Cini NewsSandalwood

ಅಭಿಮಾನಿಯಿಂದ ರಾಕಿ ಕಟ್ಟಿಸಿಕೊಂಡ ಚಿರಂಜೀವಿ…ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ನಟ

Spread the love

ತೆರೆಮೇಲೆ ಮಾತ್ರವಲ್ಲದೆ ತೆರೆಹಿಂದೆಯೂ ಮೆಗಾ ಸ್ಟಾರ್ ಚಿರಂಜೀವಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ರಾಜೇಶ್ವರಿ ಎಂಬುವವರು ಚಿರು ಅವರ ಡೈಹಾರ್ಡ್ ಫ್ಯಾನ್. ಮೆಗಾ ಸ್ಟಾರ್ ಮೇಲಿನ ಅಭಿಮಾನದಿಂದಾಗಿ ಸುಮಾರು 300 ಕಿಲೋಮೀಟರ್ ಸೈಕಲ್ ತುಳಿದು‌ ತನ್ನಷ್ಟಿದ ತಾರೆಯನ್ನು ಭೇಟಿಯಾಗಿ ಖುಷಿಪಟ್ಟಿದ್ದಾರೆ.

ರಾಜೇಶ್ವರಿಯವರು ಅದೋನಿಯವರು. ಅದೋನಿಯಿಂದ ಹೈದ್ರಾಬಾದ್ ಗೆ ಸೈಕಲ್ ನಲ್ಲಿ ಆಗಮಿಸಿದ್ದಾರೆ. ಬರೋಬ್ಬರಿ 300‌ಕಿಲೋಮೀಟರ್ ಸೈಕಲ್ ಸವಾರಿಯಲ್ಲಿ ಬಂದ ರಾಜೇಶ್ವರಿಯವರನ್ನು ಅಷ್ಟೇ ಪ್ರೀತಿಯಿಂದ ಚಿರಂಜೀವಿ ತಮ್ಮ ಮನೆಗೆ ಸ್ವಾಗತಿಸಿದ್ದಾರೆ. ಅಭಿಮಾನಿ ರಾಜೇಶ್ವರಿ ಅವರ ಅಭಿಮಾನ ಕಂಡು ಚಿರಂಜೀವಿಯೇ ಪುಳಕಿತರಾಗಿದ್ದಾರೆ. ತನ್ನ‌ ಇಷ್ಟದ ಅಭಿಮಾನಿಯಿಂದ ರಾಕಿ ಕಟ್ಟಿಸಿಕೊಂಡ ಮೆಗಾ ಸ್ಟಾರ್ ಅಣ್ಣನ ಸ್ಥಾನ ನೀಡಿದ್ದಾರೆ.

ರಾಜೇಶ್ವರಿಯಂತಹ ಅಪರೂಪದ ಅಭಿಮಾನಕ್ಕೆ ಚಿರಂಜೀವಿ ಚಿಕ್ಕ ಕಾಣಿಕೆ ಕೂಡ ನೀಡಿದ್ದಾರೆ. ರಾಜೇಶ್ವರಿಗೆ ಸೀರೆ ಕೊಟ್ಟ ಸತ್ಕರಿಸಿದ್ದಾರೆ. ಇನ್ನೊಂದು ಹೆಜ್ಜೆ ಮುಂದೆ ಇಟ್ಟ ಚಿರಂಜೀವಿ ರಾಜೇಶ್ವರಿ ಅವರ ಇಬ್ಬರ ಮಕ್ಕಳ ಶಿಕ್ಷಣದ ಜವಾಬ್ದಾರಿ ಕೂಡ ಹೊತ್ತು ಕೊಂಡಿದ್ದಾರೆ. ಇದಪ್ಪ ಅಭಿಮಾನದ ಪರಾಕಾಷ್ಠೆ. ಒಬ್ಬ ಅಭಿಮಾನಿಗೆ ಸಿಗಬೇಕಾದ ಪ್ರೀತಿ ಎಂದು ಫ್ಯಾನ್ಸ್ ಕೊಂಡಾಡುತ್ತಿದ್ದಾರೆ.

Visited 1 times, 1 visit(s) today
error: Content is protected !!