ಸ್ನೇಹ… ಪ್ರೀತಿ… ಪಜೀತಿ… “Congratulations ಬ್ರದರ್” (ಚಿತ್ರವಿಮರ್ಶೆ-ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : Congratulations ಬ್ರದರ್
ನಿರ್ದೇಶಕ : ಪ್ರತಾಪ್ ಗಂಧರ್ವ
ನಿರ್ಮಾಪಕ : ಪ್ರಶಾಂತ್ ಕಲ್ಲೂರ್
ಕ್ರಿಯೇಟಿವ್ ಹೆಡ್ : ಹರಿ ಸಂತೋಷ್
ಸಂಗೀತ : ಧ್ರುವ್ , ಸೂರಜ್
ಛಾಯಾಗ್ರಹಣ : ಗುರುಪ್ರಸಾದ್
ತಾರಾಗಣ : ರಕ್ಷಿತ್ ನಾಗ್, ಸಂಜನದಾಸ್, ಅನೂಷ, ಶಶಿಕುಮಾರ್ , ರಘು ರಾಮನಕೊಪ್ಪ , ರಕ್ಷಿತ್ ಕಾಪು, ಸುದರ್ಶನ್, ಚೇತನ್ ದುರ್ಗ ಹಾಗೂ ಮುಂತಾದವರು…
ಹೊಸ ಜನರೇಶನ್ ನ ಆಲೋಚನೆ , ಲೈಫ್ ಸ್ಟೈಲ್ , ಫುಡ್ , ಡ್ರೆಸ್ ಕೋಡ್ ಎಲ್ಲವೂ ಬದಲಾವಣೆ ಆಗಿ ಸಾಗುತ್ತಾ ಹೋಗುತಿದೆ. ಆದರೆ ನಮ್ಮತನ , ನಡೆ-ನುಡಿಯ ಮೂಲ ಒಂದಲ್ಲ ಒಂದು ರೀತಿ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಾ ಇರುತ್ತದೆ. ಅಂತದ್ದೇ ಒಂದು ಯೂತ್ ಕಂಟೆಂಟ್ ನಲ್ಲಿ ಒಂಟಿತನದ ನಡುವೆ ಗೆಳೆಯರ ಒಡನಾಟ , ಒತ್ತಡದ ಕೆಲಸ , ಗೆಳತಿಯರ ಸ್ನೇಹ , ದೃಢ ನಿರ್ಧಾರ , ತಂದೆ ಮಗನ ಬಾಂಧವ್ಯ , ಸಂಬಂಧಗಳ ಸುಳಿಯ ಸುತ್ತ ಪ್ರೀತಿಯ ಮನಸುಗಳ ತಲ್ಲಣ , ಹೀಗೆ ಒಂದಷ್ಟು ತರುಣ ತರುಣಿಯರ ತುಂಟಾಟ , ಕಿತ್ತಾಟ , ಪ್ರೀತಿಯ ಪರದಾಟದ ಸೂಕ್ಷ್ಮತೆಯನ್ನು ಬಹಳ ಲವಲವಿಕೆಯಿಂದ ಪ್ರೇಕ್ಷಕರ ಮುಂದೆ ತಂದಿರುವಂತಹ ಪ್ರೀತಿಯಲ್ಲಿ ಆಫರ್ ಪಜೀತಿಯ ಚಿತ್ರ “Congratulations ಬ್ರದರ್”.
ಎಂಏನ್ಸಿ ಯ ಬೌನ್ಸ್ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುವ ರಕ್ಷಿ (ರಕ್ಷಿತ್ ನಾಗ) ತನ್ನೊಟ್ಟಿಗೆ ಕೆಲಸ ಮಾಡುವ ಚೇತನ್ , ಪಾಂಡು, ದಯಾ , ನಿಶಾ ಹಾಗೂ ಉಳಿದ ಗೆಳೆಯರೊಟ್ಟಿಗೆ ಕೆಲಸ ಮಾಡುತ್ತಾನೆ. ತನ್ನ ತಾಯಿ ಸಾವಿಗೆ ತಂದೆ (ಶಶಿಕುಮಾರ್) ಕಾರಣ ಎಂದುಕೊಂಡು ಪ್ರೀತಿಸುವ ತಂದೆಯಿಂದ ದೂರನೇ ಉಳಿದಿರುತ್ತಾನೆ.
ಇನ್ನೂ ತನ್ನ ಗೆಳೆಯರೊಟ್ಟಿಗೆ ಜಾಲಿ , ಪಾರ್ಟಿ ಮೂಡಲ್ಲಿ ಕೆಲಸ ಮಾಡುತ್ತಾ ಸಾಗುವ ರಕ್ಷಿತ್ ಕೆಲಸ ಮಾಡುವ ಕಂಪನಿಗೆ ಮುದ್ದಾದ ಚೆಲುವೆ ಸಿರಿ (ಅನುಷಾ) ಎಂಟ್ರಿ ಕೊಡ್ತಾಳೆ. ಎಲ್ಲಾ ಹುಡುಗರ ಕಣ್ಣು ಸಿರಿ ಮೇಲೆ ಬೀಳುತ್ತೆ. ಯಾರ ಕಡೆಯೂ ಗಮನ ಕೊಡದ ಸಿರಿ ಕಂಪನಿಯ ಸಹೋದ್ಯೋಗಿ ರಕ್ಷಿತ್ ನಡುವಳಿಕೆ ಕಂಡು ಅವನ ಸಂಪರ್ಕ, ಸ್ನೇಹ ಪಡೆಯುತ್ತಾಳೆ. ರಕ್ಷಿತ್ ತನ್ನ ಪ್ರೀತಿ ನಿವೇದನೆ ಮಾಡುವ ಹೊತ್ತಲ್ಲಿ ಸಿರಿ ಒಂದು ಕಂಡೀಶನ್ ಹಾಕುತ್ತಾಳೆ.

ಅದುವೇ ತನ್ನ ತಂಗಿ ನಿಶಾ (ಸಂಜನ ದಾಸ್) ನಿನ್ನನ್ನು ಒಪ್ಪಬೇಕು , ನಾವಿಬ್ಬರೂ ಬಾಲ್ಯದಿಂದಲೂ ಒಟ್ಟಿಗೆ ಬೆಳೆದು , ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವಿಬ್ಬರೂ ಬದುಕಿನಲ್ಲೂ ಮುಂದೆ ಬೇರೆ ಆಗಬಾರದೆಂದು ಒಬ್ಬರನ್ನೇ ಪ್ರೀತಿಸಿ ಮದುವೆ ಆಗಬೇಕು ಎಂದು ನಿರ್ಧಾರ ಮಾಡಿದ್ದೇವೆ ಅದಕ್ಕೆ ಒಪ್ಪಿಗೆ ನೀಡಬೇಕೆಂದು ತಂಗಿಯನ್ನ ಪರಿಚಯಿಸುತ್ತಾಳೆ. ತನ್ನ ಪ್ರೇಯಸಿಯ ಮಾತಿಗೆ ಕಟ್ಟಿ ಬಿದ್ದು ಇಬ್ಬರ ಹುಡುಗಿಯ ಜೊತೆ ರಕ್ಷಿತ್ ಒಟ್ಟಿಗೆ ಇರಲು ಒಪ್ಪುತ್ತಾನೆ. ಮುಂದೆ ಎದುರಾಗುವ ರೋಚಕ ತಿರುವುಗಳು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪುತ್ತದೆ. ಅದು ಏನು… ಇಬ್ಬರ ಜೊತೆ ಮದುವೆನಾ… ಯಾರ ಪ್ರೀತಿ ಪಡಿತಾನೆ…ಸಂಬಂಧ ಕಥೆ ಏನು… ಎಂಬುವುದಕ್ಕೆ ಉತ್ತರ ತೆರೆಯ ಮೇಲೆ ನೋಡಬೇಕು.
ಇದೊಂದು ವಿಭಿನ್ನ ಕಥಾನಕ ಚಿತ್ರವಾಗಿದ್ದು, ಕ್ರಿಯೇಟಿವ್ ಹೆಡ್ , ರೈಟರ್ , ಹರಿ ಸಂತೋಷ , ನಟ ರಕ್ಷಿತ್ ನಾಗ ಹಾಗೂ ನಿರ್ದೇಶಕ ಪ್ರತಾಪ್ ಗಂಧರ್ವ ಜೊತೆಗೂಡಿ ಈ ರೀತಿಯೂ ಸ್ನೇಹ , ಪ್ರೀತಿ , ದೃಢ ನಿರ್ಧಾರದ ಸುತ್ತ ಇಬ್ಬರೂ ಹುಡುಗಿಯರು ಒಬ್ಬನನ್ನೇ ಪ್ರೀತಿಸಿ , ಮದುವೆಯಾಗುವ ಆಲೋಚನೆಯ ಕಥೆ ಗಮನ ಸೆಳೆಯುತ್ತದೆ.
ಯುವ ಪೀಳಿಗೆಯ ಮನಸ್ಥಿತಿ , ಆಲೋಚನೆಯ ಜೊತೆಗೆ ಜಾಗೃತಿಯ ಅಂಶವನ್ನು ಸಮರ್ಥವಾಗಿ ತುಂಬಿದ್ದಾರೆ. ಇನ್ನು ಕೆಲವೊಂದು ಸಂಭಾಷಣೆ ಅತಿರೇಕ ಅನಿಸಿದರು , ಪ್ರಸ್ತುತ ಕಾಲಘಟ್ಟಕ್ಕೆ ಹೊಂದಿಕೊಂಡಿದೆ. ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಬಹುದಿತ್ತು. ನಿರ್ದೇಶಕರ ಮೊದಲ ಪ್ರಯತ್ನದಲ್ಲಿ ಗಮನ ಸೆಳೆದಿದ್ದಾರೆ. ನಿರ್ಮಾಪಕರ ಕರ್ಚು ವೆಚ್ಚ ತೆರೆಯ ಮೇಲೆ ಕಾಣುತ್ತದೆ. ಸಂಗೀತ ಚಿತ್ರಕ್ಕೆ ಪೂರಕವಾಗಿದ್ದು , ಹಿನ್ನೆಲೆ ಸಂಗೀತ ಹೆಚ್ಚು ಗಮನ ಸೆಳೆಯುತ್ತದೆ.
ಛಾಯಾಗ್ರಹಣ , ಸಂಕಲನ ಸೇರಿದಂತೆ ತಾಂತ್ರಿಕವಾಗಿ ತಂಡದ ಪ್ರಯತ್ನ ಉತ್ತಮವಾಗಿದೆ. ಇನ್ನು ನಾಯಕನಾಗಿ ಅಭಿನಯಿಸಿರುವ ರಕ್ಷಿತ್ ನಾಗ್ ಪ್ರಥಮ ಚಿತ್ರದಲ್ಲಿ ತಮಗೆ ಸಿಕ್ಕಿರುವ ಪಾತ್ರಕ್ಕೆ ನ್ಯಾಯ ನೀಡುವವುದರ ಜೊತೆಗೆ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಇಬ್ಬರು ಹುಡುಗಿಯರನ್ನ ನಿಭಾಯಿಸುವ ಪಾತ್ರದ ಜೊತೆಗೆ ಎಮೋಷನ್ ಗೂ ಜೀವ ತುಂಬಿದ್ದಾರೆ. ನಟಿಯ ಸಂಜನಾ ದಾಸ್ ಬಹಳ ಬೋಲ್ಡ್ ಅಂಡ್ ಡೇರಿಂಗ್ ಪಾತ್ರದಲ್ಲಿ ಮಿಂಚಿದ್ದಾರೆ.
ಇನ್ನೋರ್ವ ನಟಿ ಅನುಷಾ ಮುದ್ದಾಗಿ ಕಾಣುತ್ತಾ ಮುಗುಳ್ನಗೆಯಲ್ಲಿ ಪಾತ್ರದ ಮೂಲಕ ಎಲ್ಲರ ಮನಸ್ಸಿಗೆ ಇಷ್ಟವಾಗುತ್ತಾರೆ. ಹಿರಿಯ ನಟ ಶಶಿಕುಮಾರ್ ಪಾತ್ರ ಇನ್ನು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು, ನಾಯಕಿಯರ ತಂದೆ ತಾಯಿಯ ಪಾತ್ರದಲ್ಲಿ ಕೃಷ್ಣ ಭಟ್ , ಸ್ವಾತಿ ಗುರುದಥ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಇನ್ನು ಗೆಳೆಯರ ಪಾತ್ರಧಾರಿಗಳು ಹಾಗೂ ರಘು ರಾಮನ ಕೊಪ್ಪ ಪಾತ್ರ ಚಿತ್ರದ ಓಟಕ್ಕೆ ಪುಷ್ಟಿ ನೀಡಿದೆ. ಒಟ್ಟಾರೆ, ಎಂಗರ್ ಜನರೇಶನ್ ಗೆ ಬಹಳ ಬೇಗ ಇಷ್ಟವಾಗುವಂಥ ಈ ಚಿತ್ರ ಮನೋರಂಜನೆಯ ದೃಷ್ಟಿಯಿಂದ ಎಲ್ಲರೂ ಕೂತು ಒಮ್ಮೆ ನೋಡಬಹುದು.