Cini NewsSandalwood

TPL ಸೀಸನ್ 4ರ ಕಪ್ ಗೆ ಭರ್ಜರಿ ತಯಾರಿಯಲ್ಲಿ ಕ್ರಿಕೆಟ್ ನಕ್ಷತ್ರ ತಂಡ

Spread the love

ಈಗ ಎಲ್ಲೆಲ್ಲೋ ಕ್ರಿಕೆಟ್ ಹಬ್ಬ ಜೋರಾಗಿ ನಡೆಯುತ್ತಿದೆ. ಸದ್ಯ ಭಾರತ ತಂಡದ ಐಸಿಸಿ ಚಾಂಪಿಯನ್ ಅಬ್ಬರ ಜೋರಾಗಿದ್ದು , ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಡೋಸರ್ಸ್ ಕಪ್ಪು ಗೆಲ್ಲುವ ನಿರೀಕ್ಷೆ ಇದೆ. ಇದರ ನಡುವೆ ಟೆಲಿವಿಷನ್ ಪ್ರೀಮಿಯರ್ ಲೀಗ್ ಕೂಡ ತನ್ನ ಆರ್ಭಟವನ್ನು ಶುರು ಮಾಡಿದೆ. ಚಂದನವನದ ಕಲಾವಿದರು , ತಂತ್ರಜ್ಞರು ಹಾಗೂ ಮಾಧ್ಯಮದವರ ಸೇರಿದಂತೆ ಟೀಮ್ ಓನರ್ ಗಳ ಒಗ್ಗಟ್ಟಿನೊಂದಿಗೆ N1 ಕ್ರಿಕೆಟ್ ಅಕಾಡೆಮಿಯ ಸಂಸ್ಥಾಪಕ ಬಿ.ಆರ್. ಸುನಿಲ್ ಕುಮಾರ್ ಕಳೆದ ಮೂರು ವರ್ಷಗಳಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ ಆರಂಭಿಸಿ ಯಶಸ್ವಿಯಾಗಿ 3 ಸೀಸನ್ ಮುಕ್ತಾಯವಾಗಿಸಿ, ಇದೀಗ ಟಿಪಿಎಲ್ 4ನೇ ಸೀಸನ್ ಗೆ ಚಾಲನೆ ನೀಡಿದ್ದು , ಭರ್ಜರಿಯಾಗಿ ತಂಡಗಳು ತರಬೇತಿಯನ್ನ ಆರಂಭಿಸಿದೆ.

ಈ ಬಾರಿಯ TPL ಬಹಳಷ್ಟು ತಂಡಗಳು ನಿರೀಕ್ಷೆಯನ್ನು ಹುಟ್ಟು ಹಾಕಿದ್ದು, ಅದರಲ್ಲೂ ಕ್ರಿಕೆಟ್ ನಕ್ಷತ್ರ ತಂಡ ಈ ಬಾರಿಯ ಕಪ್ ಗೆಲ್ಲುವ ತಂಡಗಳಲ್ಲಿ ಪ್ರಮುಖ ಸ್ಥಾನದಲ್ಲಿದೆ. ಕ್ರೀಡೆಗಳ ಮೇಲೆ ಪ್ರೀತಿ ಇದ್ದವರಿಗೆ ಮಾತ್ರ ಗೆಲುವು ಸಾಧ್ಯ ಎನ್ನುವ ಹಾಗೆ ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಂತ ನಕ್ಷತ್ರ ಮಂಜುನಾಥ್ ಆಲ್ರೌಂಡರ್ ಆಟಗಾರರಾಗಿ ಗ್ರೌಂಡ್ ನಲ್ಲಿ ಅಬ್ಬರಿಸುತ್ತಿದ್ದಾರೆ.

ಈಗಾಗಲೇ ಕ್ರಿಕೆಟ್ ನಕ್ಷತ್ರ ತಂಡದ ಮೂಲಕ ದುಬೈನಲ್ಲಿ ನಡೆದ ಸೀಸನ್ 06ರ ರಾಜ್ ಕಪ್ ವಿನ್ನರ್ ಆಗಿರುವ ನಕ್ಷತ್ರ ಮಂಜುನಾಥ್ ತಂಡ ಈ ಬಾರಿ ಉತ್ತಮ ಆಟಗಾರರನ್ನು  ಬಿಡ್ಡಿಂಗ್ ನಲ್ಲಿ ಆಯ್ಕೆ ಮಾಡಿಕೊಂಡು ಟಿಪಿಎಲ್ ಸೀಸನ್ 4ರ ಕಪ್ ಗೆಲ್ಲುವ ಉತ್ಸಾಹದಲ್ಲಿ ತರಬೇತಿಯನ್ನು ಆರಂಭಿಸಿದ್ದಾರೆ. ಮೂಲತ ಉದ್ಯಮಿಯಾಗಿರುವ ಮಂಜುನಾಥ್ ನಕ್ಷತ್ರ ಕ್ರಿಯೇಷನ್ಸ್ ಅಡಿಯಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯನ್ನು ಆರಂಭಿಸಿ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದ್ದು , ರಿಲಯನ್ಸ್ ಸೌತ್ ಇಂಡಿಯಾದ ನೆಟ್ ಪ್ಲೇ ಬ್ರಾಂಡ್ ನ ಡ್ರೆಸ್ಸೆಸ್ ತಯಾರಕರಾಗಿದ್ದಾರೆ.

ಇದರೊಟ್ಟಿಗೆ ಕ್ರಿಕೆಟ್ ಮೇಲಿರುವ ಪ್ರೀತಿಯಿಂದ ಸಿನಿಮಾ , ಸೀರಿಯಲ್ ಸೆಲೆಬ್ರಿಟಿಗಳ ಕ್ರಿಕೆಟ್ ತಂಡವನ್ನ ಖರೀದಿಸುವುದರ ಜೊತೆಗೆ ತಾವು ತಂಡವನ್ನು ಮುನ್ನಡೆಸಿಕೊಂಡು ಸಾಗಿದ್ದಾರೆ. ಇನ್ನು ಈ ತಂಡದ ನಾಯಕನಾಗಿ ಜಿಗರ್ ಥಂಡ ಚಿತ್ರದ ಪ್ರತಿಭಾನ್ವಿತ ನಟ , ಹೋಟೆಲ್ ಉದ್ಯಮಿ , ಅನುಭವಿ ಆಟಗಾರ ಆರ್. ಕೆ. ರಾಹುಲ್ ಸಾರಥ್ಯ ವಹಿಸಿಕೊಂಡು , ತಂಡದ ಆಟಗಾರರಿಗೆ ಕ್ರಿಕೆಟ್ ಬಗ್ಗೆ ತೊರಬೇಕಾಗಿರುವ ಶಿಸ್ತಿನ ಜೊತೆ ಪಂದ್ಯಗಳನ್ನು ಗೆಲ್ಲುವ ಮಾರ್ಗಸೂಚಿಯನ್ನು ಹೇಳಿಕೊಡುತ್ತಿದ್ದಾರೆ.

ಇನ್ನು ಅನುಭವಿ ಯುವ ಪ್ರತಿಭೆ ಭಾಗ್ಯರಾಜ್ ಈ ತಂಡಕ್ಕೆ ವಿಶೇಷ ತರಬೇತಿದಾರರಾಗಿ ಕಟ್ಟು ನಿಟ್ಟಿನ ತಾಲೀಮು ನೀಡುತ್ತಿದ್ದಾರೆ. ಹಾಗೆಯೇ ತಂಡದ ಮೇಲ್ವಿಚಾರಣೆಯನ್ನು ಜಿ.ಕೆ .ಮಂಜು ವಹಿಸಿಕೊಂಡು, ಮಾಲೀಕರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇನ್ನು ನೆಟ್ ಪ್ರಾಕ್ಟೀಸ್ ಹಾಗೂ ತಂಡಗಳ ಜೊತೆ ಮ್ಯಾಚ್ ಆಡುವ ಮೂಲಕ ಬಲಿಷ್ಠ ತಂಡವಾಗಿ ಕ್ರಿಕೆಟ್ ನಕ್ಷತ್ರ ತಂಡ ಹೊರಬರುತ್ತಿದೆ. ಇನ್ನು ತಂಡದ ಮಾಲೀಕರಾದ ನಕ್ಷತ್ರ ಮಂಜುನಾಥ್ ತಮ್ಮ ಮಾತಿನ ಚಾಣಾಕ್ಷತನದಿಂದ ಆಟಗಾರರನ್ನ ಹುರಿದುಂಬಿಸುತ್ತಿರುವುದು ಮತ್ತೊಂದು ವಿಶೇಷ.

ಕ್ರಿಕೆಟ್ ನಕ್ಷತ್ರ ತಂಡದ ಆಟಗಾರರು…
1. ನಕ್ಷತ್ರ ಮಂಜುನಾಥ್ (ಓನರ್)
2.ಆರ್. ಕೆ. ರಾಹುಲ್ – (ನಾಯಕ)
3. ಅಭಿಷೇಕ್
4. ಪವನ್ ಭಟ್
5. ಕರಣ್ ಸಿದ್ದು
6. ವಿವಾನ್
7. ಯದು
8. ವರುಣ್ ಶ್ರೀನಿವಾಸ್
9. ರಕ್ಷಿತ್ ಡಿ
10. ಗಣೇಶ್ ಗೌಡ
11. ವೇದಾಂತಿ
12. ವಿನಯ್ ಕಶ್ಯಪ್ ಸಿಂಹ
13. ಎಸ್. ಜಗದೀಶ್

ಕೋಚರ್ : ಭಾಗ್ಯರಾಜ್
ಮೆಂಟರ್ : ಜಿ.ಕೆ . ಮಂಜು

ಇದೇ ಮೊದಲ ಬಾರಿಗೆ ಹೊರದೇಶ ಕೊಲಂಬೊ ಶ್ರೀಲಂಕಾದಲ್ಲಿ ಮಾರ್ಚ್ 20 ರಿಂದ 27ರವರೆಗೆ ಕ್ರಿಕೆಟ್ ಮ್ಯಾಚ್ ಗಳು ನಡೆಯುತ್ತಿದ್ದು , ಈ ಬಾರಿಯ ಟಿಪಿಎಲ್ ಸೀಸನ್ 4ರಲ್ಲಿ ಒಟ್ಟು 12 ತಂಡಗಳು ಭಾಗಿಯಾಗುತ್ತಿದೆ.

12 ತಂಡಗಳು
1.ಕ್ರಿಕೆಟ್ ನಕ್ಷತ್ರ (ನಕ್ಷತ್ರ ಮಂಜುನಾಥ್-ಓನರ್, ಆರ್ ಕೆ ರಾಹುಲ್- ನಾಯಕ)
2. MR ಪ್ಯಾಂಥರ್ಸ್ (ಮಿಥುನ್ ರೆಡ್ಡಿ-ಓನರ್, ಡಾರ್ಲಿಂಗ್ ಕೃಷ್ಣ-ನಾಯಕ
3. GLR ವಾರಿಯರ್ಸ್ ( ರಾಜೇಶ್ ಎಲ್-ಓನರ್-ರಾಜೇಶ್ ಬಿಜಿ-ಕೋಓನರ್-ಲೂಸ್ ಮಾದ ಯೋಗಿ-ನಾಯಕ)
4. ಲಿಯೋ ಲೈಫ್ ಸೇವಿಯರ್ ಪ್ರ(ಸನ್ನ.ವಿ-ಓನರ್-ವಿನೋ ಜೋಸ್-ಕೋಓನರ್-ಜೆ.ಕೆ-ನಾಯಕ)
5. MM ವೆಂಚರ್ಸ್ (ಮಂಜುನಾಥ್ ನಾಗಯ್ಯ-ಓನರ್, ಅಭಿ-ನಾಯಕ)
6. RR ವಾರಿಯರ್ಸ್ (ಮಹೇಶ್ ಕೆ ಗೌಡ-ಓನರ್, ರಘು ಭಟ್-ಕೋ ಓನರ್, ಪ್ರತಾಪ್ ನಾರಾಯಣ್-ನಾಯಕ)
7. AVR ಟಸ್ಕರ್ (ಅರವಿಂದ್ ವೆಂಕಟೇಶ್ ರೆಡ್ಡಿ-ಓನರ್- ದಿಗಂತ್- ಕೋಓನರ್-ಅಲೋಕ್ ನಂದ ಶ್ರೀನಿವಾಸ್-ನಾಯಕ)
8. ದಿ ಬುಲ್ ಸ್ವಾಡ್ (ಮೋನಿಶ್-ಓನರ್, ಪ್ರಜ್ವಲ್ ಕೆ-ಕೋ ಓನರ್, ಶರತ್ ಪದ್ಮಾನಾಭನ್-ನಾಯಕ)
9. ಯುಮಿ ವೆಂಚರ್ಸ್ (ಕುಶಾಲ್ ಗೌಡ-ಓನರ್, ಅರ್ಜುನ್ ಯೋಗಿ-ನಾಯಕ)
10. ಅಶ್ವಸೂರ್ಯ ರೈಡರ್ಸ್ (ರಂಜಿತ್ ಕುಮಾರ್-ಓನರ್, ಜಗದೀಶ್ ಆರ್ ಚಂದ್ರ-ಕೋಓನರ್, ಹರ್ಷ ಸಿಎಂ ಗೌಡ-ನಾಯಕ)
11. DS ಮ್ಯಾಕ್ಸ್ ಲಯನ್ಸ್ (ರಾಜುಗೌಡ ಓನರ್- ಮಣಿಕಂಠ್ ನಾಯಕ್ ಕೋಓನರ್- ತರುಣ್ ಸುಧೀರ್-ನಾಯಕ)
12. ಪಿಂಕ್ ಗೋಲ್ಡ್ ಪೈಲ್ವಾನ್ಸ್ (ಭರತ್-ಓನರ್, ದೀಕ್ಷಿತ್ ಶೆಟ್ಟಿ-ನಾಯಕ)

Visited 1 times, 1 visit(s) today
error: Content is protected !!