್ತಾ ಯಜಮಾನ , ಪಾಪ್ಕಾರ್ನ್ ಮಂಕಿ ಟೈಗರ್ , ಪೊಗರು , ಯುವರತ್ನ , ಸಲಗ , ರತ್ನನ್ ಪ್ರಪಂಚ , ಬಡವ ರಾಸ್ಕಲ್ , ಬೈರಾಗಿ , ಮಾನ್ಸೂನ್ ರಾಗ , ತೋತಾಪುರಿ , ಗುರುದೇವ್ ಹೊಯ್ಸಳ ಚಿತ್ರಗಳಲ್ಲಿ ಮಿಂಚಿದ ಧನಂಜಯ್ ನಂತರ ತೆಲುಗಿನಲ್ಲಿ ಪುಷ್ಪ , ರುದ್ರ , ಜೀಬ್ರಾ ಹಾಗೂ ತಮಿಳುನಲ್ಲಿ ಪಾಯುಮ್ ಒಲಿ ಏನಕ್ಕೂ , ಮಾಝೈ ಪಿಡಿಕ್ಕತಾ ಮಣಿಥನ್ ಸೇರಿದಂತೆ ಪರಭಾಷೆ ಚಿತ್ರಗಳನ್ನು ಕೂಡ ಮಿಂಚಿದರು. ಸಿನಿಮಾಗೆ ಭಾಷೆಯ ಕಡಿವಾಣ ಬೇಕಿಲ್ಲ , ಈ ಬಣ್ಣದ ಬದುಕಿಗೆ ಜಾತಿ , ಭೇದ ಇಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಸಾಗಿ ಚಿತ್ರರಂಗ ಬಳಸುವುದರ ಜೊತೆಗೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದು ಅಷ್ಟೇ ಮುಖ್ಯವಾಗಿದೆ.

ಕೆರೆಯ ನೀರನ್ನು… ಕೆರೆಗೆ ಚೆಲ್ಲಿ… ಎನ್ನುವಂತೆ ನಟ ಧನಂಜಯ ಸಿನಿಮಾಗಳಲ್ಲಿ ಅಭಿನಯಿಸಿ ಗಳಿಸಿದ ಹಣವನ್ನ ಒಗ್ಗೂಡಿಸಿ ಮತ್ತೆ ಸಿನಿಮಾ ನಿರ್ಮಾಣಕ್ಕೆ ಹಾಕುವ ಮೂಲಕ ಟಗರು ಪಲ್ಯ , ವಿದ್ಯಾಪತಿ , ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸುವುದರ ಜೊತೆಗೆ ತನ್ನೊಟ್ಟಿಗೆ ಇರುವಂತ ಗೆಳೆಯರು , ಆಸಕ್ತಿ ಇರುವ ಪ್ರತಿಭೆಗಳಿಗೆ ಅವಕಾಶ ನೀಡುವ ಹಾದಿಯಲ್ಲಿ ಸಾಗಿರುವುದು ಮತ್ತೊಂದು ಉತ್ತಮ ಬೆಳವಣಿಗೆಗೆ ನಿದರ್ಶನವಾಗಿದೆ. ಇಂತಹ ಪ್ರಯತ್ನದಲ್ಲಿ ಇಂತಹ ಪ್ರಯತ್ನಗಳು ನಿರಂತರವಾಗಿ ಚಿತ್ರರಂಗದಲ್ಲಿ ನಡೆದರೆ ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಉತ್ತಮ ಭವಿಷ್ಯವನ್ನು ಖಂಡಿತ ಕಾಣಬಹುದು. ಈಗ ವೈವಾಹಿಕ ಜೀವನದಲ್ಲೂ ನೆಮ್ಮದಿಯನ್ನು ಕಂಡಿರುವ ಧನಂಜಯ್ , ತನ್ನ ಗೆಳೆಯರಿಗೂ ಬೇಗ ಮದುವೆಯಾಗಿ ಎಂದು ಸಲಹೆ ನೀಡುವುದರ ಜೊತೆಗೆ ಈಗ ತಂದೆ ಆಗುವ ಖುಷಿಯಲ್ಲಿ ಇದ್ದಾರೆ.

ಸಿನಿಮಾನೇ ಜೀವನ… ಸಿನೆಮಾನೇ ಬದುಕು… ಮಾಡಿಕೊಂಡಿರುವ ನಟ ಡಾಲಿ ಧನಂಜಯ ಈಗ “JC” “ಜುಡಿಶಿಯಲ್ ಕಸ್ಟಡಿ” ಎಂಬ ಜೈಲಿನ ಒಳಗೆ ನಡೆಯುವ ಒಂದಷ್ಟು ನೈಜ ಘಟನೆಗಳ ಆಧಾರವಾಗಿಟ್ಟುಕೊಂಡು ನಿರ್ಮಾಣ ಮಾಡಿರುವಂತಹ ಚಿತ್ರ ಇದಾಗಿದೆ. ಈ ಚಿತ್ರದಲ್ಲೂ ಕೂಡ ತನ್ನೊಟ್ಟಿಗೆ ಕೆಲಸ ಮಾಡಿದಂತಹ ಗೆಳೆಯರಿಗೆ ಅವಕಾಶ ಮಾಡಿಕೊಟ್ಟಿದ್ದು , ಈ ಚಿತ್ರವು ಇದೇ 06ರಂದು ರಾಜ್ಯದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಸಕ್ಸಸ್ ಗೆ ಯಾವುದೇ ಸೂತ್ರವಿಲ್ಲ. ಮಾಡುವ ಕೆಲಸದಲ್ಲಿ ಶ್ರದ್ದೆ , ಶ್ರಮ , ಅದೃಷ್ಟವಿದರೆ ಗೆಲುವು ಹತ್ತಿರದಲ್ಲಿ ಇರುತ್ತದೆ. ತನ್ನ ಡಾಲಿ ಪಿಚ್ಚರ್ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವ “ಜೆಸಿ” ಚಿತ್ರ ಬಹಳಷ್ಟು ನಿರೀಕ್ಷೇಯನ್ನ ಹುಟ್ಟುಹಾಕಿದ್ದು , ಸೆಂಚುರಿ ಸ್ಟಾರ್ ಶಿವಣ್ಣ , ನಿರ್ದೇಶಕ ಜೋಗಿ ಪ್ರೇಮ್ ಕೂಡ ಈ ಚಿತ್ರತಂಡಕ್ಕೆ ಸಾಥ್ ನೀಡಿದೆ. ನಟ ಡಾಲಿ ಧನಂಜಯ ಸಿನಿ ಪ್ರಯಾಣದಲ್ಲಿ ಅರ್ಥಪೂರ್ಣ , ಸದಭಿರುಚಿ ಚಿತ್ರಗಳು ನಿರಂತರವಾಗಿ ಬರುವಂತಾಗಲಿ ಎಂಬುವುದೇ ನಮ್ಮ ಆಶಯ.